ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹಸಚಿವಾಲಯದಿಂದ ಜಮ್ಮು-ಕಾಶ್ಮೀರದ ಬಗ್ಗೆ ಸ್ಫೋಟಕ ಮಾಹಿತಿ

|
Google Oneindia Kannada News

ಶ್ರೀನಗರ, ಜನವರಿ 09: ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 300 ಕ್ಕೂ ಹೆಚ್ಚು ಭಯೋತ್ಪಾದಕರು ಸಕ್ರಿಯರಾಗಿದ್ದು, ಅವರಿಗೆ ಕಾಶ್ಮೀರದ ಸ್ಥಳೀಯರೇ ನೆರವು ನೀಡುತ್ತಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಗೃಹ ಸಚಿವಾಲಯ ಹೊರಹಾಕಿದೆ.

'ಅಣ್ವಸ್ತ್ರ ಹೊಂದಿದ ಎರಡು ದೇಶಗಳ ಮಧ್ಯೆ ಕದನ ಆತ್ಮಹತ್ಯೆಗೆ ಸಮ' 'ಅಣ್ವಸ್ತ್ರ ಹೊಂದಿದ ಎರಡು ದೇಶಗಳ ಮಧ್ಯೆ ಕದನ ಆತ್ಮಹತ್ಯೆಗೆ ಸಮ'

ಗೃಹ ಸಚಿವಾಲಯದ ರಾಜ್ಯ ಸಚಿವ ಹಂನ್ಸ್ ರಾಜ್ ಭಾರದ್ವಾಜ್ ಅಹಿರ್ ಅವರು ಮಂಗಳವಾರ ಲೋಕಸಭೆಯಲ್ಲಿ ಮಾತನಾಡುತ್ತಿದ್ದರು. 'ಸರ್ಕಾರವು ಭಯೋತ್ಪಾದನೆಯ ಬಗ್ಗೆ ಜಿರೋ ಸಹಿಷ್ಣು ಭಾವವನ್ನು ಹೊಂದಿದ್ದು, ಉಗ್ರವಾದ ನಿರ್ಮೂಲನೆಗೆ ಮಹತ್ವದ ಕ್ರಮಗಳನ್ನು ಕೈಗೊಂಡಿದೆ' ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್ ದಾಳಿ: ನಾಲ್ವರು ಉಗ್ರರ ಹತ್ಯೆ ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್ ದಾಳಿ: ನಾಲ್ವರು ಉಗ್ರರ ಹತ್ಯೆ

ಗೃಹ ಸಚಿವಾಲಯದ ವರದಿ ಪ್ರಕಾರ 2014 ರಿಂದ ಇಲ್ಲಿಯವರೆಗೆ ಸುಮಾರು 1213 ಭಯೋತ್ಪಾದಕ ಚಟುವಟಿಕೆಗಳು ನಡೆದಿದ್ದು, ಅವುಗಳಲ್ಲಿ 183 ನಾಗರಿಕರು ಪ್ರಾಣ ಕಳೆದುಕೊಂಡಿದ್ದರೆ, 738 ಭಯೋತ್ಪಾದಕರನ್ನು ಸದೆಬಡಿಯಲಾಗಿದೆ ಎಂದು ಅದು ತಿಳಿಸಿದೆ.

Nearly 300 terrorists active in Jammu and kashmir: Home ministry

ಸರ್ಕಾರ ನಿಯಮಿತವಾಗಿ ಭಯೋತ್ಪಾದಕ ಚಟುವಟಿಕೆಯ ಮೇಲೆ ಕಣ್ಣಿಟ್ಟಿದೆ. ಭಯೋತ್ಪಾದನೆಯ ದಮನವನ್ನು ಮೊದಲ ಆದ್ಯತೆಯನ್ನಾಗಿಸಿಕೊಂಡಿರುವ ಸರ್ಕಾರ ಉಗ್ರರಿಗೆ ಸಿಂಹಸ್ವಪ್ನವಾಗಿದೆ ಎಂದು ಅಹಿರ್ ಹೇಳಿದರು.

English summary
Around 300 terrorists are active in Jammu and Kashmir and are being helped by some locals, the Ministry of Home Affairs (MHA) said in a statement in Lok Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X