ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NEET ಪರೀಕ್ಷೆಯಲ್ಲಿ ಅರ್ಹತೆ ಪಡೆದ J&K ನ ಮೊದಲ ಬುಡಕಟ್ಟು ಯುವಕ

|
Google Oneindia Kannada News

ಶ್ರೀನಗರ, ಫೆಬ್ರವರಿ 21: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಮುಲ್ನಾರ್ ಹರ್ವಾನ್‌ನ ಬುಡಕಟ್ಟು ಹುಡುಗನೊಬ್ಬ 2022 ರಾಷ್ಟ್ರೀಯ ಅರ್ಹತಾ ಪ್ರವೇಶ (NEET) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾನೆ ಮತ್ತು ತನ್ನ ಕುಟುಂಬ ಮತ್ತು ಸಮುದಾಯವನ್ನು ಹೆಮ್ಮೆಪಡುವಂತೆ ಮಾಡಿದ್ದಾನೆ.

ತುಫೈಲ್ ಅಹ್ಮದ್ ಎಂಬ ಹುಡುಗ NEET ಪರೀಕ್ಷೆಯಲ್ಲಿ ತೇರ್ಗಡೆ ಹೊಂಡಿದ್ದಾನೆ. ಇವರು ಮಿಷನ್ ಸ್ಕೂಲ್ ನ್ಯೂ ಥೀದ್ ಹರ್ವಾನ್ ಶ್ರೀನಗರದಲ್ಲಿ 8 ನೇ ತರಗತಿಯವರೆಗೆ ಅಧ್ಯಯನ ಮಾಡಿದರು. ಇವರು 12 ನೇ ತರಗತಿಯನ್ನು ಪೂರ್ಣಗೊಳಿಸಲು ಶಾಲಿಮಾರ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದಿದರು.

ಎಎನ್‌ಐ ಜೊತೆ ಮಾತನಾಡಿದ ಅಹ್ಮದ್ ಅವರು ತಮ್ಮ ಜೀವನದಲ್ಲಿ ಎದುರಿಸಿದ ಹೋರಾಟಗಳು ಮತ್ತು ಕಷ್ಟಗಳನ್ನು ಹಂಚಿಕೊಂಡರು. 'ನಾನು ಅನೇಕ ಮೂಲಭೂತ ಸೌಲಭ್ಯಗಳಿಂದ ವಂಚಿತನಾಗಿದ್ದೆ. ಇಂಟರ್‌ನೆಟ್‌ ಸೌಲಭ್ಯ ಪಡೆಯಲು ಮತ್ತು ಶಾಲೆಗೆ ಹೋಗಲು ಕಿಲೋಮೀಟರ್‌ಗಟ್ಟಲೆ ನಡೆದುಕೊಂಡು ಹೋಗುವುದು ಅವರು ಅನುಭವಿಸಿದ ಕಷ್ಟಗಳಲ್ಲಿ ಪ್ರಮುಖವು' ಎಂದು ಹೇಳಿಕೊಂಡಿದ್ದಾರೆ.

Meet Tufail Ahmad, J&Ks first tribal youth to qualify NEET 2022 exam

"ನಾನು ಇಂಟರ್‌ನೆಟ್‌ಗೆ ಪ್ರವೇಶ ಪಡೆಯಲು ಶ್ರೀನಗರಕ್ಕೆ ಹೋಗಬೇಕಿತ್ತು ಮತ್ತು ನನ್ನ ಅಧ್ಯಯನದ ವೀಡಿಯೊಗಳನ್ನು ಡೌನ್‌ಲೋಡ್ ಮಾಡುತ್ತಿದ್ದೆ. ನನ್ನ ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಕೂಡ ಇತ್ತು. ನಾನು 3 ರಿಂದ 4 ನೇ ತರಗತಿಯಲ್ಲಿದ್ದಾಗ ನನಗೆ ಹೊಸ ಪುಸ್ತಕಗಳನ್ನು ಖರೀದಿಸಲು ನನ್ನ ಬಳಿ ಹಣವಿರಲಿಲ್ಲ" ಎಂದು ಅವರು ಹೇಳಿಕೊಂಡಿದ್ದಾರೆ.

ಮೆಡಿಕಲ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಕೋರ್ಸ್ ಶುಲ್ಕದಲ್ಲಿ ಹೆಚ್ಚಳವಿಲ್ಲ!ಮೆಡಿಕಲ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಕೋರ್ಸ್ ಶುಲ್ಕದಲ್ಲಿ ಹೆಚ್ಚಳವಿಲ್ಲ!

