ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ. 10ರಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ ಜಮ್ಮು- ಕಾಶ್ಮೀರ

|
Google Oneindia Kannada News

ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಅಕ್ಟೋಬರ್ 8: ಎರಡು ತಿಂಗಳ ಹಿಂದೆ 'ಭಯೋತ್ಪಾದನೆ ಆತಂಕ'ದ ಹಿನ್ನೆಲೆಯಲ್ಲಿ ಕಣಿವೆ ರಾಜ್ಯವನ್ನು (ಜಮ್ಮು ಮತ್ತು ಕಾಶ್ಮೀರ) ತೊರೆಯುವಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿತ್ತು. ಇದೀಗ ಆ ಎಚ್ಚರಿಕೆ ತೆರವುಗೊಳಿಸಿ ಸೋಮವಾರ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಸೂಚನೆ ನೀಡಿದ್ದಾರೆ.

ಅಕ್ಟೋಬರ್ ಹತ್ತರಿಂದ ಅನ್ವಯ ಆಗುವಂತೆ ಈಗಿರುವ ಎಚ್ಚರಿಕೆಯನ್ನು ಹಿಂಪಡೆಯಲಾಗಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಮುನ್ನ, ಆಗಸ್ಟ್ ಎರಡನೇ ತಾರೀಕು ಈ ಎಚ್ಚರಿಕೆ ನೀಡಲಾಗಿತ್ತು. ಸನ್ನಿವೇಶ ಹಾಗೂ ಭದ್ರತಾ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿದ್ದ ಮಲಿಕ್, ಪ್ರವಾಸಿಗರಿಗೆ ಭದ್ರತಾ ಎಚ್ಚರಿಕೆ ತೆರವುಗೊಳಿಸಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ: 10 ಮಂದಿಗೆ ಗಂಭೀರ ಗಾಯಜಮ್ಮು-ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ: 10 ಮಂದಿಗೆ ಗಂಭೀರ ಗಾಯ

ಕಣಿವೆ ರಾಜ್ಯದಲ್ಲಿ ಪ್ರವಾಸಿಗರಿಗೆ ಇರುವ ಎಚ್ಚರಿಕೆ ಸೂಚನೆಯನ್ನು ತಕ್ಷಣದಿಂದ ತೆರವುಗೊಳಿಸುವಂತೆ ಗೃಹ ಇಲಾಖೆಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಅಕ್ಟೋಬರ್ ಹತ್ತನೇ ತಾರೀಕಿನಿಂದ ಇದು ಜಾರಿಗೆ ಬರಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

Jammu and Kashmir Tourists Advisory Will Lifted From October 10th

ಕಳೆದ ಆಗಸ್ಟ್ ಎರಡನೇ ತಾರೀಕು ಜಮ್ಮು- ಕಾಶ್ಮೀರದ ಆಡಳಿತದಿಂದ ಎಚ್ಚರಿಕೆ ಸಲಹೆ ನೀಡಲಾಗಿತ್ತು. ಭಯೋತ್ಪಾದಕರ ಆತಂಕ ಇರುವುದರಿಂದ ತಕ್ಷಣವೇ ಕಣಿವೆ ರಾಜ್ಯವನ್ನು ತೊರೆಯುವಂತೆ ಅಮರನಾಥ ಯಾತ್ರಿಕರು ಹಾಗೂ ಪ್ರವಾಸಿಗರಿಗೆ ಸೂಚಿಸಲಾಗಿತ್ತು.

ಕೊನೆಗೂ ಕತ್ತಲೆಯಿಂದ ಬೆಳಕಿನೆಡೆಗೆ ಜಮ್ಮು- ಕಾಶ್ಮೀರದ ಈ ಗ್ರಾಮಕೊನೆಗೂ ಕತ್ತಲೆಯಿಂದ ಬೆಳಕಿನೆಡೆಗೆ ಜಮ್ಮು- ಕಾಶ್ಮೀರದ ಈ ಗ್ರಾಮ

ಇನ್ನು ರಾಜ್ಯಪಾಲ ಮಲಿಕ್, ಆಕ್ಟೋಬರ್ ಇಪ್ಪತ್ನಾಲ್ಕನೇ ತಾರೀಕು ನಡೆಯಬೇಕಿರುವ ಬ್ಲಾಕ್ ಡೆವೆಲಪ್ ಮೆಂಟ್ ಕೌನ್ಸಿಲ್ ಚುನಾವಣೆ ಬಗ್ಗೆಯೂ ಸಭೆಯಲ್ಲಿ ಸೂಚನೆ ನೀಡಿದ್ದಾರೆ.

English summary
Jammu and Kashmir governor Satya Pal Malik directed to lift advisory to tourists immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X