ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ. 31ರಿಂದ ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಅಧಿಕೃತ ಕೇಂದ್ರಾಡಳಿತ ಪ್ರದೇಶಗಳು

|
Google Oneindia Kannada News

ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಅಕ್ಟೋಬರ್ 30: ಭಾರತದಲ್ಲಿ ಬುಧವಾರ ಕಳೆದು, ಗುರುವಾರ ಕಣ್ತೆರೆಯುತ್ತಿದ್ದಂತೆ ಒಂದು ರಾಜ್ಯ ಕಡಿಮೆ ಆಗಲಿದೆ. ಎರಡು ಕೇಂದ್ರಾಡಳಿತ ಪ್ರದೇಶಗಳು ಹೆಚ್ಚಾಗಲಿವೆ. ಅಕ್ಟೋಬರ್ 31ನೇ ತಾರೀಕಿನಿಂದ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಅಧಿಕೃತವಾಗಿ ಎರದು ಕೇಂದ್ರಾಡಳಿತ ಪ್ರದೇಶವಾಗಲಿದೆ.

ಅ. 10ರಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ ಜಮ್ಮು- ಕಾಶ್ಮೀರಅ. 10ರಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ ಜಮ್ಮು- ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಗುಜರಾತ್ ನ ಮಾಜಿ ಅಧಿಕಾರಿ ಜಿ. ಸಿ. ಮುರ್ಮು ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಆಗಿದ್ದಾರೆ. ಇನ್ನು ಬೌದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ರಾಧಾ ಕೃಷ್ಣ ಮಾಥುರ್ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಲಿದ್ದಾರೆ.

Jammu and Kashmir, Ladakh New Union Territories Come In To Existence From October 31st

ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಯಾವುದೇ ವಿಧಾನಸಭೆ ಇಲ್ಲ. ಕೇಂದ್ರ ಗೃಹ ಸಚಿವಾಲಯವೇ ಲೆಫ್ಟಿನೆಂಟ್ ಗವರ್ನರ್ ಮೂಲಕ ನೇರವಾಗಿ ಆಡಳಿತ ನಡೆಸುತ್ತದೆ. ಇನ್ನು ಕಾಶ್ಮೀರದಲ್ಲಿ ವಿಧಾನಸಭೆ ಇರಲಿದ್ದು, ದೆಹಲಿ ಮಾದರಿಯಲ್ಲಿ ಆಡಳಿತ ಕೆಲಸ ಮಾಡುತ್ತದೆ. ಜಮ್ಮು ಮತ್ತು ಕಾಶ್ಮೀರ್ ಪುನಾರಚನೆ ಕಾಯ್ದೆ, 2019ರ ನಿಯಮಾನುಸಾರ ನಡೆಯಲಿದ್ದು, ಅಧಿಸೂಚನೆ ಹೊರಡಿಸಬೇಕಿದೆ.

ಆಸಕ್ತಿಕರ ಸಂಗತಿ ಏನೆಂದರೆ, ಸರ್ದಾರ್ ವಲ್ಲಭ ಭಾಯ್ ಪಟೇಲ್ ಜನ್ಮದಿನವಾದ- ರಾಷ್ಟ್ರೀಯ ಏಕತಾ ದಿನಾಚರಣೆಯಂದು ಈ ಎರಡೂ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬರಲಿವೆ.

English summary
From October 31st onward Jammu and Kashmir no more state. Jammu and Kashmir, Ladakh two separate union territories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X