ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲಿ 10 ಟೆಲಿಫೋನ್ ಬೂತ್‌ಗಳ ಎದುರು ಲಕ್ಷಾಂತರ ಜನ

|
Google Oneindia Kannada News

ಶ್ರೀನಗರ, ಆಗಸ್ಟ್ 15: ಜಮ್ಮು ಕಾಶ್ಮೀರದ ಕುರಿತು ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದು ಇಂಟರ್‌ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು.

ಹಾಗೆಯೇ ಶ್ರೀನಗರದಲ್ಲಿ ಕಳೆದ 10 ದಿನಗಳಿಂದ 10 ಫೋನ್ ಬೂತ್‌ಗಳ ಮುಂದೆ 80 ಲಕ್ಷಕ್ಕೂ ಅಧಿಕ ಜನರು ತಮ್ಮ ಹತ್ತಿರದವರಿಗೆ ಕರೆ ಮಾಡಲು ಸರತಿಯಲ್ಲಿ ನಿಂತು ಕಾಯುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಕುರಿತು ಚುನಾವಣಾ ಆಯೋಗದ ಮಹತ್ವದ ಚರ್ಚೆ ಜಮ್ಮು ಮತ್ತು ಕಾಶ್ಮೀರ ಕುರಿತು ಚುನಾವಣಾ ಆಯೋಗದ ಮಹತ್ವದ ಚರ್ಚೆ

ಕೇವಲ ಜಮ್ಮು ಮತ್ತು ಕಾಶ್ಮೀರ ಜನತೆ ಅಷ್ಟೇ ಅಲ್ಲದೆ ಅವರ ಭದ್ರತೆಗಾಗಿ ನಿಯೋಜೆಗೊಂಡಿದ್ದ ಸೈನಿಕರೂ ಕೂಡ ತಮ್ಮ ಕುಟುಂಬದವರ ಬಳಿ ಮಾತನಾಡಲು ಹಂಬಲಿಸುತ್ತಿದ್ದಾರೆ.

More Than 80 Lakhs People Are Gathered In Front Of Phone Booth In Srinagar

ಜಮ್ಮು ಮತ್ತು ಕಾಶ್ಮೀರದ ಹೆಡ್ ಕಾನ್‌ಸ್ಟೆಬಲ್ ಮೊಹಮ್ಮದ್ ರಫೀಕ್ ಅವರಿಗೆ ಪುಲ್ವಾಮಾದಲ್ಲಿ ಕಾರ್ಯ ನಿರ್ವಹಿಸುವಂತೆ ತಿಳಿಸಿದ್ದರು. ಅವರು ಅಲ್ಲಿಂದ ಉರಿಗೆ ತೆರಳಿದ್ದರು. ಕಳೆದ ಎರಡು ವಾರಗಳಿಂದ ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಆತಂಕ ಶುರುವಾಗಿದೆ. ಅವರು ತಮ್ಮ ಕುಟುಂಬ ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಹಲವಾರು ಮಂದಿಗೆ ಕರೆ ಹಾಗಿರಲಿ ಪತ್ರದ ಮೂಲಕವೂ ಸಂದೇಶ ರವಾನಿಸುವುದು ಕಷ್ಟವಾಗಿದೆ. ಅಲ್ಲಿ ಅಂಚೆ ಸೇವೆ ಕೂಡ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಎಲ್ಲವೂ ಕಷ್ಟವಾಗಿದೆ.

ಎ‍ಷ್ಟೋ ಮಂದಿ ಯೋಧರು ಈದ್ ಗೂ ಮುನ್ನ ಹಣವನ್ನು ಕಳುಹಿಸುವುದಾಗಿ ಮನೆಯಲ್ಲಿ ಮಾತುಕೊಟ್ಟಿದ್ದರು. ಆದರೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈಗ ಕರೆ ಮಾಡಲು ಅವಕಾಶ ಮಾಡಿಕೊಟ್ಟಿದ್ದರೂ ಕೂಡ ಅಂತಾರಾಷ್ಟ್ರೀಯ ಕರೆ ಮಾಡಲು ಸಾಧ್ವಾಗುತ್ತಿಲ್ಲ ಎಂದು ಕೆಲವರು ತಿಳಿಸಿದ್ದಾರೆ. ಶ್ರೀನಗರದ ಹಲವು ಭಾಗಗಳಲ್ಲಿ ಟೆಲಿಫೋನ್ ಸೇವೆಯನ್ನು ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

English summary
From Two weeks there is no Internet service in Jammu and Kashmir, More than 80 lakh people are gathered infront of Phone booths in Srinagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X