ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕೇಂದ್ರವೇ ಕಾರಣ: ಮುಫ್ತಿ

|
Google Oneindia Kannada News

ಶ್ರೀನಗರ, ಅಕ್ಟೋಬರ್ 08: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ದೂರಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ತಪ್ಪು ಕ್ರಮಗಳೇ ಕಾರಣ ಎಂದು ಹೇಳಿದ್ದಾರೆ.

ದಾಳಿ ಭಯದಿಂದ ರಾಜ್ಯ ತೊರೆಯುತ್ತಿರುವ ಕಾಶ್ಮೀರಿ ಪಂಡಿತರುದಾಳಿ ಭಯದಿಂದ ರಾಜ್ಯ ತೊರೆಯುತ್ತಿರುವ ಕಾಶ್ಮೀರಿ ಪಂಡಿತರು

ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರವೇ ಹೊಣೆ. ಕಾಶ್ಮೀರದಲ್ಲಿ 2019ರ ಆಗಸ್ಟ್ 5ರಿಂದ ಹಾಗೂ ಅದಕ್ಕೂ ಮೊದಲು ವೇಗವಾಗಿ ಹದಗೆಡುತ್ತಿರುವ ಪರಿಸ್ಥಿತಿಗೆ ನೇರವಾಗಿ ಬಿಜೆಪಿ ಸರ್ಕಾರವೇ ಕಾರಣ ಎಂದರು.

Mehbooba Mufti Says Centre Responsible For Worsening Situation In J-K

ಉಗ್ರರಿಂದ ಹತ್ಯೆಗೀಡಾದ ಶಾಲೆಯ ಪ್ರಾಂಶುಪಾಲರ ಕುಟುಂಬವನ್ನು ಭೇಟಿ ಮಾಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಕೌರ್‌ಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ ಅವರು ಈಗ ಎಲ್ಲಿಗೆ ಹೋಗಬೇಕು, ನಮ್ಮ ಸಿಖ್ ಸಹೋದರರು ನಮ್ಮ ಜತೆಗಿದ್ದರು, ನಮ್ಮ ಕಷ್ಟದ ವರ್ಷಗಳಲ್ಲಿ ಇವರೆಲ್ಲರೂ ನಮ್ಮನ್ನು ಬೆಂಲಿಸಿದ್ದಾರೆ ಎಂದರು.

ಕಳೆದ ಮೂರು ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ನಾಲ್ಕನೇ ದಾಳಿ ಇದಾಗಿದೆ. ಅಕ್ಟೋಬರ್ 5 ರಂದು ಕಾಶ್ಮೀರಿ ಪಂಡಿತ ಎಂ ಎಲ್ ಬಿಂದ್ರೂ, ಕಾಶ್ಮೀರಿ ಮುಸ್ಲಿಂ ಮತ್ತು ಬಿಹಾರ ನಿವಾಸಿ ಶ್ರೀನಗರ ಹಾಗೂ ಬಂಡಿಪೋರಾದಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಹತರಾಗಿದ್ದರು.

ಮೃತರನ್ನು ಸುಪಿಂದರ್ ಕೌರ್ ಮತ್ತು ದೀಪಕ್ ಚಂದ್ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ, ಕಾಶ್ಮೀರದಲ್ಲಿ 5 ನಾಗರಿಕರನ್ನು ಕೊಲ್ಲಲಾಗಿದೆ. ಬುಧವಾರ, ನಗರದಲ್ಲಿ ಪ್ರಸಿದ್ಧ ಕಾಶ್ಮೀರಿ ಪಂಡಿತ್ ಮೆಡಿಕಲ್ ಶಾಪ್ ಮಾಲೀಕರು ಸೇರಿದಂತೆ ಇಬ್ಬರು ನಾಗರಿಕರನ್ನು ಕೊಲ್ಲಲಾಯಿತು. ಇದಕ್ಕೂ ಮುನ್ನ ಮಂಗಳವಾರ ಮುಂಜಾನೆ, ಮೂವರನ್ನು ಕೊಲೆ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಗೃಹ ವ್ಯವಹಾರಗಳ ಸಚಿವಾಲಯದ ಪ್ರಮುಖ ಸಭೆ: ಇತ್ತೀಚಿಗೆ ಕಣಿವೆ ರಾಜ್ಯದಲ್ಲಿ ಜನಸಾಮಾನ್ಯರನ್ನು ಗುರಿಯಾಗಿಸುತ್ತಿರುವ ಭಯೋತ್ಪಾದಕರ ಕೃತ್ಯಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ಗೃಹ ಸಚಿವಾಲಯವು ಪ್ರಮುಖ ಸಸ್ಭೆ ಕರೆದಿದೆ.

