ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರ ಚುನಾವಣೆ ಫಲಿತಾಂಶ: ಬಿಜೆಪಿಗೆ ಆರಂಭಿಕ ಮುನ್ನಡೆ

|
Google Oneindia Kannada News

ಶ್ರೀನಗರ, ಡಿಸೆಂಬರ್ 22: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಂಡು ವರ್ಷದ ಬಳಿಕ ನಡೆದ ಮೊದಲ ಸ್ಥಳೀಯ ಚುನಾವಣೆಯ ಮತ ಎಣಿಕೆ ಮಂಗಳವಾರ ಶುರುವಾಗಿದ್ದು, ಆರಂಭದ ಸುತ್ತುಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಅಲೈಯನ್ಸ್ ಸೇರಿದಂತೆ ಕಾಶ್ಮೀರ ಕೇಂದ್ರಿತ ಮುಖ್ಯವಾಹಿನಿ ಏಳು ರಾಜಕೀಯ ಪಕ್ಷಗಳು ಸೇರಿ ರಚಿಸಿರುವ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲೇರೇಷನ್ (ಪಿಎಜಿಡಿ) ಎದುರು ಬಿಜೆಪಿ ಗಮನಾರ್ಹ ಮುನ್ನಡೆ ಸಾಧಿಸಿದೆ.

ಅನೇಕ ಕ್ಷೇತ್ರಗಳಲ್ಲಿ ಪಿಎಜಿಡಿಗಿಂತ ಬಿಜೆಪಿ ಮುನ್ನಡೆ ಸಾಧಿಸಿದೆ. ಇದುವರೆಗೂ ಬಿಜೆಪಿ 38 ಸೀಟುಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಪಿಎಜಿಡಿ 36 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ 12ರಲ್ಲಿ ಮುನ್ನಡೆ ಸಾಧಿಸಿವೆ. ಬೆಳಿಗ್ಗೆ 11.30ರ ವೇಳೆಗೆ ಪಿಎಜಿಡಿ ಒಂದು ಕ್ಷೇತ್ರದಲ್ಲಿ ಗೆಲುವು ಕಂಡಿದೆ. ಜೆಕೆಎಪಿ 4 ಮತ್ತು ಇತರರು ಒಂದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಡಿಡಿಸಿ ಚುನಾವಣೆ: ಮತ ಎಣಿಕೆ ಆರಂಭಜಮ್ಮು ಮತ್ತು ಕಾಶ್ಮೀರ ಡಿಡಿಸಿ ಚುನಾವಣೆ: ಮತ ಎಣಿಕೆ ಆರಂಭ

ಕುಲ್ಗಾಂ ಜಿಲ್ಲೆಯಲ್ಲಿ 25 ಸೀಟುಗಳಿಗೆ ಚುನಾವಣೆ ನಡೆದಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಹಿನ್ನಡೆ ಅನುಭವಿಸಿದೆ. ಸಾಂಬಾದಲ್ಲಿ 10 ಸೀಟುಗಳ ಪೈಕಿ 5ರಲ್ಲಿ ಬಿಜೆಪಿ ಮುನ್ನಡೆ ಪಡೆದುಕೊಂಡಿದೆ.

Jammu And Kashmir DDC Election Results: BJP Leading Over PAGD

ಜಮ್ಮು ಮತ್ತು ಕಾಶ್ಮೀರ ಜಿಲ್ಲಾಭಿವೃದ್ಧಿ ಸಮಿತಿಗಳಿಗೆ (ಡಿಡಿಸಿ) ಎಂಟು ಹಂತಗಳಲ್ಲಿ ಚುನಾವಣೆ ನಡೆದಿತ್ತು. ನವೆಂಬರ್ 28ರಿಂದ ಡಿಸೆಂಬರ್ 19ರವರೆಗೆ ಚುನಾವಣೆ ನಡೆದಿದ್ದು, 450 ಮಹಿಳೆಯರು ಸೇರಿದಂತೆ 4,181 ಅಭ್ಯರ್ಥಿಗಳು 280 ಸೀಟುಗಳಿಗೆ ಸ್ಪರ್ಧಿಸಿದ್ದಾರೆ.

English summary
Jammu And Kashmir DDC Election Results: BJP is leading in 38 and Gupkar Alliance leading in 36 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X