ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರದಲ್ಲಿ ನಾಪತ್ತೆಯಾದ ಯೋಧರ ಶೋಧ ಕಾರ್ಯ

|
Google Oneindia Kannada News

ಶ್ರೀನಗರ, ಅಕ್ಟೋಬರ್ 16: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಸೋಮವಾರ ಆರಂಭಗೊಂಡ ಕಾರ್ಯಾಚರಣೆ ವೇಳೆ ಕಿರಿಯ ನಿಯೋಜಿತ ಅಧಿಕಾರಿ (ಜೆಸಿಒ) ಸೇರಿದಂತೆ ಇಬ್ಬರು ಯೋಧರು ನಾಪತ್ತೆಯಾದ ಹಿನ್ನೆಲೆ ಭಾರತೀಯ ಸೇನೆಯು ಶೋಧ ಕಾರ್ಯಾಚರಣೆಯನ್ನು ಶುರು ಮಾಡಿದೆ.
ಮೂಲಗಳ ಪ್ರಕಾರ, ಕಳೆದ ಗುರುವಾರ ಸಂಜೆ ಸೇನೆ ಹಾಗೂ ಉಗ್ರರ ನಡುವೆ ಭಾರಿ ಗುಂಡಿನ ಚಕಮಕಿ ನಡೆದ ನಂತರದಲ್ಲಿ ಒಬ್ಬ ಜೆಸಿಒ ಮತ್ತು ಒಬ್ಬ ಯೋಧ ನಾಪತ್ತೆಯಾಗಿದ್ದಾರೆ. ಈ ಹಿಂದೆ ಪೂಂಚ್ -ರಜೌರಿ ಅರಣ್ಯ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ವೇಳೆ ರೈಫಲ್ ಮ್ಯಾನ್ ಯೋಗಂಬರ್ ಸಿಂಗ್ ಮತ್ತು ರೈಫಲ್ ಮ್ಯಾನ್ ವಿಕ್ರಮ್ ಸಿಂಗ್ ನೇಗಿ ಎಂಬ ಇಬ್ಬರು ಯೋಧರು ಹುತಾತ್ಮರಾಗಿದ್ದರು. ನಾಲ್ಕು ದಿನಗಳ ನಂತರ ಅದೇ ಪ್ರದೇಶದಲ್ಲಿ ಐವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದರು.

ಪೂಂಚ್ ಮತ್ತು ರಜೌರಿ ಅರಣ್ಯ ಪ್ರದೇಶದ ಒಳಗೆ ಪ್ರವೇಶಿಸಿ ಹುತಾತ್ಮ ಯೋಧರ ಮೃತದೇಹಗಳನ್ನು ತೆಗೆದುಕೊಂಡು ಬರಬೇಕಿತ್ತು. ಈ ಹಿನ್ನೆಲೆ ಮೃತದೇಹಗಳನ್ನು ಮರಳಿ ಪಡೆಯುವುದೂ ಸಹ ಸೇನೆಗೆ ಒಂದು ದೊಡ್ಡ ಸವಾಲಾಗಿತ್ತು. ಈ ಮಧ್ಯೆ ಗುರುವಾರ ಸಂಜೆ ಹೊತ್ತಿಗೆ ಸೇನೆಯು ಜೆಸಿಒ ಜೊತೆ ಸಂಪರ್ಕ ಕಳೆದುಕೊಂಡಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಭದ್ರತೆ ಕೊಡ್ತೀವಿ, ಊರು ಬಿಡಬೇಡಿ": ಬೆದರಿದ ನೌಕರರಿಗೆ ಕಾಶ್ಮೀರ ಸರ್ಕಾರದ ಭರವಸೆ

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ:
"ಜಮ್ಮು ಕಾಶ್ಮೀರ ಪೂಂಚ್ ಜಿಲ್ಲೆಯ ಮೆಂಧರ್ ಉಪ ವಿಭಾಗದ ನರಖಾಸ್ ಅರಣ್ಯದ ಸಾಮಾನ್ಯ ಪ್ರದೇಶದಲ್ಲಿ ನಡೆಯುತ್ತಿದೆ. ಕಳೆದ 14 ಅಕ್ಟೋಬರ್ 2021 ರಂದು ಸಂಜೆ ಸಮಯದ ವೇಳೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಸೇನಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯಿತು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಜೆಸಿಒ ಮತ್ತು ಒಬ್ಬ ಸೈನಿಕ ತೀವ್ರವಾಗಿ ಗಾಯಗೊಂಡಿದ್ದು, ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ," ಎಂದು ಘಟನೆ ಬಗ್ಗೆ ಸೇನೆಯು ಮಾಹಿತಿ ನೀಡಿದೆ.

