ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರ: ಉದ್ಯಮ ಸ್ಥಾಪನೆಗೆ 3 ಸಾವಿರ ಎಕರೆ ಭೂಮಿ ಹಸ್ತಾಂತರ

|
Google Oneindia Kannada News

ಶ್ರೀನಗರ, ಅಕ್ಟೋಬರ್ 31: ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಯಮ ಸ್ಥಾಪನೆಗೆ ಜಮ್ಮು ಕಾಶ್ಮೀರ ಸರ್ಕಾರ 3 ಸಾವಿರ ಕೋಟಿ ಹಸ್ತಾಂತರಿಸಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನೂತನ ಭೂ ಕಾಯ್ದೆ ಪರಿಚಯಿಸಿದ ಕೆಲವೇ ದಿನಗಳಲ್ಲಿ ಇಲ್ಲಿನ ಸರ್ಕಾರ 3 ಸಾವಿರ ಎಕರೆ ಭೂಮಿಯನ್ನು ಉದ್ಯಮಕ್ಕಾಗಿ ಕಾಯ್ದಿರಿಸಿದೆ.

'ಜಮ್ಮು ಮತ್ತು ಕಾಶ್ಮೀರ ಮಾರಾಟಕ್ಕಿದೆ!''ಜಮ್ಮು ಮತ್ತು ಕಾಶ್ಮೀರ ಮಾರಾಟಕ್ಕಿದೆ!'

ಕೊವಿಡ್ 19 ಪರಿಸ್ಥಿತಿಯ ನಡುವೆಯೂ ಸುಮಾರು 65 ಬೃಹತ್ ಉದ್ಯಮ ಸಂಸ್ಥೆಗಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉದ್ಯಮ ಚಟುವಟಿಕೆ ವಿಸ್ತರಿಸುವ ಸಂಬಂಧ ಜಮ್ಮು ಕಾಶ್ಮೀರದ ಸರ್ಕಾರದ ಜೊತೆ ನಿರಂತರ ಮಾತುಕತೆಯಲ್ಲಿ ತೊಡಗಿದೆ.

Jammu And Kashmir Govt Transfers 3,000 Acres Of Land To Industries And Commerce Department

ಈಗ ಹಸ್ತಾಂತರಿಸಲಾಗಿರುವ ಜಮ್ಮು ವಲಯದ ಭೂಮಿಯು ಜಮ್ಮು, ಕತುವಾ, ಉದಂಪುರ್, ಸಾಂಬಾ, ರಜೌರಿ, ಪೂಂಚ್ ಜಿಲ್ಲೆಗಳು ಮತ್ತು ಕಾಶ್ಮೀರ ವಿಭಾಗದ ಶ್ರೀನಗರ, ಬಾರಾಮುಲ್ಲಾ,ಬುದ್ಗಾಂ, ಅನಂತ್‌ನಾಗ್ ಜಿಲ್ಲೆಗಳಿವೆ. ಜಮ್ಮು ಮತ್ತು ಕಾಶ್ಮೀರ ಸದ್ಯ ಉದ್ಯಮ ಸ್ಥಾಪನೆಗಾಗಿ ಇಲಾಖೆ ಸುಪರ್ದಿಯಲ್ಲಿ 242.25 ಎಕರೆ ಭೂಮಿಯಷ್ಟೇ ಇದ್ದು,ಆಹಾರ ಸಂಸ್ಕರಣೆ, ಚಿತ್ರನಿರ್ಮಾಣ ಕೇಂದ್ರಗಳು ಇನ್ನಿತರೆ ಹೂಡಿಕೆದಾರರನ್ನು ಸೆಳೆಯುತ್ತಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ವರ್ಷ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ, ಯಾವುದೇ ರಾಜ್ಯದ ನಿವಾಸಿಯು ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಿರಾಸ್ತಿ ಮತ್ತು ಭೂಮಿಯನ್ನು ಖರೀದಿ ಮಾಡಬಹುದು ಎಂದು ಹೇಳಿದೆ. ದೇಶದ ಉಳಿದ ಭಾಗಗಳೊಂದಿಗೆ ಕೇಂದ್ರಾಡಳಿತ ಪ್ರದೇಶವನ್ನು ಸೇರ್ಪಡೆಗೊಳಿಸಿರುವುದರಿಂದ ಉಳಿದೆಲ್ಲ ಭಾಗಗಳಿಗೆ ಅನ್ವಯವಾಗುವ ಕಾನೂನುಗಳುಇಲ್ಲಿ ಕೂಡ ಅನ್ವಯವಾಗಲಿದೆ.

ವಿಶೇಷ ಸ್ಥಾನಮಾನ ಹೊಂದಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಆ ರಾಜ್ಯದ ನಿವಾಸಿಗಳ ಹೊರತಾಗಿ ಬೇರೆ ಯಾರೂ ಭೂಮಿ ಖರೀದಿ ಮಾಡುವಂತಿರಲಿಲ್ಲ. ಈಗ ಗೆಜೆಟ್ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಕಾಯ್ದೆಯಲ್ಲಿನ ಸೆಕ್ಷನ್ 17ರಲ್ಲಿನ 'ರಾಜ್ಯದ ಕಾಯಂ ನಿವಾಸಿ' ಎಂಬ ವಾಕ್ಯಗಳನ್ನು ತೆಗೆದುಹಾಕಿದೆ.

English summary
Just three days after the Centre issued new land laws for Jammu and Kashmir, the Union Territory (UT) government has transferred 24,000 kanals (3,000 acres) of land to Industries and Commerce department for investment purposes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X