• search
 • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದುಡ್ಡು ಕೊಟ್ಟರೆ 15 ನಿಮಿಷದಲ್ಲೇ ಕೊರೊನಾ ವೈರಸ್ ನೆಗೆಟಿವ್ ರಿಪೋರ್ಟ್

|

ಶ್ರೀನಗರ, ಸೆಪ್ಟೆಂಬರ್ 17: ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ ನಕಲಿ ರಿಪೋರ್ಟ್‌ಗಳನ್ನು ನೀಡಿ ಹಣ ಮಾಡಿಕೊಳ್ಳುವ ದಂಧೆಯೂ ಶುರುವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ಅಧಿಕಾರಿಗಳು ಹಣ ಪಡೆದುಕೊಂಡು ಕೊರೊನಾ ವೈರಸ್ ನೆಗೆಟಿವ್ ಎಂದು ಬಿಂಬಿಸುವ ರಿಪೋರ್ಟ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಶ್ರೀನಗರದ ಪ್ರವಾಸಿ ಸ್ವಾಗತ ಕೇಂದ್ರದಲ್ಲಿ ಇಬ್ಬರು ಕ್ಯಾಬ್ ಚಾಲಕರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕೊರೊನಾ ವೈರಸ್ ಪಿಡುಗಿನ ಭೀತಿಯ ನಡುವೆಯೇ ಕಾಶ್ಮೀರ ಕಣಿವೆಯ ಹೊರ ಭಾಗಕ್ಕೆ ಪ್ರಯಾಣ ಕೈಗೊಳ್ಳಲು ಬಯಸುವವರಿಗೆ ಕೋವಿಡ್ ನೆಗೆಟಿವ್ ನಕಲಿ ವರದಿಗಳ ಮಾರಾಟದಲ್ಲಿ ಅವರು ತೊಡಗಿದ್ದರು ಎಂದು ಆರೋಪಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಹಣ ನೀಡಿದರೆ ಕೇವಲ 15 ನಿಮಿಷದಲ್ಲಿಯೇ ಜನರ ಕೋವಿಡ್ ನೆಗೆಟಿವ್ ವರದಿ ಸಿದ್ಧವಾಗುತ್ತದೆ.

ಸರ್ಕಾರದ ನಿಯಮ ಪಾಲಿಸದ 36 ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್

ಈ ಇಬ್ಬರೂ ಕ್ಯಾಬ್ ಚಾಲಕರು ಕಾಶ್ಮೀರದಾಚೆಗೆ ಪ್ರಯಾಣಿಸಬೇಕಿದ್ದ ಕುಟುಂಬವೊಂದಕ್ಕೆ ನಕಲಿ ಕೊರೊನಾ ವೈರಸ್ ನೆಗೆಟಿವ್ ಪ್ರಮಾಣಪತ್ರಗಳನ್ನು ಒದಗಿಸಿಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮುಂದೆ ಓದಿ.

ಜೀವಕ್ಕೆ ಮಾರಕವಾಗುತ್ತಿದೆ ವಂಚನೆ

ಜೀವಕ್ಕೆ ಮಾರಕವಾಗುತ್ತಿದೆ ವಂಚನೆ

'ಕೆಲವು ಖಾಸಗಿ ಪ್ರಯೋಗಾಲಯಗಳು ನಕಲಿ ಕೊರೊನಾ ವೈರಸ್ ನೆಗೆಟಿವ್ ವರದಿಗಳನ್ನು ನೀಡುತ್ತಿರುವುದು ಬೆಳಕಿಗೆ ಬಂದಿವೆ. ಇದರಿಂದ ಅನೇಕರ ಜೀವಕ್ಕೆ ಮಾರಕವಾಗುತ್ತಿವೆ. ಈಗ ಅವುಗಳ ಪರಿಶೀಲನೆ ನಡೆಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇದರ ತನಿಖೆಯ ವರದಿ ಬರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಕಲಿ ರಿಪೋರ್ಟ್‌ಗೆ ಬೇಡಿಕೆ ಹೆಚ್ಚಳ

