ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರಿಗೆ ಸಹಾಯ; ದೇವಿಂದರ್ ಸಿಂಗ್ ಮನೆ ಮೇಲೆ ಎನ್‌ಐಎ ದಾಳಿ

|
Google Oneindia Kannada News

ಶ್ರೀನಗರ, ಜನವರಿ 23 : ರಾಷ್ಟ್ರೀಯ ತನಿಖಾ ಸಂಸ್ಥೆ ದೇವಿಂದರ್ ಸಿಂಗ್ ಮನೆ ಮೇಲೆ ದಾಳಿ ನಡೆಸಿದೆ. ಉಗ್ರರಿಗೆ ನೆರವು ನೀಡಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಬಂಧಿಸಲಾಗಿದ್ದು, ಎನ್‌ಐಎ ವಿಚಾರಣೆ ನಡೆಸುತ್ತಿದೆ.

ಶ್ರೀನಗರದ ಇಂದಿರಾ ನಗರದಲ್ಲಿರುವ ದೇವಿಂದರ್ ಸಿಂಗ್ ಮನೆ ಮೇಲೆ ಎನ್ ದಾಳಿ ನಡೆಸಿದೆ. ಎರಡು ರೈಫಲ್‌ಗಳು ಮನೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದೇವಿಂದರ್‌ ಸಿಂಗ್‌ನನ್ನು ಜಮ್ಮುವಿಗೆ ಕರೆದುಕೊಂಡು ಹೋಗಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ದೇವಿಂದರ್ ಸಿಂಗ್ ರಾಷ್ಟ್ರಪತಿ ಪದಕ ಪಡೆದಿರಲಿಲ್ಲದೇವಿಂದರ್ ಸಿಂಗ್ ರಾಷ್ಟ್ರಪತಿ ಪದಕ ಪಡೆದಿರಲಿಲ್ಲ

ದೇವಿಂದರ್‌ ಸಿಂಗ್ 2018ರ ಸ್ವಾತಂತ್ರ ದಿನಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರದಿಂದ ಪದಕವೊಂದನ್ನು ಪಡೆದಿದ್ದರು. ಸೋಮವಾರ ಈ ಪದಕ ಮತ್ತು ಪ್ರಮಾಣ ಪತ್ರವನ್ನು ಸರ್ಕಾರ ವಾಪಸ್ ಪಡೆದಿತ್ತು.

ದೇವಿಂದರ್ ಸಿಂಗ್ ಬಳಿ ಜಪ್ತಿಯಾಗಿದ್ದು ಟೂತ್ ಬ್ರಷ್, ಅತ್ತರ್, ಎಕೆ47.. ದೇವಿಂದರ್ ಸಿಂಗ್ ಬಳಿ ಜಪ್ತಿಯಾಗಿದ್ದು ಟೂತ್ ಬ್ರಷ್, ಅತ್ತರ್, ಎಕೆ47..

Davinder Singh

ಎನ್ಐಎ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಸೈಯದ್ ನಾವಿದ್ ಮುಷ್ತಾಕ್, ಇರ್ಫಾನ್ ಷಫಿ ಮಿರ್ ವಿಚಾರಣೆಯನ್ನು ನಡೆಸುತ್ತಿದೆ. ಈ ಇಬ್ಬರು ಉಗ್ರರ ಜೊತೆ ತೆರಳುವಾಗ ಪೊಲೀಸರು ದೇವಿಂದರ್ ಸಿಂಗ್ ಬಂಧಿಸಿದ್ದರು.

ಉಗ್ರರ ಜತೆ ಸಿಕ್ಕಿಬಿದ್ದ ದೇವಿಂದರ್ ಸಿಂಗ್ ಯಾರು? ಅಫ್ಜಲ್ ಗುರು ಹೇಳಿದ್ದ ಸ್ಫೋಟಕ ಸಂಗತಿಉಗ್ರರ ಜತೆ ಸಿಕ್ಕಿಬಿದ್ದ ದೇವಿಂದರ್ ಸಿಂಗ್ ಯಾರು? ಅಫ್ಜಲ್ ಗುರು ಹೇಳಿದ್ದ ಸ್ಫೋಟಕ ಸಂಗತಿ

ದೇವಿಂದರ್ ಸಿಂಗ್ ಉಗ್ರರಿಂದ 12 ಲಕ್ಷ ಹಣ ಪಡೆದು ಅವರು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು ಎಂಬ ಆರೋಪವಿದೆ. ಉಗ್ರರನ್ನು ಶರಣಾಗಿಸಲು ಕರೆದುಕೊಂಡು ಹೋಗುತ್ತಿದೆ ಎಂದು ದೇವಿಂದರ್ ಸಿಂಗ್ ಹೇಳಿದ್ದರು. ಆದರೆ, ಅವರು ಉಗ್ರರಿಗೆ ಸಹಾಯ ಮಾಡುತ್ತಿದ್ದರು ಎಂಬ ಆರೋಪವಿದೆ.

ಹಿರಿಯ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ರಾಷ್ಟ್ರಪತಿ ಪದಕ ಪಡೆದಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿತ್ತು. ಕೇಂದ್ರ ಗೃಹ ಇಲಾಖೆ ಅವರಿಗೆ ಯಾವುದೇ ಪದಕ ನೀಡಿಲ್ಲ ಎಂದು ಹೇಳಿತ್ತು.

2017ರ ಆಗಸ್ಟ್ 27ರಂದು ಪುಲ್ವಾಮಾದಲ್ಲಿ ಉಗ್ರರ ಜೊತೆ ಗುಂಡಿನ ಕಾಳಗ ನಡೆದಿತ್ತು. ಇದರಲ್ಲಿ ದೇವಿಂದರ್ ಸಿಂಗ್ ಪಾಲ್ಗೊಂಡಿದ್ದರು. ಆಗ 2018ರ ಸ್ವಾತಂತ್ರ ದಿನಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅವರಿಗೆ ಪದಕವನ್ನು ನೀಡಿತ್ತು. ಅದನ್ನು ಸಹ ಈಗ ವಾಪಸ್ ಪಡೆಯಲಾಗಿದೆ.

English summary
NIA shifted suspended Jammu and Kashmir police officer Davinder Singh to Jammu. The NIA also conducted raids at the residence of Singh located at Indira Nagar in Srinagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X