• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಶ್ಮೀರ ಸುರಂಗ ಕುಸಿತ: ಸಾವಿನ ಸಂಖ್ಯೆ 9ಕ್ಕೆ ಏರಿಕೆ

|
Google Oneindia Kannada News

ಶ್ರೀನಗರ್, ಮೇ 21: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ರಾಮಬನ್‌ನಲ್ಲಿ ನಿರ್ಮಿಸಲಾಗುತ್ತಿದ್ದ ಸುರಂಗವೊಂದು ಕುಸಿದ ಘಟನೆಯಲ್ಲಿ ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿದೆ. ಸುರಂಗದ ಅವಶೇಷಗಳ ಅಡಿ ಇನ್ನೂ ಒಂದಿಬ್ಬರು ಮಂದಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ, ಅವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ.
ನಿನ್ನೆ ಶುಕ್ರವಾರ ಈ ಜಾಗದಲ್ಲಿ ಭೂಕುಸಿತವಾದ್ದರಿಂದ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಶನಿವಾರ ಕಾರ್ಯಾಚರಣೆ ಪುನಾರಂಭಗೊಂಡಿತು.

"ಭೂಕುಸಿತ ಪ್ರದೇಶದಲ್ಲಿ ಅವಶೇಷ ತೆರವು ಕಾರ್ಯಾಚರಣೆ ಪುನಾರಂಭಿಸಿದ್ದೇವೆ. ಆದಷ್ಟೂ ಬೇಗ ಕಾರ್ಯ ಮುಗಿಸಲು ಯಂತ್ರೋಪಕರಣ ಮತ್ತು ತಾಂತ್ರಿಕ ಪರಿಣತಿಯ ಜನರ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ" ಎಂದು ತಹಶೀಲ್ದಾರ್ ಜಾವೇದ್ ಹೇಳಿದ್ದಾರೆ.

ನಿನ್ನೆ ಘಟನಾ ಸ್ಥಳದಲ್ಲಿ ಒಂದು ಮೃತದೇಹ ಸಿಕ್ಕಿತ್ತು. ಅವಶೇಷಗಳ ಅಡಿಯಲ್ಲಿ ಇಂದು ಶನಿವಾರ ಎಂಟು ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಇದರೊಂದಿಗೆ ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿದೆ.

"ದೊಡ್ಡ ಬಂಡೆಯ ಅಡಿಯಲ್ಲಿ ಮತ್ತೊಂದು ದೇಹ ಕಾಣಿಸಿದೆ. ಯಂತ್ರಗಳ ಮೂಲಕ ಈ ಬಂಡೆಯನ್ನು ತೆಗೆದು ದೇಹ ಹೊರತೆಗೆಯುವ ಪ್ರಯತ್ನ ಆಗುತ್ತಿದೆ. ರಕ್ಷಣಾ ಕಾರ್ಯಾಚರಣೆಯ ಕೊನೆಯ ಹಂತಕ್ಕೆ ಬಂದಿದ್ದೇವೆ," ಎಂದು ರಾಮಬನ್ ಎಸ್‌ಎಸ್‌ಪಿ ಮೋಹಿತಾ ಶರ್ಮಾ ಹೇಳಿಕೆ ನೀಡಿದ್ದರು. ಅದಾದ ಬಳಿಕ ಇನ್ನೂ ಏಳು ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಸಾವನ್ನಪ್ಪಿದವರಲ್ಲಿ ಐವರು ಬಂಗಾಳ ರಾಜ್ಯದವರಾದರೆ, ನೇಪಾಳದ ಇಬ್ಬರು ಮತ್ತು ಅಸ್ಸಾಮ್‌ನ ಒಬ್ಬ ವ್ಯಕ್ತಿ ಇದ್ದಾರೆ. ಇನ್ನಿಬ್ಬರು ಸ್ಥಳೀಯರಾಗಿದ್ದಾರೆ. ಕಾಮಗಾರಿಯಲ್ಲಿ ನಿರ್ಲಕ್ಷ್ಯತನ ತೋರಲಾಗಿದೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಲಿಲಾಗಿದೆ ಎಂದು ಮೋಹಿತಾ ಶರ್ಮಾ ಮಾಹಿತಿ ನೀಡಿದ್ದಾರೆ.

Kashmir tunnel collapse incident: Death Toll Raises to Nine

ಎನಿದು ಸುರಂಗ?
ರಾಮಬನ್ ಜಿಲ್ಲೆಯಲ್ಲಿರುವ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ಪಥದ ರಸ್ತೆಯಿರುವ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಅದರ ಒಂದು ಭಾಗವು ಗುರುವಾರ ರಾತ್ರಿ ಕುಸಿದುಹೋಗಿತ್ತು. ಈ ಘಟನೆಯಲ್ಲಿ ನಿನ್ನೆ ಶುಕ್ರವಾರ ಮೂವರು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Number of People died in Jammu and Kashmir's Ramban Tunnel Collapse Incident has raised to Nine, after 8 bodies found today Saturday. Still one person is likely to have trapped inside the debris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X