ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರಕ್ಕೆ 10 ಸಾವಿರ ಕೋಟಿ ರೂ. ಹೂಡಿಕೆ ಸಾಧ್ಯತೆ

|
Google Oneindia Kannada News

ಶ್ರೀನಗರ, ಸೆಪ್ಟೆಂಬರ್ 3: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ 10 ಸಾವಿರ ಕೋಟಿ ರೂಗಳಿಗೂ ಅಧಿಕ ಹೂಡಿಕೆ ಹರಿದುಬರುವ ನಿರೀಕ್ಷೆ ಇದೆ.

ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶವು ಅಕ್ಟೋಬರ್ 12-14ರವರೆಗೆ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ದಿನಾಂಕ ಬದಲಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.

ಪರಿಚ್ಛೇದ 370 ರದ್ದಾದ ಬಳಿಕ ಜಮ್ಮು ಕಾಶ್ಮೀರದ ಸ್ಥಿತಿ ಹೇಗಿದೆ ಎನ್ನುವುದರ ಕುರಿತು ಅವಲೋಕಿಸಲಾಗುತ್ತದೆ. ಈಗ ಹಲವು ರಾಜಕೀಯ ಮುಖಂಡರು ಹಾಗೂ ಉದ್ಯಮಿಗಳು ಗೃಹ ಬಂಧನದಲ್ಲಿದ್ದಾರೆ.

money

ಜಮ್ಮು ಕಾಶ್ಮೀರ ವಾಣಿಜ್ಯ ಒಕ್ಕೂಟದ ಮಾಜಿ ಅಧ್ಯಕ್ಷ ಮುಬೀನ್ ಶಾ, ಕಾಶ್ಮೀರ ಇಕನಾಮಿಕ್ ಅಲಾಯನ್ಸ್‌ನ ಅಧ್ಯಕ್ಷ ಯಾಸೀನ್ ಖಾನ್ ಬಂಧನದಲ್ಲಿದ್ದಾರೆ.

ಈ ಸಮ್ಮಿತ್ ನಿರ್ಭೀತಿಯಿಂದ ಬೇರೆ ರಾಜ್ಯಗಳೊಂದಿಗೆ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ ಎಂದು ರಾಜ್ಯ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ಚೌಧರಿ ತಿಳಿಸಿದ್ದಾರೆ.

ಪಾಕ್ ಆಕ್ರಮಿತ ಪ್ರದೇಶ 2022ರೊಳಗೆ ಭಾರತದ ಭಾಗವಾಗಲಿದೆ: ಸಂಜಯ್ ರಾವತ್ಪಾಕ್ ಆಕ್ರಮಿತ ಪ್ರದೇಶ 2022ರೊಳಗೆ ಭಾರತದ ಭಾಗವಾಗಲಿದೆ: ಸಂಜಯ್ ರಾವತ್

ಪರಿಚ್ಛೇದ 370 ರದ್ದು ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವೂ ಕೂಡ ರದ್ದಾಯಿತು. ಈ ಘಟನೆ ಬಳಿಕ ರಾಜ್ಯದ ಕೈಗಾರಿಕೆಗಳ ಅಭಿವೃದ್ಧಿ ಕೂಡ ಕುಂಠಿತವಾಗಿದೆ ಎಂದು ಹೇಳಿದ್ದಾರೆ.

ಈ ಸಮ್ಮಿತ್‌ನಲ್ಲಿ ಜಮ್ಮು ಕಾಶ್ಮೀರದ ಟ್ರೇಡ್ ಪ್ರೊಮೊಷನ್ ಆರ್ಗನೈಸೇಷನ್ ಹಾಗೂ ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್(ಸಿಐಐ) ಮಧ್ಯೆ ಒಪ್ಪಂದ ನಡೆಯಲಿದೆ.

English summary
Jammu Kashmir Is Expecting More Than 10 Thousand Crores Rupees Investment, An estimated Rs 10,000 crore worth investments are expected from the Global Investment Summit, which is to be held in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X