ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲಿ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಬಹುತೇಕ ಉಗ್ರರ ಹತ್ಯೆ

|
Google Oneindia Kannada News

ಶ್ರೀನಗರ, ನವೆಂಬರ್ 29: ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಬಹುತೇಕ ಉಗ್ರರನ್ನು ಸದೆಬಡಿಯಲಾಗಿದೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರವು ಕಳೆದ ತಿಂಗಳು ಹಲವು ಮುಗ್ಧ ನಾಗರಿಕರ ಹತ್ಯೆಗಳಿಗೆ ಸಾಕ್ಷಿಯಾಯಿತು, ಈ ಪ್ರದೇಶದಲ್ಲಿ ಹಿಂಸಾಚಾರ ಮತ್ತು ಪ್ರಕ್ಷುಬ್ಧತೆಯ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ 2 ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ನಾಮಮುಂದಿನ 2 ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ನಾಮ

ಭಯೋತ್ಪಾದನಾ-ನಿಗ್ರಹ ಡ್ರಿಲ್‌ನ ಪ್ರಮುಖ ಗುರಿ ಕಣಿವೆಯಲ್ಲಿ ಯಾವುದೇ ಅಮಾಯಕರು ಉಗ್ರರಿಂದ ಜೀವ ಕಳೆದುಕೊಳ್ಳಬಾರದು ಮತ್ತು ಭದ್ರತಾ ಪಡೆಗಳ ಎಲ್ಲಾ ವಿಭಾಗಗಳು ಅದನ್ನು ಸಾಧಿಸಲು ಪ್ರಯತ್ನಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

Kashmir: Nearly All Terrorists Involved In Civilian Killings Last Month Neutralised

ಸಶಸ್ತ್ರ ಪಡೆಗಳು ಈಗ ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಎದುರಿಸಲು ಸಣ್ಣ ತಂಡಗಳನ್ನು ಒಳಗೊಂಡಿರುವ ಗುಪ್ತಚರ ಮಾಹಿತಿ ಆಧಾರಿತ "ಸರ್ಜಿಕಲ್ ಕಾರ್ಯಾಚರಣೆಗಳ" ಮೇಲೆ ನಿಗಾ ವಹಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ನಾಗರಿಕ ಹಾನಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಗುಪ್ತಚರ ಸಂಸ್ಥೆಗಳು ಮತ್ತು ಸೇನೆಯ ನಡುವೆ ಉತ್ತಮ ಸಮನ್ವಯದ ಜೊತೆಗೆ, ಸೂಕ್ಷ್ಮ ಚೌಕಟ್ಟಿನ ಅಡಿಯಲ್ಲಿ ಭಯೋತ್ಪಾದನೆಯನ್ನು ಎದುರಿಸಲು ಪರಿಷ್ಕರಿಸಿದ ವಿಧಾನವನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ 2 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡುತ್ತೇವೆ ಎಂದು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ. ಒಟ್ಟಿನಲ್ಲಿ ಜಮ್ಮು ಕಾಶ್ಮೀರದಿಂದ ಭಯೋತ್ಪಾದನೆಯನ್ನು ನಿರ್ನಾಮ ಮಾಡಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದರು.

ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕೇಂದ್ರವೇ ಕಾರಣ: ಮುಫ್ತಿಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕೇಂದ್ರವೇ ಕಾರಣ: ಮುಫ್ತಿ ಅನೇಕ ಮಂದಿ ಕಾನೂನು ಹಾಗೂ ಸುವ್ಯವಸ್ಥೆ ಬಗ್ಗೆ ಚಿಂತಿಸುತ್ತಾರೆ, ಪರಿಸ್ಥಿತಿಯು ಇದೀಗ ಬದಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಎರಡು ವರ್ಷದ ಬಳಿಕ ಭಯೋತ್ಪಾದನೆಯನ್ನು ನೀವು ನೋಡಲು ಸಾಧ್ಯವೇ ಇಲ್ಲ. ಆ ದಿಕ್ಕನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ.