NEET 2022 ರಲ್ಲಿ ಯಶಸ್ವಿಯಾಗಲು ಸ್ಫೂರ್ತಿ ಸಿಕ್ಕಿದ್ದರ ಬಗ್ಗೆ ಮಾತನಾಡಿದ ಅಹ್ಮದ್, 'ನನಗೆ ಎದುರಾದ ಕಷ್ಟಗಳೇ ನನ್ನನ್ನು ಉತ್ತಮವಾಗಿ ಓದಲು ಪ್ರೇರೇಪಿಸಿತು' ಎಂದು ಹೇಳಿದರು. "ಬುಡಕಟ್ಟು ಜನರ ಬಗ್ಗೆ ಹೇಳುವುದಾದರೆ, ನಾವು ಅನೇಕ ಮೂಲಭೂತ ಸೌಲಭ್ಯಗಳನ್ನು ಎದುರಿಸುತ್ತೇವೆ ಮತ್ತು ನಾನು ಸೇರಿರುವ ಸ್ಥಳ, ಇಲ್ಲಿನ ಜನರು ಹೆಚ್ಚಾಗಿ ವಿದ್ಯುತ್ ಮತ್ತು ಸಂಪರ್ಕದ ಸಮಸ್ಯೆಯನ್ನು ಎದುರಿಸುತ್ತಾರೆ. ಹಾಗಾಗಿ ಈ ಜನರಿಗಾಗಿ ಏನಾದರೂ ಮಾಡಬೇಕೆಂದು ನನ್ನ ಮನಸ್ಸಿನಲ್ಲಿ ಯಾವಾಗಲೂ ಇರುತ್ತದೆ" ಎಂದು ಹೇಳಿದರು.

ನೀಟ್ ವಿಳಂಬ: ಕೋರ್ಸ್ ಬಿಟ್ಟ ವಿದ್ಯಾರ್ಥಿಗಳಿಗೆ ಶುಲ್ಕ ವಾಪಸ್ನೀಟ್ ವಿಳಂಬ: ಕೋರ್ಸ್ ಬಿಟ್ಟ ವಿದ್ಯಾರ್ಥಿಗಳಿಗೆ ಶುಲ್ಕ ವಾಪಸ್

"ನನ್ನ ಪ್ರಯಾಣಕ್ಕೆ ನನ್ನ ಸಹೋದರ ಮತ್ತು ತಾಯಿ ನನ್ನನ್ನು ಪ್ರೋತ್ಸಾಹಿಸಿ ಬೆಂಬಲಿಸಿದರು. ಅವಿದ್ಯಾವಂತರಾದ ನನ್ನ ತಾಯಿ ನನ್ನನ್ನು ಓದಲು ಪ್ರೋತ್ಸಾಹಿಸುತ್ತಿದ್ದರು ನನ್ನ ಕುಟುಂಬದಿಂದ ಅಪಾರ ಬೆಂಬಲವಿದೆ" ಎಂದು ಅಹ್ಮದ್ ಹೇಳಿಕೊಂಡಿದ್ದಾರೆ.

ತುಫೈಲ್ ಅಹ್ಮದ್ ಅವರ ಸಹೋದರ ಮಾತನಾಡಿ, 'ಇವನ ಸಾಧನೆ ನಮ್ಮ ಕುಟುಂಬ ಮತ್ತು ಇಡೀ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ. ಹಲವು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದರೂ ಆತ ಸಾಧನೆ ಮಾಡಿದ್ದಾನೆ. ನಮಗೆ ತುಂಬಾ ಸಂತೋಷವಾಗಿದೆ, ಇದು ಸಂಭವಿಸುತ್ತದೆ ಎಂದು ನಾವು ಎಂದಿಗೂ ಯೋಚಿಸಲಿಲ್ಲ. ಆದರೆ ಅವರು ಅದನ್ನು ಕುಟುಂಬದ ಬೆಂಬಲ ಮತ್ತು ಅವರ ಶ್ರಮದಿಂದ ಮಾಡಿದ್ದಾರೆ. ಇದು ನಮಗೆ ಮತ್ತು ನಮ್ಮ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗಿದೆ " ಎಂದು ಹೇಳಿದರು.

English summary
A tribal boy from Mulnar Harwan in Jammu and Kashmir's Srinagar has cracked the National Eligibility Entrance Test (NEET) 2022 exam and made his family and community proud.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X