ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರ ಡಿಸಿಸಿ ಚುನಾವಣೆ; ಬಿಜೆಪಿ v/s ಪಿಎಜಿಡಿ ಮೈತ್ರಿಕೂಟ

|
Google Oneindia Kannada News

ಶ್ರೀನಗರ, ನವೆಂಬರ್ 29 : ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿ ಬಳಿಕ ಮೊದಲ ಬಾರಿಗೆ ನಡೆಯುತ್ತಿರುವ ಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಜೆಪಿ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ 100ರಷ್ಟು ಮೀಸಲಾತಿ ಘೋಷಣೆ ಮಾಡಿದೆ.

ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಸಿಸಿ) ಚುನಾವಣೆಯು ನವೆಂಬರ್ 28ರಿಂದ ಡಿಸೆಂಬರ್ 22ರ ತನಕ ನಡೆಯಲಿದೆ. 20 ಜಿಲ್ಲೆಗಳಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, 280 ಅಭ್ಯರ್ಥಿಗಳನ್ನು ಜನರು ಆಯ್ಕೆ ಮಾಡಲಿದ್ದಾರೆ.

370 ವಿಧಿ ರದ್ದತಿ ಬಳಿಕ ಜಮ್ಮು & ಕಾಶ್ಮೀರದಲ್ಲಿ ಮೊದಲ ಚುನಾವಣೆ: ಎಷ್ಟು ಕ್ಷೇತ್ರ? ಎಷ್ಟು ಅಭ್ಯರ್ಥಿಗಳು?370 ವಿಧಿ ರದ್ದತಿ ಬಳಿಕ ಜಮ್ಮು & ಕಾಶ್ಮೀರದಲ್ಲಿ ಮೊದಲ ಚುನಾವಣೆ: ಎಷ್ಟು ಕ್ಷೇತ್ರ? ಎಷ್ಟು ಅಭ್ಯರ್ಥಿಗಳು?

ಡಿಸಿಸಿ ಚುನಾವಣೆ ಬಿಜೆಪಿ ಮತ್ತು ಇತರ ಎಲ್ಲಾ ಪಕ್ಷಗಳ ನಡುವಿನ ಹೋರಾಟವಾಗಿದೆ. 370ನೇ ವಿಧಿ ರದ್ಧತಿ ಮಾಡಿರುವುದನ್ನು ವಿರೋಧಿಸಿದ ಪಕ್ಷಗಳು ಈಗ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ನಿಂತಿವೆ. ಮೂವರು ಮಾಜಿ ಮುಖ್ಯಮಂತ್ರಿಗಳು ಸಹ ಬಿಜೆಪಿಯನ್ನು ವಿರೋಧಿಸುತ್ತಿದ್ದಾರೆ.

ಜಮ್ಮು ಕಾಶ್ಮೀರ: ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತೆ ಬಂಧನ ಜಮ್ಮು ಕಾಶ್ಮೀರ: ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತೆ ಬಂಧನ

Jammu And Kashmir DDC Election Fight Between BJP And All Other Parties

ಬಿಜೆಪಿ ವಿರೋಧಿಗಳೆಲ್ಲ ಸೇರಿಕೊಂಡು ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ (ಪಿಎಜಿಡಿ) ರಚನೆ ಮಾಡಿಕೊಂಡಿದ್ದಾರೆ. ಫಾರೂಕ್ ಅಬ್ದುಲ್ಲಾ ಇದರ ಅಧ್ಯಕ್ಷರಾಗಿದ್ದು, ಮೆಹಬೂಬಾ ಮಫ್ತಿ ಉಪನಾಯಕಿಯಾಗಿದ್ದಾರೆ. ಪಿಡಿಪಿ, ಪಿಸಿ, ಕಾಂಗ್ರೆಸ್ ಇದರಲ್ಲಿ ಸೇರಿಕೊಂಡಿವೆ.