ಪಾಕಿಸ್ತಾನದ ಸುಮಾರು 38 ಉಗ್ರರು ಕಣಿವೆ ಪ್ರದೇಶದಲ್ಲಿ ಸಕ್ರಿಯರಾಗಿದ್ದಾರೆ ಎನ್ನುವ ಗುಪ್ತಚರ ಮಾಹಿತಿ ಬಂದಿದ್ದು, ಅವರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ ಎಂದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಭದ್ರತಾ ಸಂಸ್ಥೆಗಳು ಸಜ್ಜಾಗಿದ್ದು, ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಇರುವ ಉಗ್ರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.

ವಿಶೇಷ ಮಾಹಿತಿಯ ಪ್ರಕಾರ, ಕೇಂದ್ರ ಗುಪ್ತಚರ ಸಂಸ್ಥೆಗಳು ಜಮ್ಮು ಮತ್ತು ಕಾಶ್ಮೀರದ 9 ಪ್ರದೇಶಗಳಲ್ಲಿ ಒಟ್ಟು 97 ಭಯೋತ್ಪಾದಕರನ್ನು ಗುರುತಿಸಿವೆ. ಈ 97 ಭಯೋತ್ಪಾದಕರ ಪೈಕಿ 24 ಹಿಜ್ಬುಲ್ ಮುಜಾಹಿದ್ದೀನ್, 52 ಲಷ್ಕರ್, 11 ಅಲ್ ಬದರ್ ಮತ್ತು 9 ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದವರಾಗಿದ್ದಾರೆ.

ಪುಲ್ವಾಮಾದಲ್ಲಿ ಹೆಚ್ಚಿದೆ ಉಗ್ರರ ಉಪಸ್ಥಿತಿ : ಮೂಲಗಳ ಪ್ರಕಾರ ಕಾಶ್ಮೀರದ 9 ಪ್ರದೇಶಗಳ ಪೈಕಿ ಹೆಚ್ಚಿನ ಭಯೋತ್ಪಾದಕರುಪುಲ್ವಾಮಾದಲ್ಲಿದ್ದಾರೆ. ಪುಲ್ವಾಮಾದಲ್ಲಿ ಒಟ್ಟು 36 ಭಯೋತ್ಪಾದಕರು ಇದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ 10 ಹಿಜ್ಬುಲ್ ಮುಜಾಹಿದ್ದೀನ್, 17 ಲಷ್ಕರ್, 4 ಅಲಬ್ದಾರ್, 4 ಜೈಶ್ ಭಯೋತ್ಪಾದಕರು. ಇದಾದ ನಂತರ ಶೋಪಿಯಾನ್ ನಲ್ಲಿ ಒಟ್ಟು 24 ಸಕ್ರಿಯ ಭಯೋತ್ಪಾದಕರು ಇದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್(ಟಿಆರ್‌ಎಫ್) ಕಮಾಂಡರ್ ಸೇರಿದಂತೆ ಐವರು ಉಗ್ರರು ಗುಂಡಿಗೆ ಬಲಿಯಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಪೊಂಬೆ ಮತ್ತು ಗೋಪಾಲ್‌ಪೋರಾ ಗ್ರಾಮಗಳಲ್ಲಿ ನವೆಂಬರ್ 17ರಂದು ನಡೆದಿತ್ತು.

ಗೋಪಾಲ್‌ಪೋರಾ ಗ್ರಾಮಗಳಲ್ಲಿ ಅಂದು ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಟಿಆರ್‌ಎಫ್ ಕಮಾಂಡರ್ ಸೇರಿದಂತೆ ಐವರು ಉಗ್ರರು ಹತರಾಗಿದ್ದಾರೆ. ಪೊಂಬೆಯಲ್ಲಿ ಮೂವರು ಉಗ್ರರು ಸಾವನ್ನಪ್ಪಿದರೆ, ಗೋಪಾಲ್‌ಪೋರಾದಲ್ಲಿ ಇಬ್ಬರು ಹತರಾಗಿದ್ದಾರೆ.

English summary
Nearly all the terrorists involved in the killings of civilians in Jammu and Kashmir last month have been neutralised and the armed forces are now focussing on intelligence-based ”surgical operations” involving smaller teams to deal with terror activities in the Union Territory, sources in the security establishment said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X