• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು ಕಾಶ್ಮೀರದಲ್ಲಿ ಚೀನಾದ ಸಹಾಯದಿಂದ ಮತ್ತೆ 370ನೇ ವಿಧಿ ಜಾರಿ: ಫಾರೂಕ್ ಅಬ್ಲುಲ್ಲಾ

|

ಶ್ರೀನಗರ, ಅಕ್ಟೋಬರ್ 12: ಚೀನಾದ ಸಹಾಯದಿಂದ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಪುನಃಸ್ಥಾಪಿಸುತ್ತೇವೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿಕೆ ನೀಡಿದ್ದಾರೆ.

5 ಆಗಸ್ಟ್ 2019 ರಂದು 370ನೇ ವಿಧಿ ತೆಗೆದುಹಾಕಲು ತೆಗೆದುಕೊಂಡ ನಿರ್ಧಾರವನ್ನು ಎಂದಿಗೂ ಒಪ್ಪಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಯಾವುದೇ ಉದ್ವಿಗ್ನ ಪರಿಸ್ಥಿತಿ ಏನಿದೆಯೋ ಇದಕ್ಕೆಲ್ಲಾ 370ನೇ ವಿಧಿ ರದ್ದತಿಯೇ ಕಾರಣ . ಚೀನಾ ಈ ನಿರ್ಧಾರವನ್ನು ಎಂದಿಗೂ ಸಮ್ಮತಿಸಿರಲಿಲ್ಲ ಚೀನಾದ ಸಹಾಯದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಪುನಃಸ್ಥಾಪಿಸಲಾಗುವುದು ಎಂದು ನಾನು ಭಾವಿಸುತ್ತೇನೆ ಎಂದರು.

370 ನೇ ವಿಧಿ ರದ್ದಾದ ತಕ್ಷಣ ಜಮ್ಮು ಮತ್ತು ಕಾಶ್ಮೀರದ ಉನ್ನತ ರಾಜಕಾರಣಿಗಳೆಲ್ಲರನ್ನು ಗೃಹಬಂಧನದಲ್ಲಿರಿಸಲಾಗಿತ್ತು. ಫಾರೂಕ್ ಅಬ್ದುಲ್ಲಾ, ಅವರ ಪುತ್ರ ಮತ್ತು ಮಾಜಿ ಸಿಎಂ ಒಮರ್ ಅಬ್ದುಲ್ಲಾ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಸೇರಿದಂತೆ ಎಲ್ಲ ರಾಜಕಾರಣಿಗಳನ್ನು 370 ನೇ ವಿಧಿ ರದ್ದಾದ ನಂತರ ಬಂಧನದಲ್ಲಿಡಲಾಗಿತ್ತು ಫಾರೂಕ್ ಅಬ್ದುಲ್ಲಾ ಪ್ರಸ್ತುತ ಶ್ರೀನಗರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಕೇಂದ್ರ ಸರ್ಕಾರದಲ್ಲಿ ಸಹ ಬಹುಕಾಲ ಸೇವೆ ಸಲ್ಲಿಸಿದ್ದರು.

ಪ್ರಧಾನಿ ಮೋದಿ ಅವರು ಚೀನಾದ ಅಧ್ಯಕ್ಷರನ್ನು ಆಹ್ವಾನಿಸಿದ್ದಾರೆ ಹೊರತು ನಾನೆಂದೂ ಚೀನಾ ಅಧ್ಯಕ್ಷರನ್ನು ಭಾರತಕ್ಕೆ ಕರೆದಿಲ್ಲಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಚೀನಾ ಅಧ್ಯಕ್ಷರನ್ನು ಭಾರತಕ್ಕೆ ಆಹ್ವಾನಿಸಿದ ವ್ಯಕ್ತಿ ಪಿಎಂ ನರೇಂದ್ರ ಮೋದಿ. ಅವರು ಚೀನಾದ ಅಧ್ಯಕ್ಷರನ್ನುರತ್ನಗಂಬಳಿ ಹಾಕಿ ಸ್ವಾಗತಿಸಿದ್ದರು.

ಅವರೊಂಡನೆ ಚೆನ್ನೈ ಸುತ್ತಿದ್ದರು. ಆದರೆ ನಾನೊಬ್ಬ ಸಂಸದರಾಗಿದ್ದರೂ . ಅಧಿವೇಶನದಲ್ಲಿ ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗಳ ಕುರಿತು ಮಾತನಾಡಲು ನನಗೆ ಅವಕಾಶ ನೀಡಿಲ್ಲವೆಂದು ಅವರು ಆರೋಪಿಸಿದ್ದಾರೆ.

English summary
Farooq Abdullah, leader of the National Conference and former Chief Minister of Jammu and Kashmir, has given a controversial statement regarding Article 370. He has expressed hope that China can help in the restoration of Article 370 in Jammu and Kashmir. Along with this, he has described those who supported this move of Modi government as traitors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X