ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರಕ್ಕೆ ನಾಳೆ ಭರ್ಜರಿ ಗಿಫ್ಟ್ ನೀಡಲಿದೆಯಾ ಸರ್ಕಾರ?

|
Google Oneindia Kannada News

ನವದೆಹಲಿ, ಆಗಸ್ಟ್ 27: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಇದೀಗ ಕಣಿವೆ ನಾಡಿಗೆ ಭರ್ಜರಿ ಗಿಫ್ಟ್ ವೊಂದನ್ನು ನೀಡಲು ಕೇಮದ್ರ ಸರ್ಕಾರ ಮುಂದಾಗಿದೆ ಎಂದು 'ಜೀ' ಮೀಡಿಯಾ ವರದಿ ಮಾಡಿದೆ. ಸರ್ಕಾರದ ಮೂಲಗಳು ಈ ಕುರಿತು ತನಗೆ ತಿಳಿಸಿವೆ ಎಂದು ಅದು ಹೇಳಿದೆ.

ಬುಧವಾರ ದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರೀ ಅನುದಾನವನ್ನು ಸರ್ಕಾರ ನೀಡಬಹುದು ಎನ್ನಲಾಗಿದೆ.

ಕಾಶ್ಮೀರದಲ್ಲಿ 40 ನಾಯಕರು, ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ವಶಕ್ಕೆ ಕಾಶ್ಮೀರದಲ್ಲಿ 40 ನಾಯಕರು, ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ವಶಕ್ಕೆ

370 ನೇ ವಿಧಿಯ ರದ್ದತಿಯ ನಂತರ ಕಣಿವೆ ರಾಜ್ಯದಲ್ಲಿ ಹಿಂಸಾತ್ಮಕ ಘಟನೆಗಳು ಸಂಭವಿಸಿಲ್ಲ. ಆದರೆ ಅಲ್ಲಿ ಎಲ್ಲೆಲ್ಲೂ ಬಿಗಿಬಂದೋಬಸ್ತ್ ಕೈಗೊಂದಿರುವುದು ಮತ್ತು, ಪ್ರಚೋದನಾತ್ಮಕ ವರ್ತನೆಯಲ್ಲಿ ತೊಡಗುವ ಸಂದೇಹವಿರುವವರನ್ನು ಮೊದಲೇ ಬಂಧಿಸಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮುಂದೆಯೂ ಕಣಿಯೆ ಸಹಜ ಸ್ಥಿತಿಯಲ್ಲಿ ಇರಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.

Jammu And Kashmir May Get Big Package From Centre

ಕಾಶ್ಮೀರಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ, ಸೇನೆಯಲ್ಲಿ ಮತ್ತಷ್ಟು ಹುದ್ದೆಗಳಲ್ಲಿ ಕಾಶ್ಮೀರಿಗಳನ್ನು ನೇಮಿಸುವುದು, ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ ಸೇರಿದಂತೆ ಹಲವು ವಿಷಯಗಳಲ್ಲಿ ಬದಲಾವಣೆ ತರು ಸರ್ಕಾರ ಚಿಂತಿಸುತ್ತಿದ್ದು, ಮಂಗಳವಾರ ಸರ್ಕಾರದ ನಿಯೋಗವೊಂದು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದೆ ಎನ್ನಲಾಗಿದೆ.

ಕಾಶ್ಮೀರ ವಿವಾದ: ಮೋದಿ ಖಡಕ್ ಮಾತಿಗೆ ಡೊನಾಲ್ಡ್ ಟ್ರಂಪ್ ಥಂಡಾ!ಕಾಶ್ಮೀರ ವಿವಾದ: ಮೋದಿ ಖಡಕ್ ಮಾತಿಗೆ ಡೊನಾಲ್ಡ್ ಟ್ರಂಪ್ ಥಂಡಾ!

ಬುಧವಾರ ಅಪರಾಹ್ನ 4:30ಕ್ಕೆ ಸಭೆ ನಡೆಯಲಿದ್ದು, ಸಭೆಯ ನಂತರ ಕಾಶ್ಮೀರಕ್ಕೆ ಭರ್ಜರಿ ಅನುದಾನ ನೀಡುವ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ.

English summary
Some media sources reported, Jammu and Kashmir may get big package from central government on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X