ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ: ಬಾಂಬರ್‌ಗೆ ಆಶ್ರಯ ನೀಡಿದ್ದ ತಂದೆ, ಮಗಳ ಬಂಧನ

|
Google Oneindia Kannada News

ಶ್ರೀನಗರ, ಮಾರ್ಚ್ 3: ಪುಲ್ವಾಮಾ ಆತ್ಮಾಹುತಿ ದಾಳಿಗೆ ಸಂಬಂಧಿಸಿದಂತೆ ಬಾಂಬರ್‌ಗೆ ಆಶ್ರಯ ನೀಡಿದ್ದ ತಂದೆ-ಮಗಳನ್ನು ಎನ್‌ಐಎ ಬಂಧಿಸಿದೆ.

ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯಾ ಬಾಂಬರ್ ಅದಿಲ್ ಅಹ್ಮದ್ ದಾರ್ ನಿಗೆ ಆಶ್ರಯ ನೀಡಿದ್ದ ಒಬ್ಬ ಉಗ್ರನನ್ನು ಬಂಧಿಸಿದ ನಾಲ್ಕು ದಿನದ ನಂತರ ಇದೇ ಪ್ರಕರಣದಲ್ಲಿ ಇನ್ನಿಬ್ಬರನ್ನು ರಾಷ್ಟ್ರೀಯ ತನಿಖಾ ದಳ ಇಂದು ಬಂಧಿಸಿದೆ.

ಪುಲ್ವಾಮಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ.ಲೆತ್ ಪೊರಾ ಪ್ರದೇಶದಲ್ಲಿ ವಾಸಿಸುತ್ತಿದ್ದ ತಂದೆ ಹಾಗೂ ಮಗಳನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳದ ಮೂಲಗಳು ತಿಳಿಸಿವೆ.

ಲ್ವಾಮಾ ದಾಳಿ: ಮೂವರ ಬಂಧನ

ಲ್ವಾಮಾ ದಾಳಿ: ಮೂವರ ಬಂಧನ

ಈ ಪ್ರಕರಣದಲ್ಲಿ ಈವರೆಗೂ ಮೂವರನ್ನು ಬಂಧಿಸಲಾಗಿದೆ. ಫೆಬ್ರವರಿ 28 ರಂದು ಶಕಿರ್ ಬಷೀರ್ ಮಾಗ್ರೀ ಎಂಬ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಜೈಷ್-ಎ- ಮೊಹ್ಮದ್ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರೀಯನಾಗಿದ್ದ ಹಾಜಿಬಲ್ ನಿವಾಸಿ ಉಗ್ರ ಮಾಗ್ರೀಯನ್ನು 15 ದಿನಗಳ ಕಾಲ ಎನ್ ಐಎ ಕಸ್ಟಡಿಗೆ ಜಮ್ಮು- ಕಾಶ್ಮೀರದ ಎನ್ ಐಎ ವಿಶೇಷ ನ್ಯಾಯಾಲಯ ನೀಡಿದೆ.

ಪುಲ್ವಾಮಾದಲ್ಲಿ ಫರ್ನಿಚರ್ ಅಂಗಡಿ ಇಟ್ಟಿದ್ದ ಶಾಕೀರ್

ಪುಲ್ವಾಮಾದಲ್ಲಿ ಫರ್ನಿಚರ್ ಅಂಗಡಿ ಇಟ್ಟಿದ್ದ ಶಾಕೀರ್

ಪುಲ್ವಾಮಾದಲ್ಲಿ ಫರ್ನಿಚರ್ ಅಂಗಡಿ ಇಟ್ಟುಕೊಂಡಿದ್ದ ಶಾಕೀರ್ ಬಶೀರ್(22) ಪುಲ್ವಾಮಾ ದಾಳಿಯ ಸುಸೈಡ್ ಬಾಂಬರ್ ಆದಿಲ್ ಅಹ್ಮದ್ ದಾರ್ ಗೆ ಆಶ್ರಯ ಕೊಟ್ಟು, ಸಿಆರ್‌ಪಿಎಫ್ ಯೋಧರ ಕನ್ವಾಯ್ ಮೇಲೆ ದಾಳಿ ನಡೆಸಲು ಸಹಕರಿಸಿದ್ದನು. ಈ ಬಗ್ಗೆ ಮಾಹಿತಿ ತಿಳಿದ ಎನ್‍ಐಎ ಶಾಕೀರ್ ನನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿದೆ.

ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರಕ್ಕೆ

ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರಕ್ಕೆ

ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಶಾಕೀರ್ ಬಾಯಿಬಿಟ್ಟಿದ್ದು, ಸುಸೈಡ್ ಬಾಂಬರ್ ಆದಿಲ್‍ನನ್ನು ತನ್ನ ಬಳಿ ಪಾಕ್ ಉಗ್ರ ಮೊಹ್ಮದ್ ಉಮರ್ ಫಾರೂಕ್ ಕರೆತಂದಿದ್ದನು ಎಂದು ಹೇಳಿದ್ದಾನೆ. 2018ರ ಅಂತ್ಯದಿಂದ 2019ರ ಫೆ. 14ರವರೆಗೆ ಉಗ್ರರಿಗೆ ನನ್ನ ಮನೆಯಲ್ಲಿ ಜಾಗಕೊಟ್ಟಿದ್ದೆ. ಅಲ್ಲಿ ಅವರು ಐಇಡಿ ಬಾಂಬ್‍ಗಳನ್ನು ತಯಾರಿಸಿದ್ದರು. ಅದನ್ನು ಮಾರುತಿ ಇಕೋ ಕಾರಿನಲ್ಲಿ ಫಿಕ್ಸ್ ಮಾಡಲು ಅವರಿಗೆ ನಾನು ಸಹಾಯ ಮಾಡಿದ್ದೆ. ಕಾರನ್ನು ಮಾಡಿಫೈ ಮಾಡಿ ಬಾಂಬ್ ಫಿಕ್ಸ್ ಮಾಡಲು ಸಹಕರಿಸಿದ್ದೆ ಎನ್ನುವುದನ್ನ ಶಾಕೀರ್ ತಪ್ಪೊಪ್ಪಿಕೊಂಡಿದ್ದಾನೆ.

ಉಗ್ರ ಮುದಸೀರ್ ಖಾನ್ ಹತ್ಯೆ

ಉಗ್ರ ಮುದಸೀರ್ ಖಾನ್ ಹತ್ಯೆ

ಈ ದಾಳಿಯಲ್ಲಿ ಭಾಗಿಯಾಗಿದ್ದ ಮುದಸೀರ್ ಅಹ್ಮದ್ ಖಾನ್ ಹಾಗೂ ಜೆಇಎಂ ಉಗ್ರರ ಕಮಾಂಡರ್ ನನ್ನು ಭಾರತೀಯ ಭದ್ರತಾ ಪಡೆ ಮಾರ್ಚ್ 11ರಂದು ಗುಂಡಿಕ್ಕಿ ಕೊಂದಿತ್ತು. ಆ ಬಳಿಕ ಉಗ್ರ ಮೊಹ್ಮದ್ ಫಾರೂಕ್‍ನನ್ನು ಮಾರ್ಚ್ 29ರಂದು, ದಾಳಿ ಬಳಿದ ಕಾರ್ ಮಾಲೀಕ ಸಜ್ಜಿದ್ ಅಹ್ಮದ್‍ನನ್ನು ಜೂನ್ 16ರಂದು ಹಾಗೂ ಜೆಇಎಂನ ಕಾಶ್ಮೀರಿ ಕಮಾಂಡರ್ ಯಸ್ಸಿರ್ ನನ್ನು ಈ ವರ್ಷದ ಜ. 25ರಂದು ಭದ್ರತಾ ಪಡೆ ಹೊಡೆದುರುಳಿಸಿತ್ತು.

English summary
Four days after the National Investigation Agency made a major breakthrough in the Pulwama terror attack case over a year after the bombing, arresting one person who provided shelter to the suicide bomber Adil Ahmad Dar, the NIA on Tuesday arrested two more people in the case, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X