India
  • search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮರನಾಥ ಯಾತ್ರೆ ಸುಲಭ: ಶ್ರೀನಗರದಿಂದ ಬಾಬಾ ಬರ್ಫಾನಿಗೆ ಹೆಲಿಕಾಪ್ಟರ್ ಸೇವೆ ಆರಂಭ

|
Google Oneindia Kannada News

ಅಮರನಾಥ ಜೂನ್ 09: ಅಮರನಾಥ ದರ್ಶನಕ್ಕೆ ಬರುವ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿ. ಚಾರ್‌ಧಾಮ್ ಯಾತ್ರಾರ್ಥಿಗಳು ಬಾಬಾ ಬರ್ಫಾನಿಯನ್ನು ತಲುಪಲು ಮೊದಲ ಬಾರಿಗೆ ಹೆಲಿಕಾಪ್ಟರ್‌ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಶ್ರೀನಗರದಿಂದ ಯಾತ್ರಾರ್ಥಿಗಳು ನೇರ ಹೆಲಿಕಾಪ್ಟರ್ ಸೇವೆಯನ್ನು ಪಡೆಯಬಹುದು. ಶ್ರೀನಗರದಿಂದ ಪಂಚತಾರ್ನಿಗೆ ನೇರವಾಗಿ ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸುವಂತೆ ಗೃಹ ಸಚಿವಾಲಯವು ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ನಿರ್ದೇಶನ ನೀಡಿದೆ.

ಇದು 3500 ಮೀಟರ್ ಎತ್ತರದಲ್ಲಿರುವ ಅಂತಿಮ ನಿಲ್ದಾಣವಾಗಿದೆ. ಅಲ್ಲಿಂದ ಆರು ಕಿಲೋಮೀಟರ್ ಪ್ರಯಾಣದಿಂದ ಯಾತ್ರಿಕರನ್ನು ಪವಿತ್ರ ಸ್ಥಳ ಅಮರನಾಥ ದರ್ಶನ ಪಡೆಯಬಹುದು. ಅಮರನಾಥ ಯಾತ್ರೆಯ ಮಾರ್ಗದಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುದ್ದಿಸಂಸ್ಥೆಯ ಮೂಲಗಳು ತಿಳಿಸಿವೆ.

ಪಂಚತಾರ್ನಿಗೆ ಹೆಲಿಕಾಪ್ಟರ್ ಸೇವೆ

ಪಂಚತಾರ್ನಿಗೆ ಹೆಲಿಕಾಪ್ಟರ್ ಸೇವೆ

ಯಾತ್ರಿಗಳಿಗೆ ಹೆಲಿಕಾಪ್ಟರ್ ಸೌಲಭ್ಯ ಬಾಲ್ಟಾಲ್ ಮತ್ತು ಪಹಲ್ಗಾಮ್ (ಅಮರನಾಥ ದೇವಸ್ಥಾನವನ್ನು ತಲುಪಲು ಎರಡು ಮಾರ್ಗ)ವರೆಗೆ ಲಭ್ಯವಿತ್ತು. ಅಲ್ಲಿಂದ ಯಾತ್ರಿಕರು ನಡೆದುಕೊಂಡು ಹೋಗುತ್ತಾರೆ ಅಥವಾ ಕುದುರೆ ಮತ್ತು ಪಲ್ಲಕ್ಕಿಯ ಸೌಲಭ್ಯವನ್ನು ತೆಗೆದುಕೊಳ್ಳುತ್ತಾರೆ. ಪ್ರಸ್ತುತ ಬಲ್ಟಾಲ್ ಮತ್ತು ಪಹಲ್ಗಾಮ್‌ನಿಂದ ಪಂಚತಾರ್ನಿಗೆ ಹೆಲಿಕಾಪ್ಟರ್ ಸೇವೆ ಲಭ್ಯವಿದೆ.