ಜಮ್ಮು ಮತ್ತು ಕಾಶ್ಮೀರ: ಉದ್ಯಮ ಸ್ಥಾಪನೆಗೆ 3 ಸಾವಿರ ಎಕರೆ ಭೂಮಿ ಹಸ್ತಾಂತರ ಜಮ್ಮು ಮತ್ತು ಕಾಶ್ಮೀರ: ಉದ್ಯಮ ಸ್ಥಾಪನೆಗೆ 3 ಸಾವಿರ ಎಕರೆ ಭೂಮಿ ಹಸ್ತಾಂತರ

ಜಮ್ಮುವಿನಲ್ಲಿ ಬಿಜೆಪಿ ಅಷ್ಟೊಂದು ಪ್ರಬಲವಾಗಿಲ್ಲ. ಆದರೆ, ಪಿಎಜಿಡಿಯಲ್ಲಿರುವ ಪಕ್ಷಗಳು ಪ್ರಬಲವಾಗಿವೆ. ಜಮ್ಮುವಿನಲ್ಲಿ ಹೊಸದಾಗಿ ಕೆಲವು ಪಕ್ಷಗಳು ಉದಯವಾಗಿದ್ದು, ಅವುಗಳು ಪಿಎಜಿಡಿಗೆ ಸೇರ್ಪಡೆಗೊಂಡಿಲ್ಲ. ಆದರೆ, ಅವುಗಳು ಬಿಜೆಪಿಯನ್ನು ಬೆಂಬಲಿಸುತ್ತಿಲ್ಲ ಎಂಬುದು ಗಮನಾರ್ಹವಾದ ಅಂಶವಾಗಿದೆ.

ಹೊಸದಾಗಿ ರಚನೆಗೊಂಡ ಪಕ್ಷಗಳು ಜಮ್ಮುವಿನ ಮೇಲೆ ಹೆಚ್ಚಿನ ಗಮನವನ್ನು ಹರಿಸುತ್ತಿವೆ. ಇವುಗಳಲ್ಲಿ ಬಿಜೆಪಿಯ ಮಾಜಿ ನಾಯಕ ಲಾಲ್ ಸಿಂಗ್ ಸ್ಥಾಪನೆ ಮಾಡಿದ ಡಿಎಸ್‌ಎಸ್ ಸಹ ಸೇರಿದೆ. ಲಾಲ್ ಸಿಂಗ್ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರದಲ್ಲಿ ಸಚಿವರೂ ಸಹ ಆಗಿದ್ದರು. ಆದರೆ, ಅವರು ಬಿಜೆಪಿ ಬೆಂಲಿಸುತ್ತಿಲ್ಲ.

Jammu And Kashmir DDC Election Fight Between BJP And All Other Parties

ಸಾಮಾಜಿಕ ಸಂಘಟನೆಯಾಗಿ 2018ರಿಂದ ಕೆಲಸ ಮಾಡುತ್ತಿದ್ದ ಡಿಎಸ್ಎಸ್ ಕತುವಾ ಅತ್ಯಾಚಾ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯ ಮಾಡುತ್ತಿತ್ತು. ಅದು ಈಗ ರಾಜಕೀಯ ಪಕ್ಷವಾಗಿದೆ. ಪಿಎಜಿಡಿಯಲ್ಲಿರುವ ಪಕ್ಷಗಳು 370ನೇ ವಿಧಿ ರದ್ಧತಿಯನ್ನು ವಿರೋಧಿಸುತ್ತಿಲ್ಲ. ಆದರೆ, ಜಮ್ಮು ಮತ್ತು ಕಾಶ್ಮೀರವನ್ನು ವಿಭಜನೆ ಮಾಡಿದ್ದನ್ನು ಮುಖ್ಯ ವಿಷಯವಾಗಿ ಮಾಡಿಕೊಂಡಿವೆ.

ಶಿವಸೇನೆ ಸೇರಿದಂತೆ ಚಿಕ್ಕ ಪಕ್ಷಗಳು ಚುನಾವಣೆಯನ್ನು ಬಹಿಷ್ಕಾರ ಮಾಡಿವೆ. ಈ ಪಕ್ಷಗಳು ಚುನಾವಣೆಯಲ್ಲಿ ಮಹತ್ವದ ಬದಲಾವಣೆ ತರುವುದಿಲ್ಲ ಎಂಬುದು ಬಿಜೆಪಿ ನಾಯಕರ ವಾದ. ಆದರೆ, ಪ್ರತ್ಯೇಕ ಜಮ್ಮು ಮತ್ತು ಕಾಶ್ಮೀರ ವಿಚಾರದ ಬಗ್ಗೆ ಇವುಗಳು ಪ್ರಚಾರ ಮಾಡಬಹುದು ಎಂಬ ಚಿಂತೆ ಬಿಜೆಪಿಗೆ ಇದೆ.

