ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲೂ ಹಿಜಾಬ್ ಕಿಚ್ಚು: ತಿಲಕ-ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಥಳಿಸಿದ ಶಿಕ್ಷಕ

|
Google Oneindia Kannada News

ರಜೌರಿ (ಜಮ್ಮು ಮತ್ತು ಕಾಶ್ಮೀರ) ಏಪ್ರಿಲ್ 07: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಥಳಿಸಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. ಧಾರ್ಮಿಕ ಚಿಹ್ನೆ ತಿಲಕ ಹಚ್ಚಿ ಶಾಲೆಗೆ ಆಗಮಿಸಿದ್ದಕ್ಕಾಗಿ ಮತ್ತು ಹಿಜಾಬ್ ಧರಿಸಿದ್ದಕ್ಕಾಗಿ ಶಿಕ್ಷಕ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. 4ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹಣೆಯಲ್ಲಿ ತಿಲಕವಿಟ್ಟು ಶಾಲೆಯ ತರಗತಿಗೆ ಹಾಜರಾಗಿದ್ದಳು. ಮತ್ತೋರ್ವ ಬಾಲಕಿ ಹಿಜಾಬ್ ಧರಿಸಿ ಶಾಲೆಗೆ ತರಗತಿಯೊಳಗೆ ಬಂದಿದ್ದಳು. ಇದರಿಂದಾಗಿ ಕೋಪಗೊಂಡ ಶಿಕ್ಷಕ ಶಾಲೆಯಲ್ಲಿ ವಿದ್ಯಾರ್ಥಿನಿಯರನ್ನು ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿಚಾರವನ್ನು ಹುಟ್ಟುಹಾಕಿದೆ. ಆರೋಪಿ ಶಿಕ್ಷಕನನ್ನು ನಿಸಾರ್ ಅಹಮದ್ ಎಂದು ಗುರುತಿಸಲಾಗಿದ್ದು ಈ ಘಟನೆಯ ಬಳಿಕ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

ಶಿಕ್ಷಕನ ವಿರುದ್ಧ ಆಕ್ರೋಶ

ಶಿಕ್ಷಕನ ವಿರುದ್ಧ ಆಕ್ರೋಶ

ಘಟನೆಯ ಬಳಿಕ ಆರೋಪಿ ಶಿಕ್ಷಕ ನಿಸಾರ್ ಅಹ್ಮದ್ ನನ್ನು ಬಂಧಿಸಲಾಗಿದೆ. ಆದರೆ ಇದುವರೆಗೆ ಮಕ್ಕಳನ್ನು ಥಳಿಸಿದರ ಹಿಂದೆ ಯಾವುದೇ ಕೋಮುವಾದಿ ಕೋನವನ್ನು ಆತ ಒಪ್ಪಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಎಂಬ ಇಬ್ಬರು ಬಾಲಕಿಯರ ಪೋಷಕರು ಜಂಟಿಯಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ವೀಡಿಯೋ ಆಧರಿಸಿ ರಜೌರಿ ಜಿಲ್ಲಾಡಳಿತ ಶಿಕ್ಷಕನ ವಿರುದ್ಧ ತನಿಖೆಗೆ ಆದೇಶಿಸಿ ಅಮಾನತು ಮಾಡಲಾಗಿದೆ. ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ

ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ

ವಿಡಿಯೋ ವೈರಲ್ ಬಳಿಕ ಮಕ್ಕಳ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮ ಮಕ್ಕಳಿಗೂ ಇದೇ ರೀತಿ ಆಗುವ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ರಾಜೌರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೊಟ್ರಂಕಾ ಅವರು "ಮಕ್ಕಳಿಗೆ ಥಳಿಸಿರುವುದು ಸತ್ಯವೇ ಮತ್ತು ಥಳಿಸಲು ನಿರ್ದಿಷ್ಟ ಕಾರಣಗಳೇನು" ಎಂಬುದನ್ನು ಕಂಡುಹಿಡಿಯಲು ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ವಿದ್ಯಾರ್ಥಿ ತಂದೆ ತನಿಖೆಗೆ ಒತ್ತಾಯ

