ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರ: ಡ್ರೋನ್ ದಾಳಿ ಅಪಾಯದ ಬೆನ್ನಲ್ಲೇ ಕಣ್ಗಾವಲು ವ್ಯವಸ್ಥೆ

|
Google Oneindia Kannada News

ಶ್ರೀನಗರ್, ಜುಲೈ 15: ಜಮ್ಮು-ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಡ್ರೋನ್ ದಾಳಿ ಅಪಾಯ ಹೆಚ್ಚಿದ ಹಿನ್ನೆಲೆ ಭಾರತೀಯ ಸೇನಾ ಪಡೆ ತೀವ್ರ ಕಟ್ಟೆಚ್ಚರ ವಹಿಸಿದೆ. ಗಡಿ ನಿಯಂತ್ರಣ ರೇಖೆಯ ಬಳಿ ಹೆಚ್ಚುವರಿ ಭಾರತೀಯ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಡ್ರೋನ್ ದಾಳಿಯ ಅಪಾಯ ಹೆಚ್ಚಾಗಿರುವ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಕಗ್ಗಲತ್ತಲ ರಾತ್ರಿಯಲ್ಲಿ ಗಡಿ ನುಗ್ಗುವ ಅಪಾಯಕಾರಿ ಡ್ರೋನ್ ಮೇಲೆ ಕಣ್ಣಿಡುವುದಕ್ಕೆ ಕಣ್ಗಾವಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇನ್ನೊಂದು ಕಡೆ ಜಮ್ಮು ಕಾಶ್ಮೀರದ ಪೂಂಚ್ ಗಡಿ ಪ್ರದೇಶದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಜಮ್ಮು ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ವಿರುದ್ಧ ಗುಂಡಿನ ದಾಳಿಜಮ್ಮು ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ವಿರುದ್ಧ ಗುಂಡಿನ ದಾಳಿ

ಮಂಗಳವಾರ ಅರ್ನಿಯಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿ ಬಳಿ ಡ್ರೋನ್ ಪತ್ತೆಯಾಗಿತ್ತು. ತಡರಾತ್ರಿ ಕಾಣಿಸಿಕೊಂಡ ಡ್ರೋನ್ ಮೇಲೆ ಬಿಎಸ್ಎಫ್ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದರು. ಭಾರತೀಯ ಭದ್ರತಾ ಸಿಬ್ಬಂದಿ ಡ್ರೋನ್ ವಿರುದ್ಧ ಗುಂಡಿನ ದಾಳಿ ಆರಂಭಿಸುತ್ತಿದ್ದಂತೆ ಎಚ್ಚೆತ್ತುಕೊಂಡು ಡ್ರೋನ್ ನಿರ್ವಾಹಕ ಅದನ್ನು ಹಿಂದಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಆಗ ಡ್ರೋನ್ ಪಾಕಿಸ್ತಾನದ ಕಡೆಗೆ ಹಿಂತಿರುಗಿರುವುದನ್ನು ಗಮನಿಸಲಾಗಿದೆ.

Jammu-Kashmir: Surveillance System Used In Border Area After Increase In Drone Threats

ಡ್ರೋನ್ ಮೇಲಿನ ಗುಂಡಿನ ದಾಳಿ ಬಗ್ಗೆ ಸ್ಪಷ್ಟನೆ:

"ಅದು ಜುಲೈ 13ರ ರಾತ್ರಿ ಸಮಯ 9.52, ಅರ್ನಿಯಾ ಸೆಕ್ಟರ್‌ನಲ್ಲಿ ಮಿಣುಕುವ ಕೆಂಪು ಬಣ್ಣದ ದೀಪವನ್ನು ನಮ್ಮ ಸೇನಾ ಯೋಧರು ಗಮನಿಸಿದರು. ಅದು ನಮ್ಮ ಗಡಿಯ 200 ಮೀಟರ್ ಒಳಗೆ ಪ್ರವೇಶಿಸಿದ್ದು, ತಕ್ಷಣ ಎಚ್ಚೆತ್ತುಕೊಂಡ ಯೋಧರು ಆ ಕೆಂಪು ದೀಪದ ಕಡೆಯಲ್ಲಿ ಗುಂಡಿನ ದಾಳಿ ಶುರು ಮಾಡಿದರು. ಈ ವೇಳೆ ಕೆಂಪು ದೀಪ ಹಿಮ್ಮುಖವಾಗಿ ಸಂಚರಿಸಿದ್ದು, ಅದೇ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಆದರೆ ಈವರೆಗೂ ಯಾವುದೇ ಡ್ರೋನ್ ಪತ್ತೆಯಾಗಿಲ್ಲ," ಎಂದು ಬಿಎಸ್ಎಫ್ ಸ್ಪಷ್ಟಪಡಿಸಿದೆ.

ಜಮ್ಮು ಐಎಎಫ್ ಕೇಂದ್ರದಲ್ಲಿ ಡ್ರೋನ್ ದಾಳಿ:

ಕಳೆದ ಜೂನ್ 27ರ ಭಾನುವಾರ ಭಾರತೀಯ ವಾಯುಸೇನೆ ನಿಯಂತ್ರಣದಲ್ಲಿರುವ ಜಮ್ಮು ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ ನಡೆಸಲಾಗಿತ್ತು. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದ್ದು, ಇಬ್ಬರು ಭಾರತೀಯ ಸೇನಾ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ.

ಬೆಳಗಿನ ಜಾವ 1.37ರ ಹೊತ್ತಿಗೆ ಮೊದಲ ಸ್ಫೋಟ ಸಂಭವಿಸಿದ್ದು, ಕಟ್ಟಡದ ತಾಂತ್ರಿಕ ವಿಭಾಗದಲ್ಲಿನ ಮೇಲ್ಛಾವಣಿಗೆ ಹಾನಿಯಾಗಿತ್ತು. ಬೆಳಗಿನ ಜಾವ 1.43ರ ಹೊತ್ತಿಗೆ ಒಂದೇ ಕಿಲೋ ಮೀಟರ್ ದೂರದಲ್ಲಿ ಇರುವ ಬಯಲು ಪ್ರದೇಶದಲ್ಲಿ ಎರಡನೇ ಸ್ಫೋಟ ಸಂಭವಿಸಿತ್ತು.

"ಭಾರತೀಯ ವಾಯು ನೆಲೆ ನಿಯಂತ್ರಣದ ಜಮ್ಮು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಎರಡು ಲಘುಸ್ಫೋಟವು ಉಗ್ರರ ದಾಳಿಯಾಗಿದೆ," ಎಂದು ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಸ್ಪಷ್ಟಪಡಸಿದ್ದಾರೆ. ಮೊದಲ ಬಾರಿಗೆ ಉಗ್ರರ ದಾಳಿಗೆ ಡ್ರೋನ್ ಬಳಕೆ ಆಗಿರುವುದು ಗೊತ್ತಾಗಿದೆ. ಅಲ್ಲದೇ, ಈ ಡ್ರೋನ್ ದಾಳಿ ಹಿಂದೆ ಪಾಕಿಸ್ತಾನ ಉಗ್ರ ಸಂಘಟನೆ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು.

English summary
Jammu-Kashmir: Surveillance System Used In Border Area After Increase In Drone Threats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X