ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಜಾನ್ ವೇಳೆ ದಾಳಿ ಮಾಡಬೇಡಿ: ಉಗ್ರರಿಗೆ ಮುಫ್ತಿ ಮನವಿ

|
Google Oneindia Kannada News

ಶ್ರೀನಗರ, ಮೇ 4: ರಂಜಾನ್ ಮಾಸದಲ್ಲಿ ಯಾವುದೇ ದಾಳಿ ಮಾಡಬೇಡಿ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಭಯೋತ್ಪಾದಕರಿಗೆ ಮನವಿ ಮಾಡಿದ್ದಾರೆ.

ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಆಡಳಿತದ ಜವಾಬ್ದಾರಿ ನಿರ್ವಹಿಸುತ್ತಿರುವವರು ಸಲಹೆ ನೀಡುವುದು ಸಾಮಾನ್ಯ. ಆದರೆ ಮೆಹಬೂಬಾ ಮುಫ್ತಿ ದಾಳಿ ನಡೆಸದಂತೆ ಉಗ್ರರಿಗೆ ಮನವಿ ಮಾಡಿದ್ದಾರೆ. ಅವರ ಹೇಳಿಕೆ ವ್ಯಾಪಕ ಆಕ್ರೋಶ ಮತ್ತು ಟೀಕೆಗೆ ಗುರಿಯಾಗಿದೆ.

ಚೀನಾದ ಕ್ಸಿಂಜಿಯಾಂಗ್‌ನಲ್ಲಿ ರಂಜಾನ್ ಉಪವಾಸಕ್ಕೆ ನಿಷೇಧ ಚೀನಾದ ಕ್ಸಿಂಜಿಯಾಂಗ್‌ನಲ್ಲಿ ರಂಜಾನ್ ಉಪವಾಸಕ್ಕೆ ನಿಷೇಧ

ಪವಿತ್ರ ರಂಜಾನ್ ಮಾಸದಲ್ಲಿ ದಾಳಿ ಮಾಡಬೇಡಿ ಎಂದು ಮುಫ್ತಿ ಮನವಿ ಮಾಡಿದ್ದಾರೆ. ಹಾಗಾದರೆ ರಂಜಾನ್ ಬಳಿಕ ದಾಳಿ ಮಾಡಿದರೆ ತೊಂದರೆಯಿಲ್ಲವೇ? ಎಂದು ಅನೇಕರು ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಭಾರತದ ಸರ್ಕಾರ ರಂಜಾನ್ ಸಂದರ್ಭದಲ್ಲಿ ಉಗ್ರರ ವಿರುದ್ಧದ ಸೇನಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿತ್ತು. ಉಗ್ರರಿಗೆ ಧಾರ್ಮಿಕ ಆಚರಣೆಯ ನೆಪದಲ್ಲಿ ಸ್ವಾತಂತ್ರ್ಯ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಈ ಚರ್ಚೆಯ ನಡುವೆಯೇ ಪಾಕಿಸ್ತಾನದ ಸೈನಿಕರು ಗಡಿಯಲ್ಲಿ ಹಲವು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತದ ಮೇಲೆ ಷೆಲ್ ದಾಳಿ ನಡೆಸಿದ್ದರು.

ಉಗ್ರನಿಗೂ ಸಾವಿನ ಬಳಿಕ ಗೌರವ ಸಿಗಬೇಕು: ಮುಫ್ತಿ ಮತ್ತೊಂದು ವಿವಾದ ಉಗ್ರನಿಗೂ ಸಾವಿನ ಬಳಿಕ ಗೌರವ ಸಿಗಬೇಕು: ಮುಫ್ತಿ ಮತ್ತೊಂದು ವಿವಾದ

ಕಳೆದ ವರ್ಷದಂತೆಯೇ ಭಾರತೀಯ ಸೇನೆ ಯಾವುದೇ ಕಾರ್ಯಾಚರಣೆ ನಡೆಸದಂತೆ ಸ್ಥಗಿತಗೊಳಿಸಬೇಕೆಂದು ಮುಫ್ತಿ, ಕೇಂದ್ರ ಸರ್ಕಾರವನ್ನು ಕೋರಿಕೊಂಡಿದ್ದಾರೆ. ಸೇನಾ ಕಾರ್ಯಾಚರಣೆ ನಿಂತರೆ ಜಮ್ಮು ಮತ್ತು ಕಾಶ್ಮೀರದ ಜನತೆ ಒಂದು ತಿಂಗಳಾದರೂ ನೆಮ್ಮದಿಯಿಂದ ಇರಬಹುದು ಎಂದು ಅವರು ಹೇಳಿದ್ದಾರೆ.

