ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್ ನಲ್ಲಿ ಭಾರತೀಯ ಸೇನೆಗಾಗಿ ಗೌಪ್ಯ ರಸ್ತೆ ಮಾರ್ಗ!

|
Google Oneindia Kannada News

ಶ್ರೀನಗರ್, ಆಗಸ್ಟ್.20: ಭಾರತ-ಚೀನಾ ಗಡಿಯ ಗಾಲ್ವಾನ್ ಪೂರ್ವ ಭಾಗದಲ್ಲಿ ಡ್ರ್ಯಾಗನ್ ರಾಷ್ಟ್ರವು ಆಗಾಗ ಕಾಲ್ಕೆರೆದು ನಿಲ್ಲುತ್ತಿದೆ. ಚೀನಾ ಮತ್ತು ಪಾಕಿಸ್ತಾನಕ್ಕೆ ಪಾಠ ಕಲಿಸುವ ನಿಟ್ಟಿನಲ್ಲಿ ಹೊಸ ಯೋಜನೆಯೊಂದನ್ನು ರೂಪಿಸಲಾಗಿದೆ.

ಲಡಾಖ್ ನಲ್ಲಿ ಸೈನಿಕರು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುವುದಕ್ಕಾಗಿ ಹೊಸ ರಸ್ತೆ ಮಾರ್ಗ ನಿರ್ಮಾಣಕ್ಕೆ ಭಾರತವು ಮುಂದಾಗಿದೆ. ಮನಾಲಿಯಿಂದ ಲೇಹ್ ವರೆಗೂ ನಿರ್ಮಾಣವಾಗಲಿರುವ ಈ ರಸ್ತೆ ಮಾರ್ಗವು ಕೇಂದ್ರಾಡಳಿತ ಪ್ರದೇಶದ ಅತಿ ಎತ್ತರದ ಗುಡ್ಡಗಾಡು ಪ್ರದೇಶದ ಮಾರ್ಗ ಎನಿಸಲಿದೆ.

ಯುದ್ಧೋನ್ಮಾದ ಪೂರ್ವ ಲಡಾಖ್‌ನಲ್ಲಿ ಎಚ್‌ಎಎಲ್‌ನ ಲಘು ಯುದ್ಧ ಹೆಲಿಕಾಪ್ಟರ್ ಕಾರ್ಯಾಚರಣೆ ಯುದ್ಧೋನ್ಮಾದ ಪೂರ್ವ ಲಡಾಖ್‌ನಲ್ಲಿ ಎಚ್‌ಎಎಲ್‌ನ ಲಘು ಯುದ್ಧ ಹೆಲಿಕಾಪ್ಟರ್ ಕಾರ್ಯಾಚರಣೆ

ವ್ಯೂಹಾತ್ಮಕವಾಗಿ ಮುಖ್ಯವಾಗಿರುವ ದೌಲತ್ ಬೇಗ್ ಓಲ್ದಿ ಮತ್ತು ಇತರ ಭಾಗಗಳಿಗೆ ಪರ್ಯಾಯ ಸಂಪರ್ಕ ಕಲ್ಪಿಸಲು ಮೂರು ವರ್ಷಗಳಿಂದ ಭಾರತವು ಕೆಲಸ ಮಾಡುತ್ತಿದೆ. ಖರ್ದುಂಗ್ ಲಾ ಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಈಗಾಗಲೇ ಶುರುವಾಗಿದೆ.

New Road In Ladakh For Facilitating Troop Movement Without Observation From Enemy

ಮನಾಲಿ To ಲೇಹ್ ವರೆಗೂ ರಸ್ತೆ ಮಾರ್ಗ:

ನಿಮು-ಪದಂ-ಡರ್ಚಾ ಮಾರ್ಗದ ಮೂಲಕ ಮನಾಲಿಯಿಂದ ಲೇಹ್ ವರೆಗೂ ಸಂಪರ್ಕ ಸಾಧಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಇದರಿಂದ ಸಮಯ ಉಳಿತಾಯ ಆಗುತ್ತದೆ. ಮುಖ್ಯವಾಗಿ ಭಾರತೀಯ ಸೇನಾ ನಿಯೋಜನೆ ಮತ್ತು ಸೇನಾ ಚಲನವಲನಗಳ ಮೇಲೆ ಅನ್ಯರಾಷ್ಟ್ರಗಳು ನಿಗಾ ವಹಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಲಡಾಖ್ ಪ್ರದೇಶಕ್ಕೆ ಇತರೆ ಭಾಗಗಳಿಂದ ಬೃಹತ್ ಟ್ಯಾಂಕರ್ ಮತ್ತು ಫಿರಂಗಿಗಳನ್ನು ಸಾಗಿಸಿದರೂ ಶತ್ರುರಾಷ್ಟ್ರಗಳಿಗೆ ಅದನ್ನು ಪತ್ತೆ ಮಾಡುವುದಕ್ಕೆ ಆಗುವುದಿಲ್ಲ.

ಪ್ರಸ್ತುತ ಕಾರ್ಗಿಲ್ ಮಾರ್ಗವಾಗಿ ಲೇಹ್ ಮೂಲಕ ಸರಕು ಮತ್ತು ಯೋಧರನ್ನು ಸಾಗಿಸಲಾಗುತ್ತಿದೆ. ಈ ಹಿಂದೆ 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಯೋಧರು ಈ ಮಾರ್ಗದ ಮೇಲೆಯೇ ದಾಳಿ ನಡೆಸಿದ್ದರು ಎನ್ನಲಾಗಿದೆ.

English summary
New Road In Ladakh For Facilitating Troop Movement Without Observation From Enemy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X