ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

370 ನೇ ವಿಧಿ ರದ್ದತಿ ನಂತರ ಕಾಶ್ಮೀರಕ್ಕಾದ ನಷ್ಟ 1 ಬಿಲಿಯನ್ ಡಾಲರ್!

|
Google Oneindia Kannada News

ಶ್ರೀನಗರ, ನವೆಂಬರ್ 20: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ನೀಡಲಾದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಹಿಂಪಡೆದ ನಂತರ ಕಣಿವೆ ರಾಜ್ಯದಲ್ಲಿ ಉಂಟಾದ ನಷ್ಟ ಹುಬ್ಬೇರಿಸುವಂತೆ ಮಾಡಿದೆ.

ಈ ಭಾರೀ ನಷ್ಟಕ್ಕಾಗಿ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಲು ಕಾಶ್ಮೀರ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ(ಕೆಸಿಸಿಐ) ನಿರ್ಧರಿಸಿದೆ ಎಂದು 'ರಾಯ್ಟರ್ಸ್' ವರದಿ ಮಾಡಿದೆ.

ಬ್ರೆಡ್ ತರಲು ಹೋದ 12 ರ ಹುಡುಗ ಏನಾದ? ಕಾಶ್ಮೀರದ ಕಟುವಾಸ್ತವ!ಬ್ರೆಡ್ ತರಲು ಹೋದ 12 ರ ಹುಡುಗ ಏನಾದ? ಕಾಶ್ಮೀರದ ಕಟುವಾಸ್ತವ!

ಆಗಸ್ಟ್ 5 ರಂದು ಸಂವಿಧಾನದ 370 ನೇ ವಿಧಿಯನ್ನು ಸರ್ಕಾರ ರದ್ದುಗೊಳಿಸಿ, ಮಸೂದೆ ಮಂಡನೆ ಮಾಡಿತು. ಇದರಿಂದಾಗಿ ಕಣಿವೆ ರಾಜ್ಯದಾದ್ಯಂತ ನಿಷೇಧಾಜ್ಞೆ ಹೇರಲಾಗಿತ್ತು. ಅಂದಿನಿಂದಲೂ ಕಾಶ್ಮೀರದಲ್ಲಿ ಅಂಗಡಿಗಳನ್ನು ಮುಚ್ಚಲಾಗಿದ್ದು, ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ವ್ಯಾಪಾರ-ವಹಿವಾಟು ಸ್ಥಗಿತಗೊಂಡಿರುವುದರಿಂದ ಸರ್ಕಾರಕ್ಕೆ ಸುಮಾರು 1 ಬಿಲಿಯನ್ ಡಾಲರ್ (ರೂ.71,84,95,00,000) ನಷ್ಟು ನಷ್ಟವಾಗಿದೆ ಎಂದು ಈ ವರದಿ ಹೇಳಿದೆ.

More Than 1 Billion Dollar Losses In Kashmir After Scrapping Od Article 370

ಸೆಪ್ಟೆಂಬರ್ ಗೂ ಮಿನ್ನ ಸುಮಾರು 100 ಬಿಲಿಯನ್ ರೂಪಾಯಿಯಷ್ಟು ನಷ್ಟವಾಗಿತ್ತು. ಆದರೆ ಅದು ಈಗ 1 ಮಿಲಿಯನ್ ಡಾಲರ್ ನಷ್ಟು ಏರಿದೆ ಎಂದು ಅದು ಹೇಳಿದೆ.

ಇನ್ನೂ ವಿವರಾಗಿ ನಷ್ಟದ ಲೆಕ್ಕಾಚಾರ ನೀಡುವಂತೆ ಬಾಹ್ಯ ಏಜೆನ್ಸಿಯೊಂದನ್ನು ನೇಮಿಸಿರುವುದಾಗಿ ಕೆಸಿಸಿಐ ಹೇಳಿದೆ.

ಕಾಶ್ಮೀರ ಈಗ ಹೇಗಿದೆ? ಯುರೋಪಿನಿಂದ ಬಂದಿದ್ದ ನಿಯೋಗ ಹೇಳಿದ್ದೇನು?ಕಾಶ್ಮೀರ ಈಗ ಹೇಗಿದೆ? ಯುರೋಪಿನಿಂದ ಬಂದಿದ್ದ ನಿಯೋಗ ಹೇಳಿದ್ದೇನು?

ಶ್ರೀನಗರದಲ್ಲಿ ಹೊಟೆಲ್ ವೊಂದನ್ನು ನಡೆಸುತ್ತಿರುವ ವಿವೇಕ್ ವಾಜಿರ್ ಹೇಳುವ ಪ್ರಕಾರ, ಕೆಲವು ತಿಂಗಳಿನಿಂದ ಕಾಶ್ಮೀರ ಅಸ್ಥಿರವಾಗಿದೆ. ತೀರಾ ಗೊಂದಲವುಂಟಾಗಿರುವುದರಿಂದ ಯಾವ ವಹಿವಾಟೂ ನಡೆಯುತ್ತಿಲ್ಲ. ಮುಂದೇನು ಎಂಬುದೇ ಗೊತ್ತಾಗದೆ ಗೊಂದಲದಲ್ಲಿದ್ದೇವೆ ಎನ್ನುತ್ತಾರೆ ಅವರು.

ಇದೆಂಥ ನ್ಯಾಯ? ಮೊಬೈಲ್ ಸೇವೆಯೇ ಇಲ್ದಿದ್ರೂ ಬಿಲ್ ಕಟ್ಬೇಕು!ಇದೆಂಥ ನ್ಯಾಯ? ಮೊಬೈಲ್ ಸೇವೆಯೇ ಇಲ್ದಿದ್ರೂ ಬಿಲ್ ಕಟ್ಬೇಕು!

"ಸದ್ಯಲ್ಲೆ ಕಾಶ್ಮೀರದಲ್ಲಿ ಯಾರಾದ್ರೂ ಹೂಡಿಕೆ ಮಾಡಲು ಬಂದರೆ ನಾನು ಅಚ್ಚರಿ ಪಡುತ್ತೇನೆ. ಅಷ್ಟರ ಮಟ್ಟಿಗೆ ಕಾಶ್ಮೀರ ನಷ್ಟದಲ್ಲಿದೆ" ಎನ್ನುತ್ತಾರೆ ವಿವೇಕ್ ವಾಜಿರ್.

English summary
Scarpping Of Article 370 which Isthe reason for Kashmir shutdown caused loss of More than 1 Billion Dollar, Trade Body said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X