ವಿದ್ಯಾರ್ಥಿ ತಂದೆ ತನಿಖೆಗೆ ಒತ್ತಾಯ

ಹಣೆಗೆ ತಿಲಕವಿಟ್ಟಿದ್ದಕ್ಕೆ ಹಿಂದೂ ಯುವತಿಯೊಬ್ಬಳನ್ನು ಥಳಿಸಲಾಗಿದೆ ಎಂಬ ಆರೋಪ ಕೇಳಿಬಂದಾಗ ವಿವಾದ ಆರಂಭವಾಗಿದೆ. ಬಾಲಕಿಯ ತಂದೆ ಅಂಗ್ರೇಜ್ ಸಿಂಗ್, "ನನ್ನ ಮಗಳನ್ನು ಥಳಿಸಿದಂತೆ ಅಥವಾ ಶಕೂರ್ ಅವರ ಮಗಳು (ಇನ್ನೊಬ್ಬ ವಿದ್ಯಾರ್ಥಿನಿ) ಥಳಿಸಲ್ಪಟ್ಟಿದ್ದಾಳೆ. ನಾಳೆ ಇನ್ನೊಬ್ಬ ಶಿಕ್ಷಕ ಟಿಕಾ ಅಥವಾ ಮುಖವಾಡವನ್ನು ಧರಿಸಿದ್ದಕ್ಕಾಗಿ ಮಗುವಿಗೆ ಥಳಿಸಬಹುದು. ನಾನು ಆಡಳಿತವನ್ನು ಮಧ್ಯಪ್ರವೇಶಿಸಲು ಬಯಸುತ್ತೇನೆ. ನ್ಯಾಯ ನೀಡಬೇಕು. ಜೊತೆಗೆ ಇದನ್ನು ತನಿಖೆ ಮಾಡಬೇಕು ಎಂದು ನಾನು ನಿಮಗೆ ಮನವಿ ಮಾಡುತ್ತೇನೆ" ಎಂದಿದ್ದಾರೆ. ನ್ಯಾಯವನ್ನು ಕೋರಿದ ಅಂಗ್ರೇಜ್ ಸಿಂಗ್ ಅವರು ಹಲವಾರು ಇತರ ರಾಜ್ಯಗಳಲ್ಲಿ ಉಲ್ಬಣಗೊಳ್ಳುತ್ತಿರುವ ಹಿಜಾಬ್ ವಿವಾದವನ್ನು ಉಲ್ಲೇಖಿಸಿದರು ಮತ್ತು ಜನರು J&K ಅನ್ನು ಈ ರೀತಿಯ ಪರಿಸ್ಥಿತಿಯಲ್ಲಿರಲು ಅನುಮತಿಸುವುದಿಲ್ಲ ಎಂದು ಹೇಳಿದರು.

ಬಾಲಕಿಯ ತಂದೆ ನೇರ ನುಡಿ

ಬಾಲಕಿಯ ತಂದೆ ನೇರ ನುಡಿ

ಬಾಲಕಿಯ ತಂದೆ ಅಂಗ್ರೇಜ್ ಸಿಂಗ್, "ನನಗೆ ನ್ಯಾಯ ಬೇಕು. ಇಂದು ನನ್ನ ಮಗಳಿಗೆ ತಿಲಕ ಹಾಕಿದ್ದಕ್ಕೆ ಥಳಿಸಲಾಯಿತು. ನಾಳೆ ಬೇರೆಯವರು ಬಂದು ನೀವು ಯಾಕೆ ನಿಖಾಬ್ ಧರಿಸುತ್ತೀರಿ ಎಂದು ಹೇಳುತ್ತಾರೆ. ಇದು ಕೋಮು ಸೌಹಾರ್ದತೆಯನ್ನು ಕದಡುವ ಪ್ರಯತ್ನವಾಗಿದೆ. ನಾವು ಈ ಸ್ಥಳವನ್ನು ಯುಪಿ, ಬಿಹಾರ ಅಥವಾ ಕರ್ನಾಟಕ ಮಾಡಲು ಬಯಸುವುದಿಲ್ಲ" ಎಂದು ಹೇಳಿದರು. ಮುಸ್ಲಿಂ ಹುಡುಗಿಯ ತಂದೆ ಮೊಹಮ್ಮದ್ ಶಕೂರ್ ಅವರು ತಮ್ಮ ಮಗಳನ್ನು ಶಿಕ್ಷಕನಿಂದ ಅಮಾನುಷವಾಗಿ ಥಳಿಸಿದ್ದಾರೆ ಎಂದು ಆರೋಪಿಸಿದರು. "ನನ್ನ ಮಗಳನ್ನು ಅಮಾನುಷವಾಗಿ ಥಳಿಸಲಾಗಿದೆ. ಶಿಕ್ಷಕರು ಹೊಡೆದು ಒದ್ದಿದ್ದಾರೆ. ಇದಕ್ಕೆ ನನಗೆ ನ್ಯಾಯ ಬೇಕು" ಎಂದು ಮನವಿ ಮಾಡಿದ್ದಾರೆ.

English summary
Jammu and Kashmir: Rajouri administration suspends school teacher beating two girls in a government-run school. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X