JCO and one Soldiers Go Missing During Encounter; Massive Army Operation In J&K

ನಾಪತ್ತೆಯಾದ ಜೆಸಿಓ ಪತ್ತೆಗೆ ಶೋಧ ಕಾರ್ಯ:
ಇಬ್ಬರು ಯೋಧರು ಹುತಾತ್ಮರಾಗಿರುವ ಬಗ್ಗೆ ಶುಕ್ರವಾರ ಸೇನೆಯು ದೃಢಪಡಿಸಿದ್ದು, ನಾಪತ್ತೆಯಾಗಿರುವ ಜೆಸಿಓ ಬಗ್ಗೆ ಯಾವುದೇ ರೀತಿ ಮಾಹಿತಿ ಸಿಕ್ಕಿಲ್ಲ," ಎಂದು ಹೇಳಿದ್ದಾರೆ. ಗಾಯಗೊಂಡ ಜೆಸಿಒ ಅನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಬೆಳಿಗ್ಗೆ ಆರಂಭಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ನಾವು ಗಾಯಗೊಂಡ ಜೆಸಿಒ ಅನ್ನು ಪತ್ತೆ ಮಾಡಿ ತರುವುದಕ್ಕೆ ಶುಕ್ರವಾರ ಸಾಧ್ಯವಾಗಿಲ್ಲ, ಬೆಳಿಗ್ಗೆ ಶೋಧ ಕಾರ್ಯಾಚರಣೆಯನ್ನು ಪುನರಾರಂಭಗೊಳ್ಳುತ್ತದೆ" ಎಂದು ಅವರು ಹೇಳಿದರು.

ನರಖಾಸ್ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ:
ಶನಿವಾರ ಬೆಳಿಗ್ಗೆ ಮೆಂಧರ್ ಉಪ ವಿಭಾಗದ ನರಖಾಸ್ ಅರಣ್ಯ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಕಾಡಿನೊಳಗೆ ಅಡಗಿ ಕುಳಿತಿರುವ ಭಯೋತ್ಪಾದಕರನ್ನು ಹೊರಹಾಕಲು ಸೇನೆಯು ಮುಂದಾದ ಸಂದರ್ಭದಲ್ಲಿ ಸೇನೆ ಮತ್ತು ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಸ್ಫೋಟದ ಸದ್ದು ಕೇಳಿಬಂದಿತು.

6ನೇ ದಿನಕ್ಕೆ ಕಾಲಿಟ್ಟ ಸೇನಾ ಕಾರ್ಯಾಚರಣೆ:
ಈ ಹಿಂದೆ ಡೇರಾ ಕಿ ಗಲಿಯಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ಸೇನೆಯು ಕೂಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಿತು. ಆರಂಭಿಕ ಶೂಟೌಟ್‌ನಲ್ಲಿ, ಒಬ್ಬ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಸೇರಿದಂತೆ ಐವರು ಸೈನಿಕರು ಸಾವನ್ನಪ್ಪಿದರು. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೇನೆಯು ಒಂದೇ ಎನ್ಕೌಂಟರ್ನಲ್ಲಿ ಇಷ್ಟೊಂದು ಸಾವುನೋವುಗಳನ್ನು ಅನುಭವಿಸಿದೆ. ಈ ಪ್ರದೇಶದಲ್ಲಿ ಉಗ್ರರ ನಿಗ್ರಹಕ್ಕೆ ಸೇನೆ ಲಗ್ಗೆಯಿಟ್ಟಿತು. ಅಂದಿನಿಂದ ಸೇನೆಯು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಆರಂಭಿಸಲಾಗಿದ್ದು, ಎನ್ಕೌಂಟರ್ ಇಂದು ಆರನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಇಲ್ಲಿಯವರೆಗೆ ಯಾವುದೇ ಭಯೋತ್ಪಾದಕರನ್ನು ಕೊಲ್ಲಲಾಗಿಲ್ಲ ಎಂದು ತಿಳಿದು ಬಂದಿದೆ.

English summary
JCO and one Soldiers Go Missing During Encounter; Massive Army Operation In Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X