India
  • search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಗ್ರರ ಜೊತೆ ನಂಟು; ಮೂವರು ಸರಕಾರಿ ನೌಕರರು ಸೇವೆಯಿಂದ ವಜಾ

|
Google Oneindia Kannada News

ಶ್ರೀನಗರ್, ಮೇ 13: ಭಯೋತ್ಪಾದನೆಗೆ ಸಕ್ರಿಯವಾಗಿ ಬೆಂಬಲ ನೀಡುತ್ತಿದ್ದುದು ಕಂಡು ಬಂದ ಹಿನ್ನೆಲೆಯಲ್ಲಿ ಮೂವರು ಸರಕಾರಿ ಉದ್ಯೋಗಿಗಳನ್ನು ಜಮ್ಮು ಮತ್ತು ಕಾಶ್ಮೀರದ ಆಡಳಿತದ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಜಾಗೊಂಡವರಲ್ಲಿ ಇಬ್ಬರು ಶಿಕ್ಷಕ ವೃತ್ತಿಯಲ್ಲಿದ್ದರೆ, ಒಬ್ಬರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ.

ಕಾಶ್ಮೀರ ವಿಶ್ವವಿದ್ಯಾಲಯದ ರಾಸಾಯನ ಶಾಸ್ತ್ರದ ಪ್ರೊಫೆಸರ್ ಅಲ್ತಾಫ್ ಹುಸೇನ್ ಪಂಡಿತ್, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕ ಮಕ್ಬೂಲ್ ಹಜಾಮ್ ಮತ್ತು ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯ ಕಾನ್ಸ್‌ಟೆಬಲ್ ಗುಲಾಂ ರಲೂಲ್ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಈ ವರದಿ ಹೇಳುತ್ತಿದೆ.

ಕಾಶ್ಮೀರದಲ್ಲಿ ಪಂಡಿತನ ಹತ್ಯೆ; ರಾತ್ರೋರಾತ್ರಿ ಭುಗಿಲೆದ್ದ ಪ್ರತಿಭಟನೆಕಾಶ್ಮೀರದಲ್ಲಿ ಪಂಡಿತನ ಹತ್ಯೆ; ರಾತ್ರೋರಾತ್ರಿ ಭುಗಿಲೆದ್ದ ಪ್ರತಿಭಟನೆ

ಹಿಂದಿನ ಸರಕಾರಗಳ ಅವಧಿಯಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಭಯೋತ್ಪಾದಕರು ನುಸುಳಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರನ್ನು ಪತ್ತೆ ಹಚ್ಚಲು ಸರಕಾರ ಬಹಳ ಪ್ರಯತ್ನ ಮಾಡುತ್ತಿದೆ. ಆ ನಿಟ್ಟಿನಲ್ಲಿ ನಿನ್ನೆ ಮೂವರು ಸರಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಉಗ್ರ ಕೃತ್ಯದಲ್ಲಿ ಪಳಗಿದ್ದ ಪಂಡಿತ್:
ಕಾಶ್ಮೀರ ಯೂನಿವರ್ಸಿಟಿಯ ಪ್ರೊಫೆಸರ್ ಆಗಿರುವ ಅಲ್ತಾವ್ ಹುಸೇನ್ ಪಂಡಿತ್ ಭಯೋತ್ಪಾದನೆ ಜಾಲದಲ್ಲಿ ಹಳಬ. ಜಮಾತ್-ಎ-ಇಸ್ಲಾಮ್ ಸಂಘಟನೆಯೊಂದಿಗೆ ದೀರ್ಘ ಕಾಲ ನಂಟು ಹೊಂದಿದ್ದನೆನ್ನಲಾಗಿದೆ. ಜಮಾತೆ ಸಂಘಟನೆಯ ಸದಸ್ಯನಾಗಿ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಕೃತ್ಯಕ್ಕೆ ತರಬೇತಿ ಪಡೆದಿದ್ದ. 1990ರಿಂದ ಮೂರು ವರ್ಷ ಕಾಲ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದ. 1993ರಲ್ಲಿ ಆತನ ಬಂಧನವಾಯಿತು.

ಪುಲ್ವಾಮದಲ್ಲಿ ಭಯೋತ್ಪಾದಕರಿಂದ ಪೊಲೀಸ್‌ ಪೇದೆಗೆ ಗುಂಡು!ಪುಲ್ವಾಮದಲ್ಲಿ ಭಯೋತ್ಪಾದಕರಿಂದ ಪೊಲೀಸ್‌ ಪೇದೆಗೆ ಗುಂಡು!

