• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮರನಾಥ ಯಾತ್ರಿಕರಿಗೆ ಪ್ರೀಪೇಯ್ಡ್ ಪ್ಲಾನ್ ಪರಿಚಯಿಸಿದ ಜಿಯೋ

|

ಶ್ರೀನಗರ, ಜುಲೈ 05: ಪ್ರತಿವರ್ಷ ಬೇಸಿಗೆಯಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸುವ ಪವಿತ್ರ ಅಮರನಾಥ ಯಾತ್ರೆ ಸಂದರ್ಭಕ್ಕೆ ನೆಟ್ವರ್ಕ್ ಕಿರಿಕಿರಿ ಸಾಮಾನ್ಯ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಳಕೆಗಾಗಿ ಜಿಯೋ ರೂ. 102 ಮುಖಬೆಲೆಯ ಪ್ರೀಪೇಯ್ಡ್ ಪ್ಲಾನ್ ಪರಿಚಯಿಸಿದೆ.

ಅಪರಿಮಿತ ವಾಯ್ಸ್ ಕರೆಗಳು (ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ), ಅಪರಿಮಿತ ಎಸ್ಸೆಮ್ಮೆಸ್ (ದಿನಕ್ಕೆ 100), ಅಪರಿಮಿತ ಡೇಟಾ (ದಿನಕ್ಕೆ 0.5 ಜಿಬಿ ಅತಿವೇಗದ ಡೇಟಾ ಮತ್ತು ಆನಂತರ 64 ಕೆಬಿಪಿಎಸ್‌ನಲ್ಲಿ ಅಪರಿಮಿತ ಡೇಟಾ) ಸೇರಿದಂತೆ ಬಳಕೆದಾರರಿಗೆ ಅಪರಿಮಿತ ವಾಯ್ಸ್ ಹಾಗೂ ಡೇಟಾ ಅನುಕೂಲಗಳನ್ನು ಈ ಪ್ಲಾನ್ ನೀಡಲಿದೆ. ಇದರ ವ್ಯಾಲಿಡಿಟಿ 7 ದಿನಗಳ ಕಾಲ ಇರಲಿದೆ.

ಡಿಜಿಟಲ್ ಉಡಾನ್: ಜಿಯೋ ಪಾಠಶಾಲೆಯಲ್ಲಿ 10 ಭಾಷೆಯಲ್ಲಿ ಕಲಿಕೆ

ದೇಶದ ವಿವಿಧ ಭಾಗಗಳಿಂದ ಅಮರನಾಥ ಯಾತ್ರೆಗೆಂದು ಬರುವ, ಪ್ರೀಪೇಯ್ಡ್ ಮೊಬೈಲ್ ಸಂಪರ್ಕ ಬಳಸುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಈ ಹೊಸ ಪ್ಲಾನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಹೊರರಾಜ್ಯಗಳ ಚಂದಾದಾರರು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರೀಪೇಯ್ಡ್ ರೋಮಿಂಗ್ ಸೌಲಭ್ಯ ಬಳಸಲು ನಿರ್ಬಂಧವಿರುವುದರಿಂದ ಯಾತ್ರಾರ್ಥಿಗಳು ಸಂಪರ್ಕದಲ್ಲಿ ಅಡಚಣೆ ಅನುಭವಿಸಬೇಕಾಗುತ್ತದೆ. ಅದಕ್ಕಾಗಿಯೇ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿಕೊಡುವ ಸಂದರ್ಭದಲ್ಲಿ ಅಲ್ಪಕಾಲೀನ ಪ್ರೀಪೇಯ್ಡ್ ಪ್ಲಾನ್ ಜೊತೆಗೆ ಹೊಸ ಸಂಪರ್ಕವನ್ನು ಪಡೆದುಕೊಳ್ಳುತ್ತಾರೆ.

ಅವರು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಸ್ಥಳೀಯ ಜಿಯೋ ಸಂಪರ್ಕ ಪಡೆದುಕೊಳ್ಳಬಹುದಾಗಿದ್ದು ಹಣಕ್ಕೆ ಅಧಿಕ ಮೌಲ್ಯ ನೀಡುವ 7-ದಿನಗಳ ಅಪರಿಮಿತ ಪ್ರೀಪೇಯ್ಡ್ ಪ್ಲಾನ್ ಬಳಸಿ ತಮ್ಮ ಯಾತ್ರೆಯ ಸಂದರ್ಭದಲ್ಲಿ ಅಡಚಣೆರಹಿತ ಸಂಪರ್ಕ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಈ ಹೊಸ ಪ್ಲಾನ್ ಅನ್ನು ಜಮ್ಮು ಮತ್ತು ಕಾಶ್ಮೀರದ ಹಲವು ಜಿಯೋ ರೀಟೇಲರ್‌ಗಳಲ್ಲಿ ಪಡೆದುಕೊಳ್ಳಬಹುದಾಗಿದ್ದು, ಇದು ಅಮರನಾಥ ಯಾತ್ರೆಯ ಪೂರ್ಣ ಅವಧಿಯವರೆಗೂ ಲಭ್ಯವಿರುತ್ತದೆ.

ಜಿಯೋ ಪ್ರೈಮ್ ಸದಸ್ಯತ್ವ ಇಲ್ಲದೆಯೇ ಈ ಹೊಸ ಪ್ಲಾನ್ ಅನ್ನು ಪಡೆದುಕೊಳ್ಳಬಹುದಾಗಿದ್ದು, ಆ ಕಾರಣದಿಂದಾಗಿ ಇದರೊಡನೆ ಜಿಯೋ ಆಪ್ಸ್ ಚಂದಾದಾರಿಕೆ ಲಭ್ಯವಿರುವುದಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New Jio prepaid plan introduced in Jammu & Kashmir circle for the Amarnath Yatra.Prepaid users from other parts of the country cannot use their prepaid connection on roaming in Jammu and Kashmir due to government restrictions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more