ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಐಟಿ ಸೆಲ್‌ನಲ್ಲಿದ್ದವ ಈಗ ಲಷ್ಕರೆ ಉಗ್ರ

|
Google Oneindia Kannada News

ಶ್ರೀನಗರ, ಜುಲೈ 3: ರಾಜಸ್ಥಾನದ ಉದಯಪುರ್‌ನಲ್ಲಿ ದರ್ಜಿಯ ಕತ್ತು ಸೀಳಿ ಭಯಾನಕವಾಗಿ ಹತ್ಯೆಗೈದಿದ್ದ ಇಬ್ಬರು ಮುಸ್ಲಿಮರು ಹಿಂದೆ ಬಿಜೆಪಿಯ ಕಾರ್ಯಕರ್ತರಾಗಿದ್ದರೆಂಬ ಸುದ್ದಿ ಇತ್ತು. ಈಗ ಅಂಥ ಮತ್ತೊಂದು ಪ್ರಕರಣ ವರದಿಯಾಗಿದೆ.. ಬಿಜೆಪಿಯ ಕಾರ್ಯಕರ್ತನಾಗಿದ್ದವನೊಬ್ಬ ಈಗ ಲಷ್ಕರೆ ತೈಯಬಾ ಸಂಘಟನೆಯ ಉಗ್ರಗಾಮಿಯಾಗಿರುವುದು ಬೆಳಕಿಗೆ ಬಂದಿದೆ.

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಎಲ್‌ಇಟಿ ಸಂಘಟನೆಗೆ ಸೇರಿದ ಇಬ್ಬರು ಉಗ್ರಗಾಮಿಗಳನ್ನು ಭದ್ರತಾ ಪಡೆಗಳು ಬಂಧಿಸಿವೆ. ಈ ಇಬ್ಬರಲ್ಲಿ ಒಬ್ಬಾತ ಹಿಂದೆ ಬಿಜೆಪಿಯ ಕಾರ್ಯಕರ್ತನಾಗಿದ್ದನೆನ್ನಲಾಗಿದೆ.

ಪುಲಿಟ್ಚರ್ ಪುರಸ್ಕೃತ ಕಾಶ್ಮೀರೀ ಪತ್ರಕರ್ತೆ ಸನಾಗೆ ವಿದೇಶಕ್ಕೆ ಹಾರಲು ತಡೆಪುಲಿಟ್ಚರ್ ಪುರಸ್ಕೃತ ಕಾಶ್ಮೀರೀ ಪತ್ರಕರ್ತೆ ಸನಾಗೆ ವಿದೇಶಕ್ಕೆ ಹಾರಲು ತಡೆ

ಬಂಧಿತ ತಾಲಿಬ್ ಹುಸೇನ್ ಹಿಂದೆ ಜಮ್ಮು ಪ್ರಾಂತ್ಯದ ಅಲ್ಪಸಂಖ್ಯಾತ ಮೋರ್ಚಾದ ಐಟಿ ಮತ್ತು ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥನಾಗಿದ್ದುದು ತಿಳಿದುಬಂದಿದೆ. ಆದರೆ, ಬಿಜೆಪಿ ನೀಡಿರುವ ಸ್ಪಷ್ಟನೆ ಪ್ರಕಾರ, ತಾಲಿಬ್ ಹುಸೇನ್ ಕೇವಲ 18 ದಿನ ಮಾತ್ರ ಪಕ್ಷದ ಸದಸ್ಯನಾಗಿದ್ದನಂತೆ. 2022, ಮೇ 27ರಂದು ಆತ ರಾಜೀನಾಮೆ ನೀಡಿದ್ದನೆಂದು ಹೇಳಲಾಗಿದೆ.

