ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು 150 ಉಗ್ರರು ಕಾಯುತ್ತಿದ್ದಾರೆ: ಸೇನಾ ಅಧಿಕಾರಿ

|
Google Oneindia Kannada News

ಶ್ರೀನಗರ, ಜೂನ್ 25: ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳಲು ಸುಮಾರು 150 ಭಯೋತ್ಪಾದಕರು ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಮೂಲಕ ಲಾಂಚ್‌ಪ್ಯಾಡ್‌ಗಳಲ್ಲಿ ಕಾಯುತ್ತಿದ್ದಾರೆ ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಲ್‌ಒಸಿಯ ಇನ್ನೊಂದು ಬದಿಯಲ್ಲಿರುವ ಹನ್ನೊಂದು ಭಯೋತ್ಪಾದಕ ಶಿಬಿರಗಳಲ್ಲಿ ಸುಮಾರು 500 ರಿಂದ 700 ಭಯೋತ್ಪಾದಕರು ತರಬೇತಿ ಪಡೆಯುತ್ತಿದ್ದಾರೆ ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ, ಆದರೆ ಭದ್ರತಾ ಪಡೆಗಳು ಉಗ್ರರ ಹಲವಾರು ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿವೆ.

ಪಾಕಿಸ್ತಾನಕ್ಕೆ ಗೌಪ್ಯ ರಕ್ಷಣಾ ಮಾಹಿತಿ ಸೋರಿಕೆ: ಹೈದರಾಬಾದ್‌ನಲ್ಲಿ ವ್ಯಕ್ತಿ ಬಂಧನಪಾಕಿಸ್ತಾನಕ್ಕೆ ಗೌಪ್ಯ ರಕ್ಷಣಾ ಮಾಹಿತಿ ಸೋರಿಕೆ: ಹೈದರಾಬಾದ್‌ನಲ್ಲಿ ವ್ಯಕ್ತಿ ಬಂಧನ

ಎಲ್‌ಒಸಿಯಾದ್ಯಂತ ಮನ್ಶೇರಾ, ಕೋಟ್ಲಿ ಮತ್ತು ಮುಜಫರಾಬಾದ್‌ನಲ್ಲಿರುವ 11 ತರಬೇತಿ ಶಿಬಿರಗಳಲ್ಲಿ ಸುಮಾರು 500 ರಿಂದ 700 ಜನರಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಸೇನಾ ಅಧಿಕಾರಿ ಹೇಳಿಕೆ ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

Nearly 150 Terrorists Are Waiting At LOC : A Senior Army Officer

ಈ ವರ್ಷ ಇಲ್ಲಿಯವರೆಗೆ ಕಾಶ್ಮೀರ ಕಣಿವೆಯಲ್ಲಿ ಎಲ್‌ಒಸಿಯ ಉದ್ದಕ್ಕೂ ಯಾವುದೇ ಭಯೋತ್ಪಾದಕರು ಒಳನುಸುಳುವಲ್ಲಿ ಯಶಸವಿಯಾಗಿಲ್ಲ ಎಂದು ಅಧಿಕಾರಿ ಒತ್ತಿ ಹೇಳಿದ್ದಾರೆ.

ಮೇ ಅಂತ್ಯದವರೆಗೆ, ಯಾವು ಅನಾಹುಗಲೂ ನಡೆದಿಲ್ಲ, ಒಮ್ಮೆ ಮಾತ್ರ ಭಯೋತ್ಪಾದಕರ ಗುಂಪು ಬಂದಿತ್ತು ಮತ್ತು ಬಂಡಿಪೋರಾ ಮತ್ತು ಸೋಪೋರ್‌ನಲ್ಲಿ ಆ ಗುಂಪನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಅವರು ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ವಿದೇಶಿ ಉಗ್ರರನ್ನು ಕೊಂದಿದ್ದಾರೆ ಎಂದು ಹೇಳಿದರು.