ಕದನ ವಿರಾಮ ಘೋಷಿಸಿ

'ರಂಜಾನ್ ಮಾಸ ಬರುತ್ತಿದೆ. ಜನರು ಹಗಲು ರಾತ್ರಿ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಮಸೀದಿಗಳಿಗೆ ತೆರಳುತ್ತಾರೆ. ಕಳೆದ ವರ್ಷ ಮಾಡಿದಂತೆಯೇ ರಂಜಾನ್ ಸಂದರ್ಭದಲ್ಲಿ ಕದನವಿರಾಮ ಘೋಷಿಸಿ, ಸೇನಾ ಕಾರ್ಯಾಚರಣೆಗಳು ಮತ್ತು ಪತ್ತೆ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಇದರಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಕನಿಷ್ಠ ಇದೊಂದು ತಿಂಗಳಾದರೂ ನೆಮ್ಮದಿಯಿಂದ ಇರಬಹುದು' ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಉಗ್ರರಿಗೆ ಮನವಿ

ಉಗ್ರರಿಗೆ ಮನವಿ

'ರಂಜಾನ್ ಆರಾಧನೆ ಮತ್ತು ಪ್ರಾರ್ಥನೆಯ ತಿಂಗಳು. ಹೀಗಾಗಿ ಈ ಅವಧಿಯಲ್ಲಿ ಯಾವುದೇ ದಾಳಿಗಳನ್ನು ಮಾಡದಂತೆ ಉಗ್ರರಿಗೆ ಮನವಿ ಮಾಡುತ್ತೇನೆ' ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಉಗ್ರರಿಗೆ ಕ್ಯಾಲೆಂಡರ್ ಕೊಡಿ

ಉಗ್ರರಿಗೆ ಕ್ಯಾಲೆಂಡರ್ ಕೊಡಿ

'ನಿಮ್ಮ ಮಾತನ್ನು ಉಗ್ರರು ಕೇಳುತ್ತಾರೆ ಎಂದಾದರೆ ರಂಜಾನ್ ಮಾಸ ನಡೆಯದ ಸಂದರ್ಭದಲ್ಲಿಯೂ ದಾಳಿಯನ್ನು ನಿಲ್ಲಿಸುವಂತೆ ಅವರಿಗೆ ಹೇಳಬಾರದೇಕೆ?' ಎಂದು ಅನೇಕರು ಪ್ರಶ್ನಿಸಿದ್ದಾರೆ.

ಯಾವುದೇ ಭಯೋತ್ಪಾದನೆ ಇರಬಾರದು ಎಂದು ಹೇಳುವ ಬದಲು ಮುಫ್ತಿ ಅವರು ಉಗ್ರರಿಗೆ ಒಂದು ಕ್ಯಾಲೆಂಡರ್ ನೀಡವುದು ಒಳಿತು ಎಂದು ವ್ಯಂಗ್ಯವಾಡಿದ್ದಾರೆ.

ಇದು ನಾಯಕರು ತಮ್ಮ ಸೇನೆಗೆ ರಂಜಾನ್ ಸಂದರ್ಭದಲ್ಲಿ ದಾಳಿ ಮಾಡದಂತೆ ಆದೇಶ ನೀಡುವಂತೆ ಕೇಳಿಸುತ್ತಿದೆ ಎಂದು ಕಟಕಿಯಾಡಿದ್ದಾರೆ.

ಕೇಂದ್ರ ಸರ್ಕಾರ ಒಪ್ಪಬಾರದು

ಕೇಂದ್ರ ಸರ್ಕಾರ ಒಪ್ಪಬಾರದು

ಯಾವ ಅವಧಿಗಳಿದ್ದರೂ ಅವರು ಉಗ್ರರೇ ಆಗಿರುತ್ತಾರೆ. ಕಳೆದ ವರ್ಷ ಕಾರ್ಯಾಚರಣೆ ನಡೆಸದೆ ಬಿಟ್ಟಿದ್ದರಿಂದ ಭಾರತೀಯ ಸೇನೆ ಪರಿಣಾಮ ಎದುರಿಸುವಂತಾಗಿತ್ತು. ಕೇಂದ್ರ ಸರ್ಕಾರ ಇದಕ್ಕೆ ಒಪ್ಪಬಾರದು. ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದ್ದಾರೆ.

English summary
Jammu and Kashmir former Chief Minister Mehbooba Mufti appealed the terrorists to not to make any attack during Ramadan time, faces criticizes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X