ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರಿ ಎಂದು ಒಪ್ಪಿಕೊಳ್ಳುವಂತೆ ಹಿಂಸೆ ನೀಡಲಾಯ್ತು: ಕತುವಾ ಆರೋಪಿ ಅಳಲು

|
Google Oneindia Kannada News

ಶ್ರೀನಗರ, ಜೂನ್ 11: ಕತುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಿರ್ದೋಷಿ ಎಂದು ಬಿಡುಗಡೆಯಾದ ವಿಶಾಲ್, ತಮಗೆ ನಿರಂತರವಾಗಿ ಕಿರುಕುಳ ನೀಡಲಾಗಿತ್ತು ಎಂದು ಎಂದು ಅಳಲು ತೋಡಿಕೊಂಡಿದ್ದಾರೆ.

"ನೀನು ಅತ್ಯಾಚಾರ ಮಾಡಿರುವುದಾಗಿ ಒಪ್ಪಿಕೋ ಎಂದು ನನ್ನ ಮೇಲೆ ಒತ್ತಡ ಹೇರಲಾಗುತ್ತಿತ್ತು. ಜೊತೆಗೆ ಕೊಲೆಯಲ್ಲೂ ನನ್ನ ಪಾತ್ರವಿದೆ ಎಂದು ಆರೋಪಿಸಲಾಗಿತ್ತು. ನನಗೆ ಮಾತ್ರವಲ್ಲದೆ, ನನ್ನ ಇಡೀ ಕುಟುಂಬದವರಿಗೂ ತನಿಖೆಯ ಹೆಸರಿನಲ್ಲಿ ಕಿರುಕುಳ ನೀಡಲಾಗಿತ್ತು" ಎಂದು ವಿಶಾಲ್ ಹೇಳಿದ್ದಾರೆ.

ಕತುವಾ ಅತ್ಯಾಚಾರ ಪ್ರಕರಣ : ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಕತುವಾ ಅತ್ಯಾಚಾರ ಪ್ರಕರಣ : ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಜನವರಿ ತಿಂಗಳಿನಲ್ಲಿ ಕತುವಾದ ಎಂಟು ವರ್ಷದ ಮಗುವನ್ನು ಅಪಹರಿಸಿ, ಅದಕ್ಕೆ ಮತ್ತುಬರುವ ಔಷಧ ನೀಡಿ ಹಲವು ದಿನಗಳ ಕಾಲ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಆಕೆಯನ್ನು ಕೆಲ ದಿನಗಳ ಕಾಲ ಹತ್ತಿರದ ದೇವಾಲಯವೊಂದರಲ್ಲಿ ಇರಿಸಿಕೊಳ್ಳಲಾಗಿತ್ತು ಎಂಬುದೂ ಆರೋಪ. ಘಟನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣವನ್ನು ತ್ವರಿತ ನ್ಯಾಯಾಲಯದ ಮೂಲಕ 90 ದಿನಗಳೊಳಗೆ ಇತ್ಯರ್ಥಗೊಳಿಸಬೇಕೆಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆದೇಶಿಸಿದ್ದರು.

Kathua rape case: Accused Vishal said, he was tortured

ಸೋಮವಾರ ಈ ಪ್ರಕರಣದ ತೀರ್ಪನ್ನು ಪಠಾಣ್ ಕೋಟ್ ನ್ಯಾಯಾಲಯ ಪ್ರಕಟಿಸಿದ್ದು, ಏಳು ಆರೋಪಿಗಳನ್ನು ದೋಷಿ ಎಂದು ಘೋಷಿಸಿತ್ತು. ವಿಶಾಲ್ ನಿರ್ದೋಶಿ ಎಂದಿತ್ತು.

ಕತುವಾ ತೀರ್ಪು: ಇಬ್ಬರು ಪೊಲೀಸ್ ಸೇರಿದಂತೆ ಆರು ಜನ ದೋಷಿಕತುವಾ ತೀರ್ಪು: ಇಬ್ಬರು ಪೊಲೀಸ್ ಸೇರಿದಂತೆ ಆರು ಜನ ದೋಷಿ

ಗ್ರಾಮದ ಮುಖ್ಯಸ್ಥ ಸಂಜಿ ರಾಮ್, ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳಾದ ದೀಪಕ್ ಖಾಜುರಿಯಾ ಮತ್ತು ಸುರೆಂದರ್ ವರ್ಮಾ, ಮುಖ್ಯ ಪೇದೆ ತಿಲಕ್ ರಾಜ್, ಆನಂದ್ ದತ್ತಾ ಮತ್ತು ಪರ್ವೇಶ್ ಕುಮಾರ್ ಎಂಬುವವರನ್ನು ದೋಷಿಗಳು ಎಂದು ಕೋರ್ಟು ಪರಿಗಣಿಸಿದ್ದು, ಇವರಲ್ಲಿ ಮೂರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಿತ್ತು.

English summary
Kathua rape case: Accused Vishal said, he was tortured. Supreme court
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X