ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರ ಡಿಡಿಸಿ ಚುನಾವಣೆ: ಮತ ಎಣಿಕೆ ಆರಂಭ

|
Google Oneindia Kannada News

ಶ್ರೀನಗರ, ಡಿಸೆಂಬರ್ 22: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಂಡು ವರ್ಷದ ಬಳಿಕ ನಡೆದ ಮೊದಲ ಸ್ಥಳೀಯ ಚುನಾವಣೆಯ ಮತ ಎಣಿಕೆ ಮಂಗಳವಾರ ಶುರುವಾಗಿದೆ. ಜಮ್ಮು ಮತ್ತು ಕಾಶ್ಮೀರ ಜಿಲ್ಲಾಭಿವೃದ್ಧಿ ಸಮಿತಿಗಳಿಗೆ (ಡಿಡಿಸಿ) ಎಂಟು ಹಂತಗಳಲ್ಲಿ ಚುನಾವಣೆ ನಡೆದಿತ್ತು. ನವೆಂಬರ್ 28ರಿಂದ ಡಿಸೆಂಬರ್ 19ರವರೆಗೆ ಚುನಾವಣೆ ನಡೆದಿದ್ದು, 450 ಮಹಿಳೆಯರು ಸೇರಿದಂತೆ 4,181 ಅಭ್ಯರ್ಥಿಗಳು 280 ಸೀಟುಗಳಿಗೆ ಸ್ಪರ್ಧಿಸಿದ್ದಾರೆ. ಎಲ್ಲ 20 ಜಿಲ್ಲೆಗಳಲ್ಲಿ ಬೆಳಿಗ್ಗೆ 9 ಗಂಟೆಯಿಂ ಮತದಾನ ಆರಂಭವಾಗಿದೆ.

ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಅಲೈಯನ್ಸ್ ಸೇರಿದಂತೆ ಕಾಶ್ಮೀರ ಕೇಂದ್ರಿತ ಮುಖ್ಯವಾಹಿನಿ ಏಳು ರಾಜಕೀಯ ಪಕ್ಷಗಳು ಸೇರಿ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲೇರೇಷನ್ (ಪಿಎಜಿಡಿ) ಎಂಬ ಹೆಸರಿನಡಿ ಈ ಚುನಾವಣೆಯಲ್ಲಿ ಸ್ಪರ್ಧಿಸಿವೆ. ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರಳಿ ತರುವ ಸಂಬಂಧ ಈ ಒಕ್ಕೂಟವನ್ನು ರಚಿಸಲಾಗಿದೆ. ಪಿಎಜಿಡಿ ಈ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ, ಬಿಜೆಪಿ ಎರಡನೆಯ ಸ್ಥಾನದಲ್ಲಿ ಹಾಗೂ ಕಾಂಗ್ರೆಸ್ ಮೂರನೇ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಇದು ಇಂದಿನ ಫಲಿತಾಂಶದಲ್ಲಿ ಗೊತ್ತಾಗಲಿದೆ.

ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಮಗುಚಿ ಬಿದ್ದ ದೋಣಿಬಿಜೆಪಿ ಚುನಾವಣಾ ಪ್ರಚಾರದ ವೇಳೆ ಮಗುಚಿ ಬಿದ್ದ ದೋಣಿ

ಮತ ಎಣಿಕೆಯ ಹಿಂದಿನ ದಿನವಾದ ಸೋಮವಾರ, ತನ್ನ ಮೂವರು ಮುಖಂಡರನ್ನು ಬಂಧಿಸಲಾಗಿದೆ ಎಂದು ಪಿಡಿಪಿ ಆರೋಪಿಸಿದೆ. ಫಲಿತಾಂಶವನ್ನು ಬದಲಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಇದು ಗೂಂಡಾ ರಾಜ್ ಕೃತ್ಯ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಆರೋಪಿಸಿದ್ದಾರೆ.

Jammu And Kashmir DDC Election Results: Counting Of Votes Underway

57 ಲಕ್ಷ ಅರ್ಹ ಮತದಾರರಲ್ಲಿ ಶೇ 51ರಷ್ಟು ಮಂದಿ ಮತ ಚಲಾಯಿಸಿದ್ದಾರೆ. ಕೊನೆಯ ಎರಡು ಹಂತಗಳಲ್ಲಿ ಕೆಲವು ಕಡೆ ಅಹಿತಕರ ಘಟನೆಗಳು ನಡೆದಿದ್ದು ಬಿಟ್ಟರೆ, ಮತದಾನ ಶಾಂತಯುತವಾಗಿ ನಡೆದಿತ್ತು.

ಮತ್ತೆ ಗೃಹ ಬಂಧನ: ಮೆಹಬೂಬ ಮುಫ್ತಿ ಆರೋಪಮತ್ತೆ ಗೃಹ ಬಂಧನ: ಮೆಹಬೂಬ ಮುಫ್ತಿ ಆರೋಪ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯಲ್ಲಿನ ಮೆಂಧಾರ್ ಪ್ರದೇಶದಲ್ಲಿ ಸೋಮವಾರ ಮರು ಮತದಾನ ನಡೆದಿದೆ. ಏಳನೇ ಹಂತದ ಚುನಾವಣೆ ವೇಳೆ ಹಿಂಸಾಚಾರ ನಡೆದ ಕಾರಣ ಇಲ್ಲ ಮರುಮತದಾನ ನಡೆದಿದೆ. ಮತ ಎಣಿಕೆ ನಡೆಯುವ ಎಲ್ಲ ಸ್ಥಳಗಳಲ್ಲಿಯೂ ಬಿಗಿ ಭದ್ರತೆ ನಿಯೋಜಿಸಲಾಗಿದೆ.

English summary
Counting of votes in Jammu and Kashmir for DDC Elections which held in 8 phases begin on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X