ಬಿಜೆಪಿ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಚುನಾವಣಾ ತಂತ್ರವನ್ನು ಮಾಡಿದೆ. ಒಂದು ಕಡೆ ಮುಸ್ಲಿಂಮರ ಪ್ರಾಬಲ್ಯ ಹೆಚ್ಚಿದ್ದರೆ ಮತ್ತೊಂದು ಕಡೆ ಪಂಡಿತ್‌ಗಳ ಪ್ರಾಬಲ್ಯ ಹೆಚ್ಚಿದೆ. ಬಿಜೆಪಿ-ಪಿಡಿಪಿ ಸರ್ಕಾರವಿದ್ದಾಗ ಮಖ್ಯಮಂತ್ರಿ ಅವಧಿ ಪೂರ್ಣಗೊಳಿಸಲು ಬಿಡಲಿಲ್ಲ ಎಂಬುದು ಚುನಾವಣಾ ವಿಚಾರವಾಗಿದೆ.

"ಪಿಎಜಿಡಿ ಮೈತ್ರಿಕೂಟ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶದಲ್ಲಿ ಹೆಚ್ಚಿನ ಮತಗಳನ್ನು ಪಡೆಯಬಹುದು. ಬಿಜೆಪಿ ವಿರುದ್ಧ ಹೋರಾಡುತ್ತಿರುವ ಪಕ್ಷಗಳಿಗೆ ಜಮ್ಮುವಿನಲ್ಲಿ ಮಾತ್ರ ಭದ್ರವಾದ ನೆಲೆ ಇದೆ" ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಪಿಎಜಿಡಿ ಮೈತ್ರಿಕೂಟ ಚುನಾವಣಾ ವಿಚಾರವಾಗಿ ಬಳಕೆ ಮಾಡುತ್ರಿರುವ ವಿಚಾರವನ್ನು ಬಿಜೆಪಿ ಬಳಸುತ್ತಿಲ್ಲ. ಪಕ್ಷ ಉದ್ಯೋಗ, ಮೀಸಲಾತಿ ಮುಂತಾದ ವಿಚಾರವನ್ನು ಜನರ ಮುಂದೆ ಇಡುತ್ತಿದೆ. ಹೊರ ರಾಜ್ಯದವರು, ಕಾರ್ಪೊರೇಟ್ ಕಂಪನಿಗಳು ಬಂದರೆ ಏನಾಗಲಿದೆ? ಎಂದು ಮೈತ್ರಿಕೂಟ ಜನರ ಮುಂದೆ ಹೋಗುತ್ತಿದೆ.

ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಚುನಾವಣೆ ರಾಜ್ಯದ ಹೊರಗಿನ ವಿಚಾರಗಳ ಬಗ್ಗೆ ನಡೆಯುತ್ತಿದೆ. ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರ ವಿಚಾರ ಈ ಚುನಾವಣೆಯಲ್ಲಿ ಮುಖ್ಯವಾಗಿಲ್ಲ. ಡಿಸೆಂಬರ್ 22ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಪಂಚಾಯತ್ ರಾಜ್ ಕಾಯ್ದೆ 1989ರ ತಿದ್ದುಪಡಿಗೆ ಒಪ್ಪಿಗೆ ನೀಡಿತ್ತು. ಇದರ ಮೂಲಕವೇ ಈಗ ಚುನಾವಣೆ ನಡೆಯುತ್ತಿದ್ದು, 20 ಜಿಲ್ಲೆಗಳಿಂದ 280 ಅಭ್ಯರ್ಥಿಗಳು ಜನರಿಂದ ನೇರವಾಗಿ ಆಯ್ಕೆಯಾಗಲಿದ್ದಾರೆ.

English summary
District Development Council (DDC) election in Jammu and Kashmir is going to be a fight between BJP and all other parties. Election will be held for elect 280 candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X