• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೇನೆಯನ್ನು ಬೆದರಿಸಲು 12 ವರ್ಷದ ಬಾಲಕನನ್ನು ಒತ್ತೆಯಿರಿಸಿ ಕೊಂದ ಉಗ್ರರು

|

ಶ್ರೀನಗರ, ಮಾರ್ಚ್ 23: ಉಗ್ರರು ಸೈನಿಕರನ್ನು ಜನಸಾಮಾನ್ಯರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ಘಟನೆಗಳು ಸಾಮಾನ್ಯ. ಆದರೆ, ಅವರ ಧರ್ಮ ದ್ವೇಷದ ಕಿಡಿ ಪುಟ್ಟ ಮಕ್ಕಳ ಮೇಲೇಕೆ? ಪಾಕಿಸ್ತಾನದಲ್ಲಿ ಶಾಲೆಯೊಂದರ ಮೇಲೆ ದಾಳಿ ನಡೆಸಿ ಸುಮಾರು 159 ಮಕ್ಕಳನ್ನು ಕೊಂದ ಘಟನೆ ಉಗ್ರರ ಹೀನ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು. ಇದೇ ರೀತಿಯ ಅಮಾನುಷ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.

ಸೇನಾಪಡೆಯೊಂದಿಗೆ ನಡೆದ ಸಂಘರ್ಷದ ವೇಳೆ ಉಗ್ರರು ತಮ್ಮ ರಕ್ಷಣೆಗಾಗಿ 12 ವರ್ಷದ ಬಾಲಕನನ್ನು ಒಂಬತ್ತು ಗಂಟೆ ಕಾಲ ಒತ್ತೆಯಾಳಾಗಿರಿಸಿಕೊಂಡು ಬಳಿಕ ಹತ್ಯೆ ಮಾಡಿದ್ದಾರೆ.

ಒತ್ತೆಯಾಳಾಗಿ ಇರಿಸಿಕೊಂಡಿದ್ದ ಬಾಲಕನ ಕುಟುಂಬದವರು ಕಣ್ಣೀರಿಟ್ಟು ಬೇಡಿಕೊಂಡರೂ ಉಗ್ರರ ಮನಸು ಕರಗಲಿಲ್ಲ. ಕೊನೆಗೆ ಬಾಲಕ ಸಿಕ್ಕಿದ್ದು ಶವವಾಗಿ. ಈ ಹೃದಯವಿದ್ರಾವಕ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಉತ್ತರ ಕಾಶ್ಮೀರದ ಹಾಜಿನ್ ಗ್ರಾಮದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುರುವಾರ ಮಧ್ಯಾಹ್ನ ಗುಂಡಿನ ಚಕಮಕಿ ಆರಂಭವಾಗಿತ್ತು. ಲಷ್ಕರ್ ಎ ತಯಬಾದ ಇಬ್ಬರು ಉಗ್ರರು ಇಬ್ಬರು ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. 12 ವರ್ಷದ ಬಾಲಕ ಆತಿಫ್ ಮಿರ್ ಮತ್ತು ಆತನ ಚಿಕ್ಕಪ್ಪ ಅಬ್ದುಲ್ ಹಮೀದ್ ಉಗ್ರರ ಬಂಧಿಯಾಗಿದ್ದರು.

ಇಬ್ಬರನ್ನೂ ಜೀವಂತವಾಗಿ ಸಿಗುವಂತೆ ಮಾಡುವುದು ಮತ್ತು ಉಗ್ರರಿಬ್ಬರ ನಿರ್ಮೂಲನೆ ಸೇನಾಪಡೆಯ ಗುರಿಯಾಗಿತ್ತು. ಆದರೆ, ಆತಿಫ್‌ನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಬ್ಬರು ಉಗ್ರರನ್ನು ಯಶಸ್ವಿಯಾಗಿ ಎನ್‌ಕೌಂಟರ್ ಮಾಡಲಾಯಿತು.

ಜಮ್ಮು ಮತ್ತು ಕಾಶ್ಮೀರ: ಮೂವರು ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ

'ಆತಿಫ್‌ನನ್ನು ಉಗ್ರರು ಅತ್ಯಂತ ಕ್ರೂರವಾಗಿ ಕೊಂದುಹಾಕಿದರು. ಉಗ್ರರ ಹಿಡಿತದಿಂದ ಆತನನ್ನು ಉಳಿಸಲು ಸಾಧ್ಯವಾಗಲಿಲ್ಲ' ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ನನ್ನ ಮಗ ಅವರಿಗೇನು ಮಾಡಿದ್ದ?

ನನ್ನ ಮಗ ಅವರಿಗೇನು ಮಾಡಿದ್ದ?

'ಇಡೀ ರಾತ್ರಿ ಆತ ಜೀವಂತ ಇರಲಿ ಎಂದು ಪ್ರಾರ್ಥಿಸಿದ್ದೆ. ಯಾರಾದರೂ ಏಕೆ ಆತನನ್ನು ಕೊಲ್ಲಬೇಕು? ಅವನಿಗಿನ್ನೂ 12 ವರ್ಷ' ಎಂದು ಆತಿಫ್‌ನ ತಾಯಿ ಶರೀಫಾ ಜಾನ್ ಗದ್ಗದಿತರಾಗಿ ನುಡಿದರು.

