• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು ಕಾಶ್ಮೀರ: ಶಸ್ತ್ರಾಸ್ತ್ರಗಳೊಂದಿಗೆ ಸಿಕ್ಕಿಬಿದ್ದ ಇಬ್ಬರು ಉಗ್ರರು

|

ಶ್ರೀನಗರ, ಸೆಪ್ಟೆಂಬರ್ 09: ಅಕ್ರಮ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಇಬ್ಬರು ಉಗ್ರರನ್ನು ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಬಂಧಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಮಾಹಿತಿ ನೀಡಿದ್ದಾರೆ. ಉಗ್ರರು ಇಡೀ ಪ್ರಯಾಣದ ಸಮಯದಲ್ಲಿ ಪಾಕಿಸ್ತಾನದಲ್ಲಿ ಸಕ್ರಿಯ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ .

ಜಮ್ಮು ಪ್ರದೇಶದ ಸಾಂಬಾದಿಂದ ಕಾಶ್ಮೀರಕ್ಕೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಾಗಿಸುವ ಪಿತೂರಿಯನ್ನು ಉಗ್ರರು ನಡೆಸಿದ್ದರು ಎಂದು ವಕ್ತಾರರು ಹೇಳಿದ್ದಾರೆ. ಈ ಉಗ್ರರು ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆ ಜೊತೆಗೆ ನಂಟು ಹೊಂದಿದ್ದಾರೆ. ಸೆಪ್ಟೆಂಬರ್ 5-6 ರಂದು ಉಗ್ರರು ಸಾಂಬಾದಿಂದ ಅಕ್ರಮ ಶಸ್ತ್ರಾಸ್ತ್ರ ಹೊತ್ತು ಕಾಶ್ಮೀರದ ಕಡೆಗೆ ಹೋಗುತ್ತಿದ್ದರು.

ನೌಗಾಮ್‌ನಲ್ಲಿ ಉಗ್ರರ ದಾಳಿ: ಇಬ್ಬರು ಪೊಲೀಸರು ಹುತಾತ್ಮ

ಭದ್ರತಾ ಪಡೆಗಳು ಎಲ್ಲಾ ವಾಹನವನ್ನು ತಪಾಸಣೆ ಮಾಡಿದ್ದಾರೆ. ಕುಲ್ಗಾಂ ಬಳಿ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಕೆ 47 ರೈಫಲ್, ಎಂ4 ಯುಎಸ್ ಕ್ಯಾಬ್ರಿನ್, ಆರು ಚೀನಾದ ಪಿಸ್ತೂಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅವರು ಸಾಂಬಾಂದಿಂದ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದರು. ಪಂಜಾಬ್‌ನಲ್ಲಿ ಅಗತ್ಯ ವಸ್ತುಗಳನ್ನು ವಾಹನದಲ್ಲಿ ತುಂಬಿಕೊಂಡು ಬರುತ್ತಿದ್ದ ವಾಹನದಲ್ಲಿ ಸಾಂಬಾದಿಂದ ಉಗ್ರರು ಅದೇ ವಾಹನದಲ್ಲಿ ಶಸ್ತ್ರಾಸ್ತ್ರ ಸಾಗಿಸಿದ್ದಾರೆ.

English summary
The two suspected terrorists, who were arrested with a huge cache of arms and ammunition near Jawahar Tunnel in Jammu and Kashmir's' Kulgam, were in contact with an active terrorist in Pakistan, the Indian Army said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X