ನಕಲಿ ರಿಪೋರ್ಟ್‌ಗೆ ಬೇಡಿಕೆ ಹೆಚ್ಚಳ

ಅಕ್ಟೋಬರ್‌ನಲ್ಲಿ ಕಣಿವೆ ರಾಜ್ಯದಲ್ಲಿ ವಿಪರೀತ ಚಳಿ ವಾತಾವರಣ ಉಂಟಾಗಲಿದೆ. ಇದರಿಂದ ಅನೇಕರು ಕಾಶ್ಮೀರದಿಂದ ಹೊರಭಾಗಕ್ಕೆ ಪ್ರತಿ ವರ್ಷ ಪ್ರಯಾಣಿಸುತ್ತಾರೆ. ಈ ಬಾರಿಯೂ ಜನರು ಕಾಶ್ಮೀರದಾಚೆಗೆ ಪ್ರಯಾಣಿಸಲು ಅನುಕೂಲವಾಗುವಂತೆ ಕೊರೊನಾ ವೈರಸ್ ನೆಗೆಟಿವ್ ವರದಿಗಳನ್ನು ಪಡೆದುಕೊಳ್ಳಲು ಈ ಜಾಲದ ಹಿಂದೆ ಹೋಗುವ ಸಾಧ್ಯತೆ ಇದೆ. ಇದರಿಂದ ನಕಲಿ ವರದಿಗಳ ಹಾವಳಿ ಹೆಚ್ಚುವಾಗುವ ಸಂಭವವಿದೆ. ಕೆಲಸಕ್ಕೆ ಮರಳುವ ಉದ್ಯೋಗಿಗಳು ಕೂಡ ತಮ್ಮ ಕೊರೊನಾ ವೈರಸ್ ವರದಿ ಸಲ್ಲಿಸುವಂತೆ ಕಂಪೆನಿಗಳು ಕೇಳುತ್ತಿರುವುದರಿಂದ ಅದಕ್ಕೆ ಬೇಡಿಕೆ ಹೆಚ್ಚುತ್ತಿದೆ.

ಕೊರೊನಾಗೆ ಬಲಿಯಾದ 382 ವೈದ್ಯರ ತ್ಯಾಗ ಕಡೆಗಣಿಸಿದ ಸರ್ಕಾರ: ಐಎಂಎ ಆರೋಪ

ಅಧಿಕಾರಿಗಳಿಗೆ ಸವಾಲು

ಅಧಿಕಾರಿಗಳಿಗೆ ಸವಾಲು

ಕಾಶ್ಮೀರದಲ್ಲಿ ಪ್ರವಾಸಿ ಚಟುವಟಿಕೆಗಳು ಮತ್ತೆ ಶುರುವಾಗುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ನಕಲಿ ಕೊರೊನಾ ವೈರಸ್ ಪ್ರಮಾಣಪತ್ರದ ಹಾವಳಿಯನ್ನು ನಿಯಂತ್ರಿಸುವುದು ಇಲಾಖೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಚಳಿಗಾಲದಲ್ಲು ಯುದ್ಧ ಮಾಡೋಕೆ Ready ..China ನಾ ಸುಮ್ನೆ ಬಿಡಲ್ಲಾ | Oneindia Kannada
  15 ನಿಮಿಷದಲ್ಲೇ ವರದಿ ಸಿದ್ಧ!

  15 ನಿಮಿಷದಲ್ಲೇ ವರದಿ ಸಿದ್ಧ!

  ಕುಟುಂಬದ ಜತೆಗೆ ಕಾಶ್ಮೀರದಿಂದ ಹೊರಗೆ ಪ್ರಯಾಣಿಸಬೇಕಿದ್ದ ವ್ಯಕ್ತಿಯೊಬ್ಬರು ಪ್ರವಾಸಿ ಸ್ವಾಗತ ಕೇಂದ್ರವನ್ನು (ಟಿಆರ್‌ಸಿ) ಸಂಪರ್ಕಿಸಿದ್ದರು. ಪ್ರಯಾಣದ ನಿಯಮಗಳ ಬಗ್ಗೆ ವಿಚಾರಿಸಿದ್ದ ವ್ಯಕ್ತಿ, ತಾವು ಕೋವಿಡ್ ಪರೀಕ್ಷೆಗೆ ಒಳಗಾಗಿಲ್ಲ ಎಂದು ತಿಳಿಸಿದ್ದರು. ಪ್ರಯಾಣಿಕರ ಆಧಾರ್ ಕಾರ್ಡ್‌ಗಳನ್ನು ನೀಡುವಂತೆ ಕೇಳಿದ ಕ್ಯಾಬ್ ಚಾಲಕರು, ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು. 15 ನಿಮಿಷದಲ್ಲಿಯೇ ಹಿಂದಿರುಗಿದ ಚಾಲಕರು, ಕೋವಿಡ್ ನೆಗೆಟಿವ್ ರಿಪೋರ್ಟ್‌ಗಳನ್ನು ತಂದುಕೊಟ್ಟಿದ್ದರು. ಇದನ್ನು ಆ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದರು.

  ಕೊರೊನಾ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಸೂಚಿಸುವುದು ಅಸಾಧ್ಯ: ಐಸಿಎಂಆರ್

  English summary
  Jammu and Kashmir police have arrested two taxi drivers for selling fake coronavirus negative reports for huge amount.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X