ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತ್ ನಾಗ್ ಸ್ಫೋಟದಲ್ಲಿ ಬಳಸಿದ್ದು ಮೇಡ್ ಇನ್ ಚೀನಾ ಸ್ಟೀಲ್ ಬುಲೆಟ್!

|
Google Oneindia Kannada News

ಶ್ರೀನಗರ, ಜೂನ್ 20: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಜೂನ್ 17 ರಂದು ಸಿಆರ್ ಪಿಎಫ್ ಯೋಧರ ವಾಹನದ ಮೇಲೆ ನಡೆದ ಗುಂಡಿನ ದಾಳಿಗೆ ಬಳಸಿದ್ದು ಸ್ಟೀಲ್ ಬುಲೆಟ್ ಗಳನ್ನು ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.

ಮಾಮೂಲಿ ಬುಲೆಟ್ ಗಿಂತ ಹೆಚ್ಚು ಅಪಾಯಕಾರಿಯಾದ ಈ ಸ್ಟೀಲ್ ಬುಲೆಟ್ ಗಳು ಚೀನಾದಲ್ಲಿ ನಿರ್ಮಾಣವಾಗಿರುವಂಥವು ಎಂಬ ಅಂಶಗಳೂ ಪತ್ತೆಯಾಗಿವೆ.

ಪುಲ್ವಾಮಾ ಉಗ್ರ ದಾಳಿ, ಗಾಯಗೊಂಡಿದ್ದ ಇಬ್ಬರು ಯೋಧರು ಹುತಾತ್ಮಪುಲ್ವಾಮಾ ಉಗ್ರ ದಾಳಿ, ಗಾಯಗೊಂಡಿದ್ದ ಇಬ್ಬರು ಯೋಧರು ಹುತಾತ್ಮ

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅರಿಹಾಲ್ ಗ್ರಾಮದಲ್ಲಿ ಸೇನೆಯ ವಿಶೇಷ ಪಡೆಗಳ ಬೆಂಗಾವಲು ವಾಹನದ ಮೇಲೆ ಈ ಸುಧಾರಿತ ಸ್ಫೋಟಕ(ಐಇಡಿ)ದ ಮೂಲಕ ಉಗ್ರರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿ ದಾಳಿ ನಡೆಸಿದ್ದ ಒಂಬತ್ತು ಯೋಧರು ಗಾಯಗೊಂಡಿದ್ದರು.

Made in China steel bullets used in terror Anantnag attack

ಮರುದಿನವೇ ಅವರಲ್ಲಿ ಇಬ್ಬರು ಯೋಧರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ದಾಳಿಯ ಸಮಯದಲ್ಲಿ ಓರ್ವ ಉಗ್ರನನ್ನೂ ಕೊಲ್ಲಲಾಗಿತ್ತು, ಮತ್ತು ಆತನಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಆತನ ಬಳಿ ಇದ್ದ ಸ್ಟೀಲ್ ಬುಲೆಟ್ ಸಹ ತನಿಖಾಧಿಕಾರಿಗಳ ಕಣ್ಣಿಗೆ ಬಿದ್ದಿದೆ.

ಹುತಾತ್ಮನ ಮಗನನ್ನು ಹೊತ್ತು ಕಣ್ಣೀರಿಟ್ಟ ಪೊಲೀಸ್: ವೈರಲ್ ಚಿತ್ರಹುತಾತ್ಮನ ಮಗನನ್ನು ಹೊತ್ತು ಕಣ್ಣೀರಿಟ್ಟ ಪೊಲೀಸ್: ವೈರಲ್ ಚಿತ್ರ

ಬುಲೆಟ್ ಪ್ರೂಫ್ ಜಾಕೆಟ್ ಹಾಕಿದ್ದರೂ ಸಹ ಅದನ್ನು ತೂರಿಹೋಗುವ ಸಾಮರ್ಥ್ಯವಿರುವ ಈ ಸ್ಟೀಲ್ ಬುಲೆಟ್ ಗಳು ಭಾರೀ ಅಪಾಯಕಾರಿಯಾಗಿವೆ. ಆದ್ದರಿಂದಲೇ ಈ ಘಟನೆಯಲ್ಲಿ ಯೋಧರು ತೀವ್ರವಾಗಿ ಗಾಯಗೊಂಡಿದ್ದರು.

ಪುಲ್ವಾಮಾದಲ್ಲಿ ಗ್ರೆನೇಡ್ ಎಸೆದ ಉಗ್ರರು: ಎಂಟು ಮಂದಿಗೆ ಗಾಯಪುಲ್ವಾಮಾದಲ್ಲಿ ಗ್ರೆನೇಡ್ ಎಸೆದ ಉಗ್ರರು: ಎಂಟು ಮಂದಿಗೆ ಗಾಯ

ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ತನ್ನ ದಾಳಿಯ ಸಂದರ್ಭದಲ್ಲೆಲ್ಲ ಇವೇ ಸ್ಟೀಲ್ ಬುಲೆಟ್ ಗಳನ್ನು ಬಳಸುತ್ತದೆ ಎನ್ನಲಾಗಿದೆ. ಡಿಸೆಂಬರ 27, 2017 ರಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಮೊದಲ ಬಾರಿಗೆ ಈ ಸ್ಟೀಲ್ ಬುಲೆಟ್ ಬಳಸಲಾಗಿತ್ತು.

English summary
The investigation on Anantnag Terror attack on June 12 revealed that, made in China steel bullets were used by terrorists in the attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X