ಒಳನುಸುಳುವಿಕೆ ಪ್ರಮಾಣ ಕಡಿಮೆ

ಸೇನಾ ಅಧಿಕಾರಿಯ ಪ್ರಕಾರ, ಭಯೋತ್ಪಾದಕರು ಹೊಸದಾಗಿ ಒಳನುಸುಳುವಿಕೆ ಮಾರ್ಗಗಳ ಮೇಲೆ ಗಮನ ಹರಿಸುತ್ತಿದ್ದಾರೆ, ಏಕೆಂದರೆ ಅಸ್ತಿತ್ವದಲ್ಲಿರುವ ಒಳನುಸುಳುವಿಕೆ ಮಾರ್ಗಗಳು ಭದ್ರತಾ ಪಡೆಗಳಿಗೆ ತಿಳಿದಿರುತ್ತವೆ ಎಂದಿದ್ದಾರೆ.

"ಉಗ್ರರ ನುಸುಳುವಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸುವ ವ್ಯವಸ್ಥೆಯನ್ನು ನಾವು ಜಾರಿಗೆ ತಂದಿದ್ದೇವೆ ಎಂದು ನಾನು ಹೇಳುತ್ತಿಲ್ಲ, ಹೌದು, ಇಲ್ಲಿ ನುಸುಳುವಿಕೆ ನಡೆಯುವ ಸಾಧ್ಯತೆಯಿದೆ, ಆದರೆ ಇತ್ತೀಚಿನ ವರ್ಷಗಳಲ್ಲಿ ನಾವು ಬೇಲಿಯನ್ನು ಬಲಪಡಿಸಿದ ರೀತಿ, ನಿಯೋಜನೆ ಕಣ್ಗಾವಲು ಉಪಕರಣಗಳನ್ನು ಒಳಗೊಂಡಂತೆ ಮಾಡಿರುವ ಮಾರ್ಪಾಟುಗಳು, ಒಳನುಸುಳುವಿಕೆಯ ಯಶಸ್ಸಿನ ಪ್ರಮಾಣವನ್ನು ಕಡಿಮೆ ಮಾಡಿದೆ" ಎಂದು ಅವರು ಹೇಳಿದರು.

Nearly 150 Terrorists Are Waiting At LOC : A Senior Army Officer

"ಇದರ ಪರಿಣಾಮವಾಗಿ ಏನಾಗುತ್ತದೆಯೆಂದರೆ, ಒಂದು ಕಡೆ ಒತ್ತಡವಿದ್ದಾಗ, ಅವರು ಇತರ ಬದಿಗಳಲ್ಲಿ, ಪರ್ಯಾಯ ಮಾರ್ಗಗಳನ್ನು ಪ್ರಯತ್ನಿಸುತ್ತಾರೆ. ಉಗ್ರರು ಈಗ ರಾಜೌರಿ-ಪೂಂಚ್ ಮಾರ್ಗಗಳಲ್ಲಿ ಒಳನುಸುಳಲು ಪ್ರಯತ್ನಿಸುತ್ತಿದ್ದಾರೆ, ಪೀರ್ ಪಂಜಾಲ್‌ನ ದಕ್ಷಿಣದ ಪ್ರದೇಶಗಳು ಇತರ ಮಾರ್ಗಗಳಿಗೆ ಹೋಲಿಸಿದರೆ ಕಾಶ್ಮೀರ ಕಣಿವೆಯಲ್ಲಿ ಒಳನುಸುಳುವಿಕೆ ಕಡಿಮೆಯಾಗಿದೆ" ಎಂದು ಅಧಿಕಾರಿ ಹೇಳಿದ್ದಾರೆ.

ಭಯೋತ್ಪಾದಕರ ಒಳನುಸುಳುವಿಕೆಯನ್ನು ನಿರ್ಬಂಧಿಸಲು ಸೇನೆ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಇಷ್ಟಾದರೂ ಪಾಕಿಸ್ತಾನದ ಕುಮ್ಮಕ್ಕಿನಿಂದ ಹಲವು ಭಯೋತ್ಪಾದಕರು ಭಾರತಕ್ಕೆ ನುಸುಳಿ ದುಷ್ಕೃತ್ಯ ಎಸಗಲು ಯತ್ನದಲ್ಲಿ ಭಾರತೀಯ ಸೈನಿಕರ ಗುಂಡಿಗೆ ಬಲಿಯಾಗುತ್ತಿದ್ದಾರೆ.

English summary
Nearly 150 terrorists are waiting at the launchpads across the Line of Control (LoC) ready to infiltrate into Jammu and Kashmir, A senior Army officer Said. 500 to 700 more terrorists are undergoing training at eleven terror camps on the other side of the LoC He Added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X