ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಬಾರಿ ಜಮ್ಮು ಕಾಶ್ಮೀರದಲ್ಲಿ ಜಿ20 ಸಭೆ

|
Google Oneindia Kannada News

ಶ್ರೀನಗರ, ಜೂ.24: ಮುಂದಿನ ಬಾರಿ ನಡೆಯುವ G-20 ರ 2023 ಸಭೆಗಳನ್ನು ಜಮ್ಮು ಮತ್ತು ಕಾಶ್ಮೀರವು ಆಯೋಜಿಸಲಿದೆ. ಜಿ-20 ವಿಶ್ವದ ಪ್ರಮುಖ ಆರ್ಥಿಕತೆಗಳನ್ನು ಒಟ್ಟುಗೂಡಿಸುವ ಪ್ರಭಾವಶಾಲಿ ಗುಂಪಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರ ಸರ್ಕಾರವು ಗುರುವಾರ ಒಟ್ಟಾರೆ ಸಮನ್ವಯಕ್ಕಾಗಿ ಐದು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಿದೆ.

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡು ಆಗಸ್ಟ್ 2019ರಲ್ಲಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಶೃಂಗಸಭೆ ಇದಾಗಿದೆ.

ಬ್ರಿಕ್ಸ್ ವೇದಿಕೆ 2022: ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶ ಬ್ರಿಕ್ಸ್ ವೇದಿಕೆ 2022: ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶ

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಜಿ 20 ಸಭೆಗಾಗಿ ಭಾರತದ ಮುಖ್ಯಸ್ಥರಾಗಿ ಆಗಿ ನೇಮಿಸಲಾಯಿತು. ಭಾರತವು ಡಿಸೆಂಬರ್ 1, 2022 ರಿಂದ G20 ಅಧ್ಯಕ್ಷತೆಯನ್ನು ವಹಿಸಲಿದೆ. 2023ರಲ್ಲಿ ಮೊದಲ ಬಾರಿಗೆ ಜಿ 20 ನಾಯಕರ ಶೃಂಗಸಭೆಯನ್ನು ಕರೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಗುರುವಾರ ಹೊರಡಿಸಲಾದ ಅಧಿಕೃತ ಆದೇಶದ ಪ್ರಕಾರ, ಕೇಂದ್ರಾಡಳಿತ ಪ್ರದೇಶದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಇದನ್ನು ಜೂನ್ 4 ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಂವಹನಕ್ಕೆ ಪ್ರತಿಕ್ರಿಯೆಯಾಗಿ ರಚಿಸಲಾಗಿದೆ.

ಅಮೆರಿಕಾ ಗುಪ್ತಚರ ವರದಿಯಲ್ಲಿ ಪ್ರಧಾನಿ ಮೋದಿ ಬಗ್ಗೆ ಪ್ರಮುಖ ಉಲ್ಲೇಖಅಮೆರಿಕಾ ಗುಪ್ತಚರ ವರದಿಯಲ್ಲಿ ಪ್ರಧಾನಿ ಮೋದಿ ಬಗ್ಗೆ ಪ್ರಮುಖ ಉಲ್ಲೇಖ

ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯಲಿರುವ ಜಿ-20 ಸಭೆಗಳ ಒಟ್ಟಾರೆ ಸಮನ್ವಯಕ್ಕಾಗಿ ಸಮಿತಿ ಈ ಮೂಲಕ ಮಂಜೂರಾತಿ ನೀಡಲಾಗಿದೆ ಎಂದು ಸಾಮಾನ್ಯ ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ದ್ವಿವೇದಿ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ. ಸಾರಿಗೆ ಕಾರ್ಯದರ್ಶಿ, ಆಡಳಿತ ಕಾರ್ಯದರ್ಶಿ (ಪ್ರವಾಸೋದ್ಯಮ), ಆಡಳಿತ ಕಾರ್ಯದರ್ಶಿ (ಆತಿಥ್ಯ ಮತ್ತು ಶಿಷ್ಟಾಚಾರ) ಮತ್ತು ಆಡಳಿತ ಕಾರ್ಯದರ್ಶಿ (ಸಂಸ್ಕೃತಿ) ಸಮಿತಿಯ ಸದಸ್ಯರಾಗಿದ್ದಾರೆ.

ಸರ್ಕಾರದ ಪ್ರಧಾನ ಕಾರ್ಯದರ್ಶಿ ನಾಮನಿರ್ದೇಶನ

ಸರ್ಕಾರದ ಪ್ರಧಾನ ಕಾರ್ಯದರ್ಶಿ ನಾಮನಿರ್ದೇಶನ

ಇದಲ್ಲದೆ, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಜಿ 20 ಸಭೆಗಳ ವ್ಯವಸ್ಥೆಗಳನ್ನು ಸಂಘಟಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿ, ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯನ್ನು ಕೇಂದ್ರಾಡಳಿತ ಪ್ರದೇಶ ಮಟ್ಟದ ನೋಡಲ್ ಅಧಿಕಾರಿಯಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜಿ 20 1999ರಲ್ಲಿ ಪ್ರಾರಂಭ