'ನನ್ನ ಮಗನನ್ನು ಬಿಡುಗಡೆ ಮಾಡುವಂತೆ ಉಗ್ರರನ್ನು ಬೇಡಿಕೊಂಡೆ. ಆದರೆ, ಮಗನನ್ನು ಹೊರಗೆ ಕಳುಹಿಸಲು ಅವರು ನಿರಾಕರಿಸಿದರು. ನನ್ನ ಮಗ ಅವರಿಗೆ ಏನು ಮಾಡಿದ್ದ? ಅವನದು ಸಾಯುವ ವಯಸ್ಸಲ್ಲ' ಎಂದು ಕಣ್ಣೀರಿಟ್ಟರು.

ಕಾರ್ಯಾಚರಣೆ ಅಂತ್ಯಗೊಂಡ ಬಳಿಕ ಆತಿಫ್‌ನ ಸುಟ್ಟ ದೇಹ ಮೂರು ಅಂತಸ್ತಿನ ಮನೆಯ ಅವಶೇಷಗಳಡಿ ಪತ್ತೆಯಾಗಿದೆ. ಕಾರ್ಯಾಚರಣೆ ವೇಳೆ ಗುಂಡು ತಗುಲಿ ಮನೆ ಬಹುತೇಕ ಜಖಂಗೊಂಡಿತ್ತು. ಹತರಾದ ಉಗ್ರರನ್ನು ಅಲಿ ಮತ್ತು ಹುಬೈಬ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಪಾಕಿಸ್ತಾನಿ ಪ್ರಜೆಗಳಾಗಿದ್ದಾರೆ.

ಬಾಲಕೋಟ್ ನಿಂದ ಪಾಕ್ ಸರ್ಕಾರವೇ ಉಗ್ರರನ್ನು ಸಾಗಿಸಿತ್ತು: ಭುಟ್ಟೋ ಸ್ಫೋಟಕ ಹೇಳಿಕೆ

ಅಘಾತದಲ್ಲಿ ಕುಟುಂಬ

ತಮ್ಮ ಒಬ್ಬನೇ ಮಗನನ್ನು ಕಳೆದುಕೊಂಡ ಮೊಹಮ್ಮದ್ ಶಫಿ ಮಿರ್ ಕುಟುಂಬ ಆಘಾತಕ್ಕೊಳಗಾಗಿದ್ದು, ಅತೀವ ದುಃಖಕ್ಕೆ ಒಳಗಾಗಿದೆ. ಈ ಕುಟುಂಬದವರು ಉಗ್ರರ ಬಳಿ ಭಾವುಕರಾಗಿ ಮನವಿ ಸಲ್ಲಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಮೀಪದ ಗುಡ್‌ವಿಲ್ ಶಾಲೆಯಲ್ಲಿ ಆತಿಫ್ ಆರನೇ ತರಗತಿ ಓದುತ್ತಿದ್ದ. ಆತನ ತಂದೆ ಶಫಿ ಮಿರ್ ಗ್ರಾಮದಲ್ಲಿ ಹೆಸರಾಂತ ವರ್ತಕರಾಗಿದ್ದಾರೆ.

ಸಿಆರ್ ಪಿಎಫ್ ಕ್ಯಾಂಪ್ ಮೇಲೆ ಗ್ರೆನೇಡ್ ದಾಳಿ: ಓರ್ವ ಯೋಧ ಹುತಾತ್ಮ

ಸಕಲ ಪ್ರಯತ್ನ ನಡೆಸಿದ ಸೇನಾಪಡೆ

ಒತ್ತೆಯಲ್ಲಿದ್ದ ಬಾಲಕನ್ನು ರಕ್ಷಿಸುವ ಸಲುವಾಗಿ ಭದ್ರತಾ ಪಡೆಗಳು ಸಂಜೆಯವರೆಗೂ ಕಾರ್ಯಾಚರಣೆ ವಿಳಂಬ ಮಾಡಿದ್ದರು. ಆತನನ್ನು ಉಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಿದರು. ಆದರೆ, ಉಗ್ರರು ಮಗುವನ್ನು ಬಿಡಲಿಲ್ಲ. ಸೇನಾ ಪಡೆ ಸಂಪೂರ್ಣವಾಗಿ ಕಾರ್ಯಾಚರಣೆ ನಿಲ್ಲಿಸಿದ್ದರೆ ಜೀವಂತ ಬಿಟ್ಟು ಕಳುಹಿಸುತ್ತಿದ್ದರೇನೋ ಎಂದು ಸ್ಥಳೀಯರು ಹೇಳಿದ್ದಾರೆ.

ಕಣ್ಣೀರಿಟ್ಟ ಸ್ನೇಹಿತ

'ನನ್ನ ಆತ್ಮೀಯ ಗೆಳೆಯ, ನನ್ನ ಸಹೋದರ, ನನ್ನ ರಹಸ್ಯಗಳನ್ನು ಕೇಳಿಕೊಳ್ಳುವವ, ನನ್ನ ಸಹವರ್ತಿ, ನನ್ನ ಅತ್ಯುತ್ತಮ ವ್ಯಕ್ತಿ, ನನ್ನ ಬಾಲ್ಯ, ನನ್ನ ಯೌವನ, ನನ್ನ ಮುಗ್ಧತೆ, ನನ್ನ ವರ್ತಮಾನ, ನನ್ನ ಭೂತ, ನನ್ನ ಭವಿಷ್ಯ, ನನ್ನ ಸಂತೋಷ. ನಾನು ಕಳೆದುಕೊಂಡೆ' ಹೀಗೆ ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದ್ದು ಆತಿಫ್ ಮಿರ್‌ನ ನೆರೆಮನೆಯ ಸ್ನೇಹಿತ ಎಂದು ಖಾಲಿದ್ ಶಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Militant killed 12 year boy who was in thier hostage before gunned down by security forces at Hajin village of Bandipora in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more