ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣ ನಿರ್ಬಂಧ ತೆರವು

|
Google Oneindia Kannada News

ಜಮ್ಮು ಕಾಶ್ಮೀರ, ಮಾರ್ಚ್ 4: ಜಮ್ಮು ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣದ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಆಡಳಿತ ಮಂಡಳಿ ತೆರವುಗೊಳಿಸಿದೆ. ಸುಮಾರು 7 ತಿಂಗಳ ಬಳಿಕ ಜಮ್ಮು ಕಾಶ್ಮೀರದಲ್ಲಿ ಸೋಶಿಯಲ್ ಮೀಡಿಯಾ ವೆಬ್ ಸೈಟ್ ಗಳ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ.

ಆರ್ಟಿಕಲ್ 370ನೇ ವಿಧಿ ರದ್ದು ಮಾಡಿದ ಹಿನ್ನೆಲೆ ಜಮ್ಮು ಕಾಶ್ಮೀರದಲ್ಲಿ ಆಗಸ್ಟ್ 5, 2019ರಿಂದ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧ ಮಾಡಲಾಗಿತ್ತು.

ಜಮ್ಮು ಕಾಶ್ಮೀರ ತಾತ್ಕಾಲಿಕ ಕೇಂದ್ರಾಡಳಿತ ಪ್ರದೇಶ: ಮೋದಿಜಮ್ಮು ಕಾಶ್ಮೀರ ತಾತ್ಕಾಲಿಕ ಕೇಂದ್ರಾಡಳಿತ ಪ್ರದೇಶ: ಮೋದಿ

ಇದೀಗ, ಜಮ್ಮು ಕಾಶ್ಮೀರದ ಹೊಸ ನಿಯಮದ ಪ್ರಕಾರ, ಇಂಟರ್ ನೆಟ್ ಸೌಲಭ್ಯ ಒದಗಿಸಲಾಗಿದೆ. 2ಜಿ ವೇಗದಲ್ಲಿ ಅಂತರ್ಜಾಲ ಬಳಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಯಾವೆಲ್ಲಾ ವೆಬ್ ಸೈಟ್ ಬಳಕೆಗೆ ಮುಕ್ತ ಅವಕಾಶ ನೀಡಲಾಗಿದೆ ಎಂಬುದು ಸದ್ಯಕ್ಕೆ ತಿಳಿದಿಲ್ಲ.

Jammu and Kashmir People Now Allowed To Use internet

ಲ್ಯಾಂಡ್ ಲೈನ್ ದೂರವಾಣಿಗೂ ಇಂಟರ್ ನೆಟ್ ಸೌಲಭ್ಯ ನೀಡಲಾಗಿದೆ. ಆದರೆ ಅದಕ್ಕೆ ಅನುಮತಿ ಪಡೆಯಬೇಕಿದೆ. ಪರಿಶೀಲನೆ ಬಳಿಕವಷ್ಟೆ ಅದು ಕಾರ್ಯಗತವಾಗಲಿದೆ ಎಂದು ಜಮ್ಮು ಕಾಶ್ಮೀರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಲೀನ್ ಕಬ್ರ ಆದೇಶ ಹೊರಡಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಆಸ್ತಿ ಕೊಳ್ಳುವುದು ಹೇಗೆ? ಬೆಲೆ ಎಷ್ಟಿದೆ?ಜಮ್ಮು ಕಾಶ್ಮೀರದಲ್ಲಿ ಆಸ್ತಿ ಕೊಳ್ಳುವುದು ಹೇಗೆ? ಬೆಲೆ ಎಷ್ಟಿದೆ?

ಜೊತೆಗೆ ಕೆಲವು ನಿರ್ದಿಷ್ಟ ನಿಬಂಧನೆಗಳನ್ನು ಕೂಡ ಗೃಹ ಇಲಾಖೆ ತಿಳಿಸಿದೆ.

-ಕೇವಲ 2ಜಿ ವೇಗದ ಇಂಟರ್ ನೆಟ್ ಮಾತ್ರ ಅವಕಾಶ ನೀಡಲಾಗಿದೆ

-ಸದ್ಯಕ್ಕೆ ಪೋಸ್ಟ್ ಪೇಡ್ ಸಿಮ್ ಬಳಕೆದಾರರಿಗೆ ಮಾತ್ರ ಇಂಟರ್ ನೆಟ್ ಅವಕಾಶ ಇದೆ. ಪ್ರೀ-ಪೇಡ್ ಸಿಮ್‌ಗಳಿಗೆ ಪರಿಶೀಲನೆ ನಂತರ ಅನುಮತಿ ನೀಡಲಾಗುತ್ತೆ.

-ಲ್ಯಾಂಡ್ ಲೈನ್ ಫೋನ್‌ಗಳಿಗೆ ಮಾತ್ರ ಅಂತರ್ಜಾಲ ಅವಕಾಶ ಇದೆ

English summary
Jammu and Kashmir administration announce people would now be allowed internet access with 2G speed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X