Two LeT Terrorists Arrested in Kashmir, One Was Ex BJP Worker

ಗ್ರಾಮಸ್ಥರ ಸಾಹಸ
ರಿಯಾಸಿ ಜಿಲ್ಲೆಯ ತುಕ್ಸೋನ್ ಧೋಕ್ ಗ್ರಾಮದ ನಿವಾಸಿಗಳ ಸಹಾಯದಿಂದ ಪೊಲೀಸರು ಫೈಜಲ್ ಅಹ್ಮದ್ ದರ್ ಮತ್ತು ತಾಲಿಬ್ ಹುಸೇನ್ ಅವರಿಬ್ಬರನ್ನು ಬಂಧಿಸಿದ್ದಾರೆ. ಫೈಜಲ್ ಅಹ್ಮದ್ ದರ್ ಪುಲ್ವಾಮ ಜಿಲ್ಲೆಯವನಾದರೆ, ತಾಲಿಬ್ ಹುಸೇನ್ ರಾಜೌರಿ ಜಿಲ್ಲೆಯವನು. ಪೊಲೀಸರು ಬಂಧಿತರಿಂದ ಎರಡು ಎಕೆ ರೈಫಲ್, ಏಳು ಗ್ರಿನೇಡ್ ಮತ್ತು ಒಂದು ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ಭಯೋತ್ಪಾದಕರನ್ನು ಹಿಡಿಯಲು ಸಹಕರಿಸಿದ ತುಕ್ಸೋನ್ ಧೋಕ್ ಗ್ರಾಮದ ಜನರಿಗೆ ಪೊಲೀಸ್ ಇಲಾಖೆ 2 ಲಕ್ಷ ಬಹುಮಾನ ಪ್ರಕಟಿಸಿದೆ. ಕಣಿವೆ ರಾಜ್ಯದ ಆಡಳಿತ ನೋಡಿಕೊಳ್ಳುತ್ತಿರುವ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ಈ ಗ್ರಾಮಕ್ಕೆ 5 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ. ಅಪಾಯವನ್ನು ಲೆಕ್ಕಿಸಿದರೆ ಇಬ್ಬರು ಕಟ್ಟರ್ ಉಗ್ರರನ್ನು ಹಿಡಿಯಲು ಗ್ರಾಮಸ್ಥರು ತೋರಿದ ಧೈರ್ಯ, ಸಾಹಸಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.

ಪುಲ್ವಾಮಾದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಪೊಲೀಸ್ ಅಧಿಕಾರಿ ಗುಂಡಿಗೆ ಬಲಿಪುಲ್ವಾಮಾದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಪೊಲೀಸ್ ಅಧಿಕಾರಿ ಗುಂಡಿಗೆ ಬಲಿ

"ರಿಯಾಸಿಯಲ್ಲಿ ಇಬ್ಬರು ಮೋಸ್ ವಾಂಟೆಡ್ ಉಗ್ರರನ್ನು ಹಿಡಿದ ಗ್ರಾಮಸ್ಥರ ಧೈರ್ಯಕ್ಕೆ ನನ್ನ ವಂದನೆ. ಭಯೋತ್ಪಾದನೆಯ ಅಂತ್ಯ ಹೆಚ್ಚು ಕಾಲ ಇಲ್ಲ ಎಂಬುದಕ್ಕೆ ಗ್ರಾಮಸ್ಥರ ಈ ಕೆಚ್ಚು ಸೂಚಿಸುತ್ತದೆ. ಆ ಗ್ರಾಮಸ್ಥರಿಗೆ ಜಮ್ಮು ಕಾಶ್ಮೀರ ಸರಕಾರ ೫ ಲಕ್ಷ ರೂ ಬಹುಮಾನ ನೀಡುತ್ತದೆ" ಎಂದು ಲೆ| ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.

ಇತರ ಹಲವು ಪ್ರಕರಣಗಳಲ್ಲಿ ತಾಲಿಬ್ ಭಾಗಿ
ಇತ್ತೀಚೆಗಷ್ಟೇ ರಾಜೋರಿಯಲ್ಲಿ ಪೊಲೀಸರು ಉಗ್ರರ ಜಾಲವೊಂದನ್ನು ಭೇದಿಸಿ ಇಬ್ಬರನ್ನು ಬಂಧಿಸಿದ್ದರು. ಸಾಕಷ್ಟು ಪ್ರಮಾಣದಲ್ಲಿ ಐಇಡಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೇ, ಆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಾಲಿಬ್ ಹುಸೇನ್ ತಪ್ಪಿಸಿಕೊಂಡಿದ್ದ. ಆತನ ತಲೆ ಮೇಲೆ ಪೊಲೀಸರು ಬಹುಮಾನ ಪ್ರಕಟಿಸಿದ್ದರು.

ಜಮ್ಮು ಕಾಶ್ಮೀರದ ಬಿಜೆಪಿಯಲ್ಲಿ ಹೇಗೋ ನುಸುಳುವಲ್ಲಿ ಯಶಸ್ವಿಯಾಗಿದ್ದ ತಾಲಿಬ್ ಹುಸೇನ್ ಪಾಕಿಸ್ತಾನದ ಎಲ್‌ಇಟಿ ಉಗ್ರ ಖಾಸಿಂ ಜೊತೆ ನಿರಂತರ ಸಂಪರ್ಕದಲ್ಲಿದ್ದನೆನ್ನಲಾಗಿದೆ. ರಾಜೋರಿ ಜಿಲ್ಲೆಯಲ್ಲಿ ಸಂಭವಿಸಿದ ಮೂರು ಬಾಂಬ್ ಸ್ಫೋಟ ಘಟನೆಗಳಲ್ಲಿ ಈತನ ಕೈವಾಡ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Police have arrested 2 terrorists belonging to Lashker-e-taiba in Reasi district of Jammu and Kashmir. One of them Talib Hussain was with BJP minority wing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X