ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಡಿಸಿ ಚುನಾವಣೆ: ಕಾಶ್ಮೀರ ಗುಪ್ಕರ್ ಅಲೈಯನ್ಸ್‌ಗೆ, ಜಮ್ಮು ಬಿಜೆಪಿ ತೆಕ್ಕೆಗೆ

|
Google Oneindia Kannada News

ಶ್ರೀನಗರ, ಡಿಸೆಂಬರ್ 23: ಕುತೂಹಲ ಮೂಡಿಸಿದ್ದ ಜಮ್ಮು ಮತ್ತು ಕಾಶ್ಮೀರದ ಜಿಲ್ಲಾಭಿವೃದ್ಧಿ ಸಮಿತಿ ಚುನಾವಣೆಯಲ್ಲಿ (ಡಿಡಿಸಿ) ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ನೇತೃತ್ವದ ಗುಪ್ಕರ್ ಅಲೈಯನ್ಸ್ 280 ಸೀಟುಗಳ ಪೈಕಿ 112 ಸೀಟುಗಳಲ್ಲಿ ಗೆಲುವು ಮತ್ತು ಮುನ್ನಡೆ ಸಾಧಿಸುವ ಮೂಲಕ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ. ಆದರೆ ಕಣಿವೆ ರಾಜ್ಯದಲ್ಲಿ ಕಮಲ ಮೇಲುಗೈ ಸಾಧಿಸಿದೆ. ಏಕಾಂಗಿಯಾಗಿ ಹೋರಾಡಿದ ಬಿಜೆಪಿ 74 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಕಾಂಗ್ರೆಸ್ 26 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನದ ರದ್ದತಿ ಬಳಿಕ ಇದೇ ಮೊದಲ ಬಾರಿ ಡಿಡಿಸಿ ಚುನಾವಣೆ ನಡೆದಿದ್ದು, 370ನೇ ವಿಧಿಯನ್ನು ಮರಳಿ ಸ್ಥಾಪಿಸುವ ಶಪಥದೊಂದಿಗೆ ಫಾರೂಕ್ ಅಬ್ದುಲ್ಲಾ ನೇತೃತ್ವದಲ್ಲಿ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮತ್ತು ಇತರೆ ಸ್ಥಳೀಯ ಪಕ್ಷಗಳು ಕೈಜೋಡಿಸಿ ಗುಪ್ಕರ್ ಅಲೈಯನ್ಸ್ (ಪಿಎಜಿಡಿ) ಒಕ್ಕೂಟ ರಚಿಸಿ ಚುನಾವಣೆ ಎದುರಿಸಿವೆ.

ಜಮ್ಮು ಕಾಶ್ಮೀರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿರುವ ಬಿಜೆಪಿಜಮ್ಮು ಕಾಶ್ಮೀರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿರುವ ಬಿಜೆಪಿ

ಬುಧವಾರದವರೆಗೆ ನಡೆದ ಮತ ಎಣಿಕೆಯಲ್ಲಿ ಗುಪ್ಕರ್ ಅಲೈಯನ್ಸ್ 100 ಕ್ಷೇತ್ರಗಳಲ್ಲಿ ಗೆದ್ದಿದ್ದು, 12ರಲ್ಲಿ ಮುನ್ನಡೆ ಸಾಧಿಸಿದೆ ಎಂದು ಕೇಂದ್ರಾಡಳಿತ ಪ್ರದೇಶ ಚುನಾವಣಾ ಆಯೋಗ ತಿಳಿಸಿದೆ. ಎಲ್ಲ ಪ್ರಮುಖ ರಾಜಕೀಯ ಪಕ್ಷಗಳಿಂದ ಬಂಡಾಯವೆದ್ದು ಸ್ವತಂತ್ರವಾಗಿ ಸ್ಪರ್ಧಿಸಿದವರೇ ಹೆಚ್ಚಿರುವ 49 ಮಂದಿ ಪಕ್ಷೇತರರರು ಜಯಗಳಿಸಿದ್ದು, ಇನ್ನೂ ಆರು ಮಂದಿ ಮುನ್ನಡೆ ಸಾಧಿಸಿದ್ದಾರೆ.

Jammu And Kashmir DDC Election Results: BJP Wins 74 Seats, Gupkar Alliance Grabs Over 100

ಜಮ್ಮುವಿನಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ. ಇಲ್ಲಿ ಕನಿಷ್ಠ ಆರು ಜಿಲ್ಲಾಭಿವೃದ್ಧಿ ಸಮಿತಿಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಕಾಶ್ಮೀರದಲ್ಲಿ ಸಂಪೂರ್ಣ ಮುಗ್ಗರಿಸಿದ್ದು, ಒಂದೂ ಜಿಲ್ಲಾ ಸಮಿತಿಯಲ್ಲಿ ಅಧಿಕಾರಕ್ಕೆ ಬಂದಿಲ್ಲ. ಆದರೆ ಕಣಿವೆಯಲ್ಲಿ ಪಿಎಡಿಜಿ 9ರಲ್ಲಿ ಗೆಲುವು ಕಂಡಿದೆ. ಐದು ಸಮಿತಿಗಳಲ್ಲಿ ಬಹುಮತದ ಬಗ್ಗೆ ಸ್ಪಷ್ಟನೆ ದೊರಕಿಲ್ಲ. ಇಲ್ಲಿ ಪಕ್ಷೇತರರು ಕಿಂಗ್ ಮೇಕರ್‌ಗಳಾಗಲಿದ್ದಾರೆ.

English summary
Jammu and Kashmir DDC Election Results 2020: BJP has won 74 seats and Gupkar alliance grabbed over 100 of 280 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X