ಜೈಲಿನಿಂದ ಬಿಡುಗಡೆಯಾದ ಬಳಿಕ ಜಮಾತ್-ಎ-ಇಸ್ಲಾಮ್ ಸಂಘಟನೆಯಲ್ಲಿ ಮತ್ತೆ ಸಕ್ರಿಯನಾದ. ಇತರ ಉಗ್ರರನ್ನು ನೇಮಿಸಿಕೊಳ್ಳುವ ರೆಕ್ರೂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. 2011 ಮತ್ತು 2014ರಲ್ಲಿ ಕಾಶ್ಮೀರದಲ್ಲಿ ಉಗ್ರಗಾಮಿಗಳ ಹತ್ಯೆ ಖಂಡಿಸಿ ಕಣಿವೆ ರಾಜ್ಯದಲ್ಲಿ ನಡೆದಿದ್ದ ಹಿಂಸಾಚಾರಗಳಿಗೆ ಈತನೇ ಮಾಸ್ಟರ್ ಮೈಂಡ್ ಆಗಿದ್ದನೆನ್ನಲಾಗಿದೆ.

Jammu and Kashmir 3 Govt Employees Sacked Over Terror Links

2015ರಲ್ಲಿ ಈತ ಶಿಕ್ಷಣ ವ್ಯವಸ್ಥೆಯೊಳಗೆ ನುಸುಳಿ ಕಾಶ್ಮೀರ್ ಯೂನಿವರ್ಸಿಟಿ ಶಿಕ್ಷಕರ ಸಂಘದ ಕಾರ್ಯಕಾರಿ ಸದಸ್ಯನಾದ. ಬಳಿಕ ವಿದ್ಯಾರ್ಥಿಗಳ ಮನಸಿನಲ್ಲಿ ಪ್ರತ್ಯೇಕತಾವಾದದ ಭಾವನೆಗಳನ್ನು ಗಟ್ಟಿಗೊಳಿಸಿ ಉಗ್ರ ಚಟುವಟಿಕೆಗಳಿಗೆ ಕೈಜೋಡಿಸುವಂತೆ ಪ್ರಚೋದನೆ ನೀಡುತ್ತಿದ್ದ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿ ಸಂಸ್ಥೆ ಬರದಿದೆ.

ಇನ್ನು ಎರಡನೇ ಉಗ್ರರ ಮಖಬೂಲ್ ಹಾಜಂ ಸರಕಾರಿ ಶಿಕ್ಷಕನಾದರೂ ಜನರನ್ನು ಮೂಲಭೂತವಾದಕ್ಕೆ ತಳ್ಳುವ ಕೆಲಸ ಮಾಡುತ್ತಿದ್ದ. ಸೋಗಮ್ ನಗರದ ಪೊಲೀಸ್ ಠಾಣೆ ಮತ್ತಿತರ ಸರಕಾರಿ ಕಟ್ಟಡಗಳ ಮೇಲೆ ದಾಳಿ ಮಾಡಿದ ಜನರ ಗುಂಪಿನಲ್ಲಿ ಈತನೂ ಇದ್ದ.

ನಿನ್ನೆ ಗುರುವಾರ ಸೇವೆಯಿಂದ ವಜಾಗೊಂಡ ಮೂರನೇ ಆರೋಪಿ ರಸೂಲ್ ಬಹಳ ರಹಸ್ಯವಾಗಿದ್ದುಕೊಂಡು ಭಯೋತ್ಪಾದನೆ ಚಟುವಟಿಕೆಗೆ ನೆರವಾಗುತ್ತಿದ್ದ. ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಭಯೋತ್ಪಾದಕರಿಗೆ ಪ್ರಮುಖ ಮಾಹಿತಿ ಕೊಡುತ್ತಿದ್ದನೆನ್ನಲಾಗಿದೆ. ಭದ್ರತಾ ಪಡೆಗಳಿಂದ ಎಲ್ಲೆಲ್ಲಿ, ಯಾವ್ಯಾಗ್ಯಾವಾಗ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಯುತ್ತದೆ ಎಂದು ಭಯೋತ್ಪಾದಕರಿಗೆ ಅಲರ್ಟ್ ಮಾಡುತ್ತಿದ್ದ. ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಯ ಹೆಸರನ್ನೂ ಈತ ಉಗ್ರರಿಗೆ ಕಳುಹಿಸುತ್ತಿದ್ದನೆನ್ನಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Three Government employees in Jammu and Kashmir are terminated from the service after found to have terror links
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X