ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂದಕಕ್ಕೆ ಬಸ್ ಉರುಳಿ ಭೀಕರ ಅಪಘಾತ: 32 ಮಂದಿ ದುರ್ಮರಣ

|
Google Oneindia Kannada News

ಶ್ರೀನಗರ, ಜುಲೈ 1: ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 32 ಮಂದಿ ದುರ್ಮರಣ ಹೊಂದಿದ್ದಾರೆ. 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್, ಕಿಶ್ತ್‌ವಾರ್ ಬಳಿಯ ಆಳವಾದ ಕಂದಕಕ್ಕೆ ಉರುಳಿ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬೈಕ್‌ಗೆ ಡಿಕ್ಕಿಯಾಗಿ ಎರಡು ಬಾರಿ ಪಲ್ಟಿ ಹೊಡೆದ ಎಸ್‌ಯುವಿ ಕಾರು : ನಾಲ್ವರು ಸಾವುಬೈಕ್‌ಗೆ ಡಿಕ್ಕಿಯಾಗಿ ಎರಡು ಬಾರಿ ಪಲ್ಟಿ ಹೊಡೆದ ಎಸ್‌ಯುವಿ ಕಾರು : ನಾಲ್ವರು ಸಾವು

ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ ಇನ್ನೂ ಹೆಚ್ಚಲಿದೆ ಎಂದು ಹೇಳಲಾಗಿದೆ. ಜೆಕೆ17-6787 ಸಂಖ್ಯೆಯ ಖಾಸಗಿ ಮಿನಿಬಸ್ ಕೇಶ್ವಾನ್‌ ಎಂಬಲ್ಲಿಂದ ಕಿಶ್ತ್‌ವಾರ್‌ಗೆ ತೆರಳುತ್ತಿತ್ತು. ಶ್ರಿಗ್ವಾರಿ ಬಳಿ ಕಿರಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದೆ. ಈ ಬಸ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು ಎನ್ನಲಾಗಿದೆ. ಬಸ್‌ನಲ್ಲಿ ಸುಮಾರು 45 ಪ್ರಯಾಣಿಕರಿದ್ದು, ಇದು ಬಸ್‌ನ ಸಾಮರ್ಥ್ಯಕ್ಕಿಂತಲೂ ಅಧಿಕವಾಗಿತ್ತು.

jammu and kashmir Kishtwar mini bus gorge accident many killed

ಸೋಮವಾರ ಬೆಳಿಗ್ಗೆ 7.30ರ ವೇಳೆಗೆ ಈ ದುರಂತ ಸಂಭವಿಸಿದೆ. ಭಾರಿ ಆಳವಾದ ಕಂದಕದೊಳಗೆ ಬಸ್ ಉರುಳಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕ್ಲಿಷ್ಟಕರವಾಗಿ. ಪೊಲೀಸರು ಹಾಗೂ ಆಡಳಿತ ವರ್ಗದೊಂದಿಗೆ ರಕ್ಷಣಾ ಕಾರ್ಯಕ್ಕೆ ಸ್ಥಳೀಯರು ಕೈಜೋಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ: ಉತ್ತರಾಖಂಡ ಸಚಿವರ ಪುತ್ರ ನಿಧನ ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ: ಉತ್ತರಾಖಂಡ ಸಚಿವರ ಪುತ್ರ ನಿಧನ

ಸುಮಾರು 20 ಪ್ರಯಾಣಿಕರ ಮೃತದೇಹವನ್ನು ಕಂದಕದಿಂದ ಹೊರಕ್ಕೆ ತೆಗೆಯಲಾಗಿದೆ. ಗಾಯಗೊಂಡ ಐವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಮೇಲೆಕ್ಕೆತ್ತಿ ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ಯಲು ಹೆಲಿಕಾಪ್ಟರ್ ಸೌಲಭ್ಯ ಒದಗಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

English summary
At least 32 people killed and more than 13 injured when an overloaded mini bus fell into a deep gorge in Kishtwar District of Jammu and Kashmir on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X