ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ನೇ ಹಂತ: 90 ಲೋಕಸಭಾ ಕ್ಷೇತ್ರಗಳಲ್ಲಿ ಶೂನ್ಯ ಮತದಾನ

|
Google Oneindia Kannada News

ಶ್ರೀನಗರ, ಏಪ್ರಿಲ್ 19 : ಲೋಕಸಭೆ ಚುನಾವಣೆ 2019ರ ಎರಡನೇ ಹಂತದಲ್ಲಿ ದೇಶದ ಹಲವೆಡೆ ಶೇಕಡಾವಾರು ಮತದಾನದಲ್ಲಿ ಹೆಚ್ಚಿನ ಪ್ರಮಾಣ ಕಂಡು ಬಂದಿಲ್ಲ. ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲೂ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಗುರುವಾರದಂದು ಶ್ರೀನಗರ ಮತ್ತು ಉದಾಮ್​​ಪುರ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಸಲಾಯಿತು. ಈ ಎರಡು ಕ್ಷೇತ್ರಗಳಲ್ಲಿ ಪ್ರಮುಖವಾಗಿ ಈದ್ಗಾ, ಖನ್ಯಾರ್‌, ಹಬ್ಬಾ ಕದಲ್‌ ಸೇರಿದಂತೆ ಹಲವೆಡೆ 90ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಶೂನ್ಯ ಮತದಾನ ದಾಖಲಾಗಿದೆ. ಅದರಲ್ಲೂ, ಶ್ರೀನಗರ ವ್ಯಾಪ್ತಿಯಲ್ಲಂತೂ 50 ಮತಗಟ್ಟೆ ಕೇಂದ್ರಗಳು ತೆರೆದಿದ್ದರೂ ಜನ ಮತ ಹಾಕಲು ಬಾರದೆ ಶೂನ್ಯ ಮತದಾನ ದಾಖಲಾಗಿದೆ ಎನ್ನಲಾಗಿದೆ.

ಮೈಸೂರಿನಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಲು ಕಾರಣ ಇದೇನಾ? ಮೈಸೂರಿನಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಲು ಕಾರಣ ಇದೇನಾ?

Jammu and Kashmir Elections 2019: 90 Polling Booths Draw Zero Votes

ಸೋನವರ್ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಅವರು ಮತ ಹಾಕಿದರು. ಐದ್ಗಾದಲ್ಲಿ ಶೇ3.3 ಹಾಗೂ ಸೋನ್ ವಾರ್ ನಲ್ಲಿ ಶೇ12ರಷ್ಟು ಮತದಾನವಾಗಿದೆ. ಗಂದರ್ ಬಾಲ್ ಜಿಲ್ಲೆಯ 27 ಮತಗಟ್ಟೆಯಲ್ಲಿ ಶೂನ್ಯ ಮತದಾನವಾಗಿದೆ. ಛಾದೂರಾದಲ್ಲಿ ಶೇ9.2, ಛಾರಾರ್ ಇ ಷರೀಫ್ ಶೇ 31.1ರಲ್ಲಿ ಗರಿಷ್ಠ ಮತದಾನವಾಗಿದೆ.

English summary
As many as 90 polling booths, mostly in downtown city, saw no voting in Thursday's elections to the Srinagar Parliamentary seat, sources said. Srinagar recorded zero turnout in as many as 50 polling booths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X