ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣಿವೆ ರಾಜ್ಯದಲ್ಲಿ 13 ಉಗ್ರರನ್ನು ಸದೆಬಡಿದ ಭಾರತೀಯ ಸೇನೆ

|
Google Oneindia Kannada News

ಶ್ರೀನಗರ, ಜೂನ್ 1: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ 13 ಉಗ್ರರನ್ನು ಸದೆಬಡಿದಿದ್ದಾರೆ.

ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ನಲ್ಲಿ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಗಡಿ ನುಸುಳಲು ಪ್ರಯತ್ನಿಸುತ್ತಿದ್ದ ಮೂವರು ಭಯೋತ್ಪಾದಕರನ್ನು ಭಾರತೀಯ ಯೋಧರು ಹತ್ಯೆ ಮಾಡಿದ್ದರು.

ಉಗ್ರರ ಲಾಂಚ್‌ ಪ್ಯಾಡ್‌ಗಳು ಭರ್ತಿ, ದಾಳಿಗೆ ಪಾಕ್‌ ಹುನ್ನಾರ: ಭಾರತೀಯ ಸೇನೆ ಎಚ