• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು ಕಾಶ್ಮೀರದಲ್ಲಿ ಯೋಧ ನಾಪತ್ತೆ: ಸುಟ್ಟ ಸ್ಥಿತಿಯಲ್ಲಿ ವಾಹನ ಪತ್ತೆ

|

ಶ್ರೀನಗರ, ಆಗಸ್ಟ್ 03:ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಯೋಧರೊಬ್ಬರು ನಾಪತ್ತೆಯಾಗಿದ್ದು, ಸುಟ್ಟ ಸ್ಥಿತಿಯಲ್ಲಿ ಅವರ ವಾಹನ ಪತ್ತೆಯಾಗಿದೆ.

ಉಗ್ರರು ಅವರನ್ನು ಅಪಹರಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾಹನವು ಮುಜಾಫರ್ ಮನ್ಸೂರ್ ಹೆಸರಿನಲ್ಲಿ ದಾಖಲಾಗಿದೆ. ಅವರು ಶಾಪಿಯನ್‌ನಲ್ಲಿ ವಾಸಿಸುವವರಾಗಿದ್ದಾರೆ. ಗುಲ್ಗಾಂನ ರಾಂಭಾಮಾ ಪ್ರದೇಶದಲ್ಲಿ ಭಾನುವಾರ ರಾತ್ರಿ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ಪಾಕಿಸ್ತಾನದ 320ಕ್ಕೂ ಹೆಚ್ಚು ಉಗ್ರರಿಂದ ಭಾರತದೊಳಗೆ ನುಸುಳಲು ಯತ್ನ

ಮನ್ಸೂರ್ ಟೆರಟೋರಿಯಲ್ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅವರನ್ನು ಉಗ್ರರು ಅಪಹರಿಸಿರಬಹುದು ಎಂದು ಅಂದಾಜಿಸಲಾಗಿದೆ. ಶೀಘ್ರವೇ ಅವರನ್ನು ಹುಡುಕಿ ಸುರಕ್ಷಿತವಾಗಿ ಕರೆತರಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ 27 ಲಾಂಚ್ ಪ್ಯಾಡ್‌ಗಳು ಸಕ್ರಿಯವಾಗಿದ್ದು, 320ಕ್ಕೂ ಹೆಚ್ಚು ಉಗ್ರರು ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಕಳೆದ ವರ್ಷ 60 ಭಯೋತ್ಪಾದಕರು ಒಳನುಸುಳಿದ್ದರು, ಈ ವರ್ಷ 35 ಮಂದಿ ಉಗ್ರರು ಮಾತ್ರ ಭಾರತಕ್ಕೆ ನುಸುಳಿದ್ದಾರೆ, 2020 ರ ಮೊದಲ ವರ್ಷದಲ್ಲಿ 429 ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ಕಳೆದ ವರ್ಷ ಇದೇ ಸಮಯಕ್ಕೆ 605 ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದವು.

English summary
A Territorial Army (TA) jawan has gone missing and his vehicle was found burnt in Kulgam district of Jammu and Kashmir, officials said on Monday. The officials suspect that he might have been kidnapped by militants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X