ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಡಿಸಿ ಚುನಾವಣೆ: ಬಿಜೆಪಿ ಪ್ರಣಾಳಿಕೆಯಲ್ಲಿ 70,000 ಉದ್ಯೋಗ ಭರವಸೆ

|
Google Oneindia Kannada News

ಜಮ್ಮು, ನವೆಂಬರ್ 27: ಕಳೆದ ವರ್ಷದ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಜಿಲ್ಲಾ ಅಭಿವೃದ್ಧಿ ಸಮಿತಿಗಳಿಗೆ (ಡಿಡಿಸಿ) ನವೆಂಬರ್ 28 ರಿಂದ ಡಿಸೆಂಬರ್ 19ರವರೆಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಡಿಡಿಸಿ ಚುನಾವಣೆ ಸಂಬಂಧ ಬಿಜೆಪಿ ಗುರುವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಸ್ಥಳೀಯರಿಗೆ ಶೇ 100ರಷ್ಟು ಮೀಸಲಾತಿಯೊಂದಿಗೆ 70,000 ಉದ್ಯೋಗಗಳ ಭರವಸೆಯನ್ನು ನೀಡಿದೆ. ಖಾಸಗಿ ವಲಯದಲ್ಲಿಯೂ ಉದ್ಯೋಗ ಭರವಸೆಯನ್ನು ನೀಡಿದೆ. ಜತೆಗೆ ಕೈಗಾರಿಕಾ ಸ್ನೇಹಿ ನೀತಿ ಮತ್ತು ಸ್ವಚ್ಛ, ಪಾರದರ್ಶಕ ಹಾಗೂ ಹೊಣೆಗಾರಿಕೆಯುತ ಆಡಳಿತವನ್ನು ನಡೆಸುವ ಆಶ್ವಾಸನೆ ನೀಡಿದೆ.

ಜಮ್ಮು ಕಾಶ್ಮೀರ: ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತೆ ಬಂಧನ ಜಮ್ಮು ಕಾಶ್ಮೀರ: ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತೆ ಬಂಧನ

ಜಮ್ಮು ಮತ್ತು ಕಾಶ್ಮೀರದಲ್ಲಿನ ಶತ್ರುಗಳನ್ನು ಪತ್ತೆಹಚ್ಚಿ ಅವರನ್ನು ನಿಯಂತ್ರಿಸಿರುವುದರಿಂದ 'ಕಲ್ಲು ತೂರಾಟದ ಯುಗ' ಅಂತ್ಯಗೊಂಡಿದೆ ಎಂದಿರುವ ಬಿಜೆಪಿ, ಒತ್ತುವರಿದಾರರಿಂದ ಭೂಮಿಯನ್ನು ಮರಳಿ ಪಡೆಯುವ ಮತ್ತು ಭಯೋತ್ಪಾದನೆ ಹಾಗೂ ಹಿಂಸಾಚಾರದೆಡೆಗಿನ ಶೂನ್ಯ ಸಹಿಷ್ಣುತೆಯನ್ನು ಪ್ರತಿಪಾದಿಸಿದೆ.

ಮತ್ತೆ ಮೂವರು ಪಿಡಿಪಿ ನಾಯಕರ ರಾಜೀನಾಮೆ: ಮೆಹಬೂಬಾ ಮುಫ್ತಿಗೆ ಹಿನ್ನಡೆ

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ದೇವಿಂದರ್ ಸಿಂಗ್ ಮನ್ಯಾಲ್ ಮತ್ತು ಮುಖ್ಯ ವಕ್ತಾರ ಸುನೀಲ್ ಸೇತಿ ಅವರು ಡಿಡಿಸಿ ಚುನಾವಣೆಯ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಮತ್ತೆ ಮೂವರು ಪಿಡಿಪಿ ನಾಯಕರ ರಾಜೀನಾಮೆ: ಮೆಹಬೂಬಾ ಮುಫ್ತಿಗೆ ಹಿನ್ನಡೆ ಮತ್ತೆ ಮೂವರು ಪಿಡಿಪಿ ನಾಯಕರ ರಾಜೀನಾಮೆ: ಮೆಹಬೂಬಾ ಮುಫ್ತಿಗೆ ಹಿನ್ನಡೆ

ಬಿಜೆಪಿಯ ಪ್ರಣಾಳಿಕೆ ಪ್ರಕಾರ 70,000 ಉದ್ಯೋಗಗಳನ್ನು ಗುರುತಿಸಲಾಗಿದೆ. ಶೇ 100ರಷ್ಟು ಸರ್ಕಾರಿ ಉದ್ಯೋಗಗಳನ್ನು ಮೀಸಲಿರಿಸುವುದರಿಂದ ಸ್ಥಳೀಯ ಜನರಿಗೆ ಅನುಕೂಲವಾಗಲಿದೆ. ಕೈಗಾರಿಕಾ ನೀತಿಯು ಕೇಂದ್ರಾಡಳಿತ ಪ್ರದೇಶದಲ್ಲಿನ ಕೈಗಾರಿಕಾ ಪರಿಸರವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಿದೆ ಎಂದು ಹೇಳಿದೆ. ದಿನಗೂಲಿ ಕಾರ್ಮಿಕರು, ಸಾಮಾನ್ಯ ಮತ್ತು ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವ ಭರವಸೆಯನ್ನು ಕೂಡ ನೀಡಿದೆ.

English summary
Jammu And Kashmir DDC Polls: BJP has released its election manifesto promising 70,000 jobs with 100 percent reservation to locals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X