ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರದಲ್ಲಿ 3,000 ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ಸ್ಯಾನಿಟೈಸರ್

|
Google Oneindia Kannada News

ಶ್ರೀನಗರ, ಏಪ್ರಿಲ್.10: ವಿಶ್ವದಾದ್ಯಂತ ವ್ಯಾಪಿಸಿರುವ ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವುದಕ್ಕೆ ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಬಳಸುವುದು ಸೂಕ್ತ ಎಂದು ಸರ್ಕಾರ ಮತ್ತು ವೈದ್ಯರು ಸಲಹೆ ನೀಡಿದ್ದಾರೆ.

ಮುಂದುವರಿದ ದೇಶಗಳಲ್ಲೇ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳ ಅಭಾವ ಎದ್ದು ಕಾಣುತ್ತಿದೆ. ಇನ್ನು, 130 ಕೋಟಿ ಜನಸಂಖ್ಯೆಯುಳ್ಳ ಭಾರತದ ಕಥೆ ಕೇಳಬೇಕೇ. ಸಹಜವಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ನೀಡಲು ಆಗುತ್ತಿಲ್ಲ.

ಕೊರೊನಾ ದಾಳಿಗೆ ಡೇಂಜರ್ ಝೋನ್‌ ಪ್ರವೇಶಿಸಿರುವ ಭಾರತದ 5 ರಾಜ್ಯಗಳುಕೊರೊನಾ ದಾಳಿಗೆ ಡೇಂಜರ್ ಝೋನ್‌ ಪ್ರವೇಶಿಸಿರುವ ಭಾರತದ 5 ರಾಜ್ಯಗಳು

ದೇಶದಲ್ಲಿ ಎದುರಾಗಿರುವ ಈ ಸಮಸ್ಯೆಯನ್ನು ಮನಗಂಡು ಜಮ್ಮ-ಕಾಶ್ಮೀರದಲ್ಲಿ ಪೊಲೀಸರೇ ತಮ್ಮ ಸಿಬ್ಬಂದಿಗಾಗಿ ಮಾಸ್ಕ್ ಗಳನ್ನು ತಯಾರಿಸಲು ಮುಂದಾಗಿದ್ದಾರೆ. ಪೂಂಚ್ ಪ್ರದೇಶದಲ್ಲಿರುವ ಕಲ್ಯಾಣ ಕೇಂದ್ರದಲ್ಲಿ ಮಾಸ್ಕ್ ಗಳನ್ನು ತಯಾರಿ ಮಾಡಲಾಗುತ್ತಿದೆ.

Jammu Kashmir Police Manufacturing Masks For Personnels To Fight Against Coronavirus

3,000 ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ:

ಪೂಂಚ್ ಪ್ರದೇಶದಲ್ಲಿ ಇರುವ ಕಲ್ಯಾಣ ಕೇಂದ್ರದಲ್ಲಿ ಮಾಸ್ಕ್ ಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಜಿಲ್ಲೆಯ ಸುಮಾರು 3,000 ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ನ್ನು ವಿತರಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಅಂಗ್ರಾಲ್ ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ಇದುವರೆಗೂ 158 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ಈ ಪೈಕಿ ನಾಲ್ವರು ಮಾರಕ ರೋಗಕ್ಕೆ ಬಲಿಯಾಗಿದ್ದಾರೆ. ನಾಲ್ವರು ಗುಣಮುಖರಾಗಿದ್ದು ಆಸ್ಪತ್ರೆಗಳಿಗೆ ಡಿಸ್ಚಾರ್ಜ್ ಆಗಿದ್ದಾರೆ.

English summary
Jammu Kashmir Police Manufacturing Masks For Personnels To Fight Against Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X