ತಮ್ಮ ಮೇಲೆ ನಡೆಯಬಹುದಾದ ದಾಳಿ ಭಯದಿಂದ ಕೆಲವು ಕಾಶ್ಮೀರಿ ಪಂಡಿತರು ರಾಜ್ಯವನ್ನು ತೊರೆಯುತ್ತಿದ್ದಾರೆ.

ಕಾಶ್ಮೀರಿ ಪಂಡಿತರಲ್ಲದೆ ಕೆಲ ಕುಟುಂಬಗಳು ಸಹ ತೊರೆಯುತ್ತಿದ್ದಾರೆ. 1990ರ ದಾಳಿ ಮರು ಕಳಿಸುತ್ತಿದೆ ಎಂದು ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿ ಅಧ್ಯಕ್ಷ ಸಂಜಯ್ ಟಿಕು ಹೇಳಿದ್ದಾರೆ. ಜೂನ್ ನಲ್ಲಿ ಉಪ ರಾಜ್ಯಪಾಲರ ಭೇಟಿಗೆ ಮನವಿ ಸಲ್ಲಿಸಿದ್ದೆವು.

ಆದರೆ, ಈವರೆಗೂ ಭೇಟಿಗೆ ಅವಕಾಶ ದೊರೆತಿಲ್ಲ. ಸಾಮಾಜಿಕ ಮಾಧ್ಯಮಗಳಿಂದ ಇಂತಹ ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಅವರು ತಿಳಿಸಿದರು.

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಹತ್ಯೆಗೆ ಗುರಿ ಇಡಲಾಗಿದೆ ಎಂಬ ಅನುಮಾನದಿಂದ 2010-11ರ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಸರ್ಕಾರಿ ಕೆಲಸ ಪಡೆದಿರುವ ಸಮುದಾಯದ ಕೆಲವು ನೌಕರರು, ಸುರಕ್ಷಿತ ವಾತಾವರಣ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದು, ತಮ್ಮ ಜೀವ ಭಯದಿಂದ ನಿಧಾನವಾಗಿ ಜಮ್ಮುವನ್ನು ತೊರೆಯಲು ಆರಂಭಿಸಿದ್ದಾರೆ ಎಂದು ಕಾಶ್ಮೀರಿ ಪಂಡಿತ್ ಸಂಘಟನೆಯೊಂದು ಶುಕ್ರವಾರ ಹೇಳಿದೆ.

ಈ ಮಧ್ಯೆ ಆಡಳಿತಗಾರರು ಅಲ್ಪಸಂಖ್ಯಾತ ಸಮುದಾಯದ ನೌಕರರಿಗೆ 10 ದಿನಗಳ ರಜೆಯನ್ನು ನೀಡಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ನಗರದ ಹೃದಯ ಭಾಗದಲ್ಲಿನ ಸರ್ಕಾರಿ ಶಾಲೆಯ ಒಳಗಡೆ ಗುರುವಾರ ಮಹಿಳಾ ಪ್ರಿನ್ಸಿಪಾಲ್ ಹಾಗೂ ಶಿಕ್ಷಕಿಯೊಬ್ಬರನ್ನು ಗುರುವಾರ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಐದು ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಏಳು ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಈ ಏಳು ಮಂದಿಯಲ್ಲಿ ನಾಲ್ವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

English summary
The wrong measures taken by the BJP-led central government are responsible for the "worsening" situation in Jammu and Kashmir, PDP president Mehbooba Mufti said on Friday after visiting the family of a school principal who was killed by terrorists here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X