ಜಿ 20 1999ರಲ್ಲಿ ಪ್ರಾರಂಭ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2014 ರಿಂದ ಜಿ 20 ಶೃಂಗಸಭೆಗಳಲ್ಲಿ ಭಾರತದ ಪ್ರಾತಿನಿಧ್ಯವನ್ನು ಮುನ್ನಡೆಸುತ್ತಿದ್ದಾರೆ. ಜಿ 20 1999ರಲ್ಲಿ ಪ್ರಾರಂಭವಾದಾಗಿನಿಂದ ಭಾರತವು ಸದಸ್ಯ ರಾಷ್ಟ್ರವಾಗಿದೆ. ವಿದೇಶಾಂಗ ಇಲಾಖೆ ಪ್ರಕಾರ, ಭಾರತವು ಡಿಸೆಂಬರ್ 1, 2021ರಿಂದ ನವೆಂಬರ್ 30, 2024 ರವರೆಗೆ ಜಿ 20ಯ ಹಿಂದಿನ, ಪ್ರಸ್ತುತ ಮತ್ತು ಒಳಬರುವ ಪ್ರೆಸಿಡೆನ್ಸಿಗಳ ಭಾಗವಾಗಿರುತ್ತದೆ.

ಜಾಗತಿಕ ಜನಸಂಖ್ಯೆಯ ಶೇಕಡ 60 ರಷ್ಟರ ಪ್ರತಿನಿಧ್ಯ

ಜಾಗತಿಕ ಜನಸಂಖ್ಯೆಯ ಶೇಕಡ 60 ರಷ್ಟರ ಪ್ರತಿನಿಧ್ಯ

ಜಿ 20 ವಿಶ್ವದ 19 ಪ್ರಮುಖ ಆರ್ಥಿಕತೆಗಳು ಮತ್ತು ಯುರೋಪಿಯನ್ ಒಕ್ಕೂಟವನ್ನು ಒಟ್ಟುಗೂಡಿಸುತ್ತದೆ. ಅದರ ಸದಸ್ಯರು ಜಾಗತಿಕ ಜಿಡಿಪಿಯ ಶೇ. 80ಕ್ಕಿಂತ ಹೆಚ್ಚಿನ ಭಾಗವಾಗಿದ್ದಾರೆ. ಜಾಗತಿಕ ವ್ಯಾಪಾರದ ಶೇಕಡ 75 ಮತ್ತು ಜಾಗತಿಕ ಜನಸಂಖ್ಯೆಯ ಶೇಕಡ 60 ರಷ್ಟನ್ನು ಹೊಂದಿದ್ದಾರೆ. ಜಿ 20 ವಿಶ್ವದ 19 ಪ್ರಮುಖ ಆರ್ಥಿಕತೆಗಳು ಮತ್ತು ರಾಜ್ಯ ಒಕ್ಕೂಟವನ್ನು ಒಟ್ಟುಗೂಡಿಸುತ್ತದೆ. ಅದರ ಸದಸ್ಯರು ಜಾಗತಿಕ ಜಿಡಿಪಿಯ ಶೇಕಡ 80ಕ್ಕಿಂತ ಹೆಚ್ಚು. ಜಾಗತಿಕ ವ್ಯಾಪಾರದ ಶೇಕಡ 75 ಮತ್ತು ಜಾಗತಿಕ ಜನಸಂಖ್ಯೆಯು ಶೇ. 60ರಷ್ಟನ್ನು ಹೊಂದಿದೆ.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಆಹ್ವಾನ

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಆಹ್ವಾನ

ಇತ್ತೀಚೆಗೆ ಐದು ಪ್ರಮುಖ ರಾಷ್ಟ್ರಗಳ ಗುಂಪು ಬ್ರಿಕ್ಸ್‌ನ ವರ್ಚುವಲ್‌ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿದ್ದರು. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಆಹ್ವಾನದ ಮೇರೆಗೆ ಪಾಲ್ಗೊಂಡಿದ್ದರು. ಭಾರತದಿಂದ ಮೋದಿ ಜೂ. 23 ಹಾಗೂ 24ರಂದು ವಾರ್ಷಿಕ ಸಭೆಯಲ್ಲಿ ಬ್ರಿಕ್ಸ್‌ನ ಭಾಗವಾಗಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸೇರಿ ಬಾಂಗ್ಲಾದೇಶ, ಚೀನಾ, ದಕ್ಷಿಣ ಆಫ್ರಿಕಾ ದೇಶವು ಪಾಲ್ಗೊಂಡಿದ್ದಾರೆ. ಈ ವೇಳೆ ಉಕ್ರೇನ್‌ ಮೇಲೆ ರಷ್ಯಾದ ದಾಳಿಯಿಂದ ಉಂಟಾದ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆದಿದೆ.

English summary
The next G-20's 2023 meetings will be held in Jammu and Kashmir. The G20 is an influential group that brings together the world's major economies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X