ರಸ್ತೆ ಮಾರ್ಗದಲ್ಲಿ ಜನ ಸಂದಣಿ

ರಸ್ತೆ ಮಾರ್ಗದಲ್ಲಿ ಜನ ಸಂದಣಿ

ನೈಸರ್ಗಿಕವಾಗಿ ರೂಪುಗೊಂಡ ಶಿವಲಿಂಗವನ್ನು ನೋಡಲು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಭಕ್ತರು ಅಮರನಾಥವನ್ನು ತಲುಪುತ್ತಾರೆ. ಈ ಬಾರಿಯೂ ಯಾತ್ರೆಗೆ ಅಪಾರ ಜನಸ್ತೋಮ ಸೇರುತ್ತಿದೆ. ಹಾಗಾಗಿ ಶ್ರೀನಗರದಿಂದಲೂ ಪ್ರಯಾಣಿಕರಿಗೆ ಹೆಲಿಕಾಪ್ಟರ್ ಸೇವೆ ಒದಗಿಸಬಹುದು ಎಂದು ಕಳೆದ ವಾರ ಸಭೆ ನಡೆಸಲಾಗಿತ್ತು. ಇದಕ್ಕಾಗಿ ಹೊಸ ಮಾರ್ಗವನ್ನು ಸೇರಿಸಲಾಗುತ್ತಿದ್ದು, ಇದು ಬುದ್ಗಾಮ್‌ನಿಂದ ಶ್ರೀನಗರ ವಿಮಾನ ನಿಲ್ದಾಣದ ಬಳಿ ಪಂಚತಾರ್ನಿವರೆಗೆ ಇರಲಿದೆ. ಇದರಿಂದ ಕೇವಲ ಒಂದೇ ದಿನದಲ್ಲಿ ಭಕ್ತರು ಅಮರನಾಥನ ದರ್ಶನ ಪಡೆಯಬಹುದಾಗಿದೆ.

ಯಾತ್ರಾರ್ಥಿಗಳ ಸಮಯ ಉಳಿಸಲು ಸುಲಭ ಮಾರ್ಗ

ಯಾತ್ರಾರ್ಥಿಗಳ ಸಮಯ ಉಳಿಸಲು ಸುಲಭ ಮಾರ್ಗ

ಪಹಲ್ಗಾಮ್‌ನಿಂದ ಅಮರನಾಥ ದೇವಾಲಯಕ್ಕೆ 46 ಕಿಲೋಮೀಟರ್ ದೂರದ ಮಾರ್ಗವಿದೆ. ಇದನ್ನು ಟ್ರೆಕ್ಕಿಂಗ್, ಪಲ್ಲಕ್ಕಿಗಳು ಅಥವಾ ಹೆಲಿಕಾಪ್ಟರ್ ಮೂಲಕವೂ ಮಾಡಬಹುದು. ಶ್ರೀನಗರದಿಂದ ಪಂಚತಾರ್ನಿಗೆ ಹೆಲಿಕಾಪ್ಟರ್ ಸೇವೆಯನ್ನು ಪರಿಚಯಿಸುವುದರಿಂದ ಈ ಸೌಲಭ್ಯವನ್ನು ಪಡೆಯಲು ಪಹಲ್ಗಾಮ್ ಮತ್ತು ಬಾಲ್ಟಾಲ್‌ಗೆ ಹೋಗುವುದನ್ನು ತಪ್ಪಿಸಲು ಬಯಸುವ ಯಾತ್ರಾರ್ಥಿಗಳ ಸಮಯವನ್ನು ಇದು ಕಡಿಮೆ ಮಾಡುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

43 ದಿನಗಳ ಕಾಲ ಹೆಲಿಕಾಪ್ಟರ್ ಸೇವೆ

43 ದಿನಗಳ ಕಾಲ ಹೆಲಿಕಾಪ್ಟರ್ ಸೇವೆ

ಅಮರನಾಥ ಗುಹೆಯ ತಪ್ಪಲಿನಲ್ಲಿ ಹೆಲಿಕಾಪ್ಟರ್ ಇಳಿಸಲು ಸಾಧ್ಯವೇ ಎಂಬುದನ್ನು ಬದಲಾಯಿಸುವಂತೆ ಅಮರನಾಥ ದೇಗುಲ ಮಂಡಳಿಯನ್ನು (ಎಸ್‌ಎಎಸ್‌ಬಿ) ಕೇಳಲಾಗಿದೆ. ಪ್ರಸ್ತುತ ಅಮರನಾಥ ಗುಹೆಯ ಬಳಿ ವಿವಿಐಪಿಗಳನ್ನು ಹೊತ್ತೊಯ್ಯುವ ಹೆಲಿಕಾಪ್ಟರ್‌ಗಳು ಮಾತ್ರ ಇಳಿಯುತ್ತವೆ. ಸಾಮಾನ್ಯ ಪ್ರಯಾಣಿಕರಿಗೆ ಈ ಸೇವೆ ಪ್ರಾರಂಭವಾದಾಗ ಇಲ್ಲಿಗೆ ಕೇವಲ ಒಂದು ದಿನದಲ್ಲಿ, ಭಕ್ತರು ಅಮರನಾಥನ ದರ್ಶನಕ್ಕೆ ಸಾಧ್ಯವಾಗುತ್ತದೆ. ಈ ವರ್ಷ ಜೂನ್ 30 ರಿಂದ ಯಾತ್ರೆ ಆರಂಭವಾಗುತ್ತಿದ್ದು, 43 ದಿನಗಳ ಕಾಲ ನಡೆಯಲಿದೆ.

English summary
Now it will be easy to see Baba Barfani because the passengers are going to get helicopter service till Amarnath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X