ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ವಿರುದ್ಧ ಪ್ರತಿಭಟನಾರ್ಥವಾಗಿ ಐಎಎಸ್ ಹುದ್ದೆ ತ್ಯಜಿಸಿದ ಕಾಶ್ಮೀರಿ ಷಾ ಫಸಲ್

|
Google Oneindia Kannada News

ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಜನವರಿ 9: ಐಎಎಸ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಗಳಿಸಿ, ಕಾಶ್ಮೀರದ ಹಲವಾರು ಯುವಕರಿಗೆ ಲೋಕಸೇವಾ ಪರೀಕ್ಷೆ ಬರೆಯಲು ಸ್ಫೂರ್ತಿಯಾಗಿದ್ದ ಷಾ ಫಸಲ್, ಸರಕಾರಕ್ಕೆ ರಾಜೀನಾಮೆ ನೀಡಿ, ಚುನಾವಣೆ ರಾಜಕೀಯಕ್ಕೆ ಇಳಿಯುವುದಾಗಿ ಬುಧವಾರ ಘೋಷಿಸಿದ್ದಾರೆ.

ಕಾಶ್ಮೀರದಲ್ಲಿ ನಡೆಯುತ್ತಿರುವ ಅಪ್ರಚೋದಿತ ಹತ್ಯೆಗಳು ಹಾಗೂ ಕೇಂದ್ರ ಸರಕಾರದಿಂದ ಯಾವುದೇ ವಿಶ್ವಾಸಾರ್ಹ ರಾಜಕೀಯ ನಡೆ ತೆಗೆದುಕೊಳ್ಳದ ಕಾರಣಕ್ಕಾಗಿ ಪ್ರತಿಭಟನಾ ರೂಪವಾಗಿ ಇಂಥ ತೀರ್ಮಾನ ಕೈಗೊಂಡಿರುವುದಾಗಿ ಮೂವತ್ತೈದು ವರ್ಷದ ಷಾ ಫಸಲ್ ಹೇಳಿದ್ದಾರೆ.

ಗೃಹಸಚಿವಾಲಯದಿಂದ ಜಮ್ಮು-ಕಾಶ್ಮೀರದ ಬಗ್ಗೆ ಸ್ಫೋಟಕ ಮಾಹಿತಿ ಗೃಹಸಚಿವಾಲಯದಿಂದ ಜಮ್ಮು-ಕಾಶ್ಮೀರದ ಬಗ್ಗೆ ಸ್ಫೋಟಕ ಮಾಹಿತಿ

ನಾನು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಕಾಶ್ಮೀರಿ ಬದುಕುಗಳು ಮುಖ್ಯ ಎಂದು ಫಸಲ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಫಸಲ್ 2010ನೇ ಸಾಲಿನ ಐಎಎಸ್ ಅಧಿಕಾರಿ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಮೊದಲ ಕಾಶ್ಮೀರಿ. ಅವರ ನೇಮಕಾತಿಯಿಂದ ಕಾಶ್ಮೀರಿ ಯುವಕರ ಮನಸ್ಥಿತಿ ಬದಲಾಗುತ್ತದೆ ಎಂಬ ನಿರೀಕ್ಷೆ ಇತ್ತು.

Kashmir’s IAS topper Shah Faesal resigns to protest against union government

ತನ್ನ ಮುಂದಿನ ಯೋಜನೆಯನ್ನು ಶುಕ್ರವಾರದಂದು ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಆದರೆ ಮೂಲಗಳ ಪ್ರಕಾರ, ಫಸಲ್ ನ್ಯಾಷನಲ್ ಕಾನ್ಫರೆನ್ಸ್ ಸೇರ್ಪಡೆ ಆಗಲಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕಾಶ್ಮೀರದ ಬಾರಾಮುಲ್ಲಾದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದು, ಫಸಲ್ ರ ರಾಜಕೀಯ ಪ್ರವೇಶ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆಡಳಿತಾತ್ಮಕವಾಗಿ ನಷ್ಟವಾದರೂ ರಾಜಕೀಯಕ್ಕೆ ಲಾಭವಾಗುತ್ತದೆ. ಷಾ ಫಸಲ್ ರನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ಜಮ್ಮು ಗಡಿ ನಿಯಂತ್ರಣ ರೇಖೆ ಬಳಿ ಅನುಮಾನಾಸ್ಪದ ಓಡಾಟ,ಸೇನಾ ಕಾರ್ಯಾಚರಣೆ ಜಮ್ಮು ಗಡಿ ನಿಯಂತ್ರಣ ರೇಖೆ ಬಳಿ ಅನುಮಾನಾಸ್ಪದ ಓಡಾಟ,ಸೇನಾ ಕಾರ್ಯಾಚರಣೆ

ಫಸಲ್ ಅವರು ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯವರು. ತನ್ನ ತಾಯಿ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯೊಬ್ಬನ ವರದಿಯನ್ನು ಕಳೆದ ವರ್ಷ ಟ್ವೀಟ್ ಮಾಡಿದ್ದ ಫಸಲ್ ಗೆ ಸರಕಾರದಿಂದ ಷೋಕಾಸ್ ನೀಡಲಾಗಿತ್ತು. ಗುಜರಾತ್ ನಲ್ಲಿ ನಡೆದಿದ್ದ ಆ ಕೃತ್ಯದ ಬಗ್ಗೆ ವ್ಯಕ್ತಪಡಿಸಿದ್ದ ಅಭಿಪ್ರಾಯ ಅದಾಗಿತ್ತು. ಕಳೆದ ಆಗಸ್ಟ್ ಸಂವಿಧಾನದ ಪರಿಚ್ಛೇದ 35A ಬಗ್ಗೆ ಕೂಡ ಟ್ವೀಟ್ ಮಾಡಿದ್ದರು ಫಸಲ್.

English summary
Shah Faesal, IAS topper whose success inspired many young Kashmiris to join the civil services, announced on Wednesday that he has decided to resign from the government and join electoral politics. Faesal, 35, attributed his decision to protest what he described as “the unabated killings in Kashmir and absence of any credible political initiative from Government”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X