ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರನ್ನು 'ಮಣ್ಣಿನ ಮಕ್ಕಳು' ಎಂದ ಮೆಹಬೂಬಾ ಮುಫ್ತಿ!

|
Google Oneindia Kannada News

ಶ್ರೀನಗರ, ಜನವರಿ 16: "ಜಮ್ಮು ಕಾಶೀರದ ಸ್ಥಳೀಯ ಭಯೋತ್ಪಾದಕರು ಮಣ್ಣಿನ ಮಕ್ಕಳು. ಅವರನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಬೇಕಿದೆ" ಎಂಬ ವಿವಾದಾತ್ಮಕ ಹೇಳಿಕೆಯನ್ನು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೀಡಿದ್ದಾರೆ.

ಪಿಡಿಪಿ ಒಡೆದರೆ ಉಗ್ರರು ಹುಟ್ಟುತ್ತಾರೆ: ಮುಫ್ತಿ ಹೇಳಿಕೆಗೆ ವ್ಯಾಪಕ ಖಂಡನೆಪಿಡಿಪಿ ಒಡೆದರೆ ಉಗ್ರರು ಹುಟ್ಟುತ್ತಾರೆ: ಮುಫ್ತಿ ಹೇಳಿಕೆಗೆ ವ್ಯಾಪಕ ಖಂಡನೆ

ಉಗ್ರ ಮುಖಂಡರೊಂದಿಗೆ ಪಾಕಿಸ್ತಾನ, ಪ್ರತ್ಯೇಕತಾವಾದಿಗಳು ಮತ್ತು ಕೇಂದ್ರ ಸರ್ಕಾರ ಮಾತುಕತೆ ನಡೆಸಬೇಕು. ಬಂದೂಕು ಸಂಸ್ಕೃತಿಯನ್ನು ಆರಂಭಿಸಿದ್ದು ಅವರು. ಅದನ್ನು ಅಂತ್ಯಗೊಳಿಸುವುದೂ ಅವರದೇ ಕೆಲಸ ಎಂದು ಮುಫ್ತಿ ಹೇಳಿದ್ದಾರೆ.

Mehbooba Mufti calls Local terrorists are sons of soil

ಹಿಜ್ಬುಲ್ ಉಗ್ರನ ಹತ್ಯೆಗೆ ಸಂತಾಪ ಸೂಚಿಸಿದ ಮೆಹಬೂಬಾ ಮುಫ್ತಿ!ಹಿಜ್ಬುಲ್ ಉಗ್ರನ ಹತ್ಯೆಗೆ ಸಂತಾಪ ಸೂಚಿಸಿದ ಮೆಹಬೂಬಾ ಮುಫ್ತಿ!

ಸ್ಥಳೀಯ ಭಯೋತ್ಪಾದಕರು ಹಿಂಸೆಯ ಹಾದಿಯನ್ನು ತುಳಿಯಂದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ. ನಾನು 1996 ರಲ್ಲಿ ರಾಜಕೀಯಕ್ಕೆ ಬಂದಾಗಿನಿಂದಲೂ ಸ್ಥಳೀಯ ಉಗ್ರರನ್ನು 'ಮಣ್ಣಿನ ಮಕ್ಕಳು' ಎಂದೇ ಕರೆಯುತ್ತಿದ್ದೇನೆ. ಅವರನ್ನು ರಕ್ಷಿಸುವುದೇ ನಮ್ಮ ಆದ್ಯ ಕರ್ತವ್ಯವಾಗಬೇಕು. ಅವರು ನಮ್ಮ ಆಸ್ತಿ. ಕೇವಲ ಎನ್ ಕೌಂಟರ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವರ ಮನಃಪರಿವರ್ತನೆಗೆ ಪ್ರಯತ್ನಿಸಬೇಕು" ಎಂದು ಮುಫ್ತಿ ಹೇಳಿದರು.

ಕಳೆದ ಅಕ್ಟೋಬರ್ ನಲ್ಲಿ ಎನ್ ಕೌಂಟರ್ ದಾಳಿಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮೋಸ್ಟ್ ವಾಂಟೆಂಡ್ ಉಗ್ರ ಮನನ್ ಬಶಿರ್ ವಾನಿ ಬಲಿಯಾದಾಗ ಸಂತಾಪ ಸೂಚಿಸುವ ಮೂಲಕ ಮುಫ್ತಿ ವಿವಾದ ಸೃಷ್ಟಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

English summary
PDP chief and former Jammu and Kashmir chief minister Mehbooba Mufti on Tuesday hailed the local Kashmiri terrorists as "sons of soil" and said that sincere attempts should be made to save them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X