ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಟಕೀಯ ರೀತಿಯಲ್ಲಿ ಶರಣಾದ ಉಗ್ರ: ವಿಡಿಯೋ

|
Google Oneindia Kannada News

ಶ್ರೀನಗರ, ಅಕ್ಟೋಬರ್ 16: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರನೊಬ್ಬ ಭದ್ರತಾ ಪಡೆಗಳಿಗೆ ನಾಟಕೀಯ ರೀತಿಯಲ್ಲಿ ಶರಣಾಗಿದ್ದಾನೆ. ಭದ್ರತಾ ಪಡೆಗಳು ಭಯೋತ್ಪಾದನಾ ನಿಗ್ರಹ ಜಂಟಿ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಯುವ ಉಗ್ರ ಸೇನಾ ಪಡೆಗೆ ಶರಣಾಗುವ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಕೆಲವು ದಿನಗಳ ಮುಂಚೆಯಷ್ಟೇ ಆತ ಉಗ್ರ ಸಂಘಟನೆಗೆ ಸೇರಿದ್ದ ಎನ್ನಲಾಗಿದೆ. ಆತನಿಂದ ಎಕೆ 47 ರೈಫಲ್ ಒಂದನ್ನು ವಶಪಡಿಸಿಕೊಳ್ಳಲಾಗಿದೆ.

ಯುದ್ಧ ಸುರಕ್ಷತಾ ಉಡುಪು ಧರಿಸಿದ್ದ ಸೈನಿಕನೊಬ್ಬ ಉಗ್ರನೊಂದಿಗೆ ಮಾತನಾಡುವ ವಿಡಿಯೋವನ್ನು ಸೇನಾ ಪಡೆ ಬಿಡುಗಡೆ ಮಾಡಿದೆ. ಹಣ್ಣಿನ ತೋಟವೊಂದರಲ್ಲಿ ಉಗ್ರ ಜಹಾಂಗೀರ್ ಬಟ್ ಪತ್ತೆಯಾಗಿದ್ದಾನೆ. ಕೈಗಳನ್ನು ಮೇಲೆತ್ತಿಕೊಂಡು ಮುಂದೆ ಬಂದ ಉಗ್ರ ಸೈನಿಕರ ಮುಂದೆ ನಿಂತಿದ್ದ. ನಿನಗೆ ಯಾವುದೇ ಹಾನಿ ಮಾಡುವುದಿಲ್ಲ. ಯಾರೂ ಗುಂಡು ಹಾರಿಸುವುದಿಲ್ಲ ಎಂದು ಸೈನಿಕ ಆತನಿಗೆ ಭರವಸೆ ನೀಡುವುದು ವಿಡಿಯೋದಲ್ಲಿ ದಾಖಲಾಗಿದೆ.

 Jammu And Kashmir Terrorist Surrendered Before Indian Army: Video

ಜಮ್ಮು ಕಾಶ್ಮೀರ: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಯೋಧರು ಜಮ್ಮು ಕಾಶ್ಮೀರ: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಯೋಧರು

'ಆತನಿಗೆ ನೀರು ಕೊಡಿ' ಎಂದು ಸೈನಿಕರಿಗೆ ಸೂಚಿಸಿರುವುದು ಕೇಳಿಸದೆ. ಸೇನಾ ಪಡೆಯು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ತನ್ನ ಮಗನನ್ನು ರಕ್ಷಿಸಿದ್ದಕ್ಕಾಗಿ ಆ ಉಗ್ರನ ತಂದೆ ಸೇನೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಆತ ಮತ್ತೆ ಉಗ್ರರೊಂದಿಗೆ ಸೇರಿಕೊಳ್ಳಲು ಹೋಗಲು ಅವಕಾಶ ನೀಡಬೇಡಿ ಎಂದು ಆತನ ತಂದೆಗೆ ಸೈನಿಕರು ಸೂಚನೆ ನೀಡಿದ್ದಾರೆ.

ಆತನನ್ನು ಸಜೀವವಾಗಿ ಹಿಡಿದು ಜೀವ ಉಳಿಸಿದ್ದಕ್ಕಾಗಿ ಖುಷಿಯಾಗುತ್ತಿದೆ ಎಂದು ಜಿಒಸಿ 15 ಕಾರ್ಪ್ಸ್‌ನ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ತೈಲ, ಅನಿಲ ಕಾರ್ಮಿಕ ಕಾವಲು ಪಡೆ ಮೇಲೆ ಉಗ್ರರ ದಾಳಿ: 14 ಬಲಿಪಾಕಿಸ್ತಾನದಲ್ಲಿ ತೈಲ, ಅನಿಲ ಕಾರ್ಮಿಕ ಕಾವಲು ಪಡೆ ಮೇಲೆ ಉಗ್ರರ ದಾಳಿ: 14 ಬಲಿ

ಅಕ್ಟೋಬರ್ 13ರಂದು ವಿಶೇಷ ಪೊಲೀಸ್ ಅಧಿಕಾರಿಯೊಬ್ಬರಿಗೆ ಎರಡು ಎಕೆ 47 ರೈಫಲ್‌ಗಳು ಸಿಕ್ಕಿದ್ದವು. ಅದೇ ದಿನ ಛಡೂರಾದ ಜಹಾಂಗೀರ್ ಎಎಚ್ ಬಟ್ ನಾಪತ್ತೆಯಾಗಿದ್ದ. ಆತನನ್ನು ಹುಡುಕಲು ಕುಟುಂಬ ಪ್ರಯತ್ನಿಸುತ್ತಿತ್ತು. ಇಂದು ಬೆಳಿಗ್ಗೆ ಜಂಟಿ ಕಾರ್ಯಾಚರಣೆ ವೇಳೆ ಆತ ಪತ್ತೆಯಾದ. ಶಿಷ್ಟಾಚಾರಗಳಂತೆ ಭಾರತೀಯ ಸೇನೆಯು ಶರಣಾಗುವಂತೆ ಆತನ ಮನವೊಲಿಸಲು ಪ್ರಯತ್ನಿಸಿತು. ಅತ ಶರಣಾಗತನಾದ ಎಂದು ಸೇನೆ ಹೇಳಿಕೆ ತಿಳಿಸಿದೆ.

English summary
A young terrorist from Jammu and Kashmir has been surrendered before Indian army during joint operation. The dramatic video went viral of the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X