ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಕ್ ಚುನಾವಣೆ; 15 ಸೀಟು ಗೆದ್ದು ಬೀಗಿದ ಬಿಜೆಪಿ

|
Google Oneindia Kannada News

ಶ್ರೀನಗರ, ಅಕ್ಟೋಬರ್ 26: ಜಮ್ಮು ಮತ್ತು ಕಾಶ್ಮೀರದ ಲಡಾಕ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಜಯಗಳಿಸಿದೆ. 26 ಸೀಟುಗಳಿಗೆ ಚುನಾವಣೆ ನಡೆದಿತ್ತು.

ಸೋಮವಾರ ಲಡಾಕ್ ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿ (ಎಲ್‌ಎಎಚ್‌ಡಿಸಿ) ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್‌ 9 ಸೀಟುಗಳಲ್ಲಿ ಜಯಗಳಿಸಿದೆ. ಪಕ್ಷೇತರ ಅಭ್ಯರ್ಥಿಗಳು 2 ಸ್ಥಾನದಲ್ಲಿ ಗೆದ್ದಿದ್ದಾರೆ.

ಶುಭಸುದ್ದಿ: ಲಡಾಕ್ ಪ್ರದೇಶದಿಂದ ಸೇನಾ ಪಡೆಗಳು ಹಿಂದಕ್ಕೆ ಶುಭಸುದ್ದಿ: ಲಡಾಕ್ ಪ್ರದೇಶದಿಂದ ಸೇನಾ ಪಡೆಗಳು ಹಿಂದಕ್ಕೆ

1995ರಲ್ಲಿ ಲಡಾಕ್‌ ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿಯನ್ನು ಸ್ಥಾಪನೆ ಮಾಡಲಾಯಿತು. ಲಡಾಕ್ ಪ್ರಾಂತ್ಯಕ್ಕೆ ಸ್ವಾಯತತ್ತೆ ಕಲ್ಪಿಸಲು ಮಂಡಳಿಯನ್ನು ರಚನೆ ಮಾಡಲಾಗಿತ್ತು.

ಲಡಾಕ್ ನಲ್ಲಿ ಚೀನಾ-ಭಾರತ ಸೈನಿಕರ ಮುಖಾಮುಖಿ ಕ್ಯಾಮೆರಾದಲ್ಲಿ ಸೆರೆಲಡಾಕ್ ನಲ್ಲಿ ಚೀನಾ-ಭಾರತ ಸೈನಿಕರ ಮುಖಾಮುಖಿ ಕ್ಯಾಮೆರಾದಲ್ಲಿ ಸೆರೆ

Ladakh Autonomous Hill Development Council Election 15 Seats For BJP

ಈ ಬಾರಿಯ ಚುನಾವಣೆ ಬಹಳ ವಿಶೇಷವಾಗಿತ್ತು. ಇದೇ ಮೊದಲ ಬಾರಿಗೆ ಎಲ್‌ಎಎಚ್‌ಡಿಸಿ ಚುನಾವಣೆಯಲ್ಲಿ ಮತಯಂತ್ರಗಳನ್ನು ಬಳಕೆ ಮಾಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರದಿಂದ ಲಡಾಕ್ ಪ್ರಾಂತ್ಯವನ್ನು ವಿಭಜನೆ ಮಾಡಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಲಾಗಿದೆ.

ಈ ಗಳಿಗೆಗಾಗಿ 70 ವರ್ಷದಿಂದ ಕಾದಿದ್ದೆವು: ಲಡಾಕ್ ಸಂಸದ ಸಂತಸಈ ಗಳಿಗೆಗಾಗಿ 70 ವರ್ಷದಿಂದ ಕಾದಿದ್ದೆವು: ಲಡಾಕ್ ಸಂಸದ ಸಂತಸ

ಲಡಾಕ್ ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿಯಲ್ಲಿ 30 ಸ್ಥಾನಗಳಿವೆ. ಇವುಗಳಲ್ಲಿ 26 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುತ್ತದೆ. ನಾಲ್ಕು ಸ್ಥಾನಗಳಿಗೆ ಸದಸ್ಯರನ್ನು ನಾಮ ನಿರ್ದೇಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಕ್ಟೋಬರ್ 16ರಂದು 26 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಸೋಮವಾರ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಚುನಾವಣೆ ಮುಂದೂಡುವಂತೆ ವಿರೋಧ ಪಕ್ಷಗಳು ಮಾಡಿದ್ದ ಮನವಿಯನ್ನು ತಳ್ಳಿ ಹಾಕಲಾಗಿತ್ತು.

English summary
BJP bagged 15 seats in the Ladakh Autonomous Hill Development Council election. Elections held for 26 seats and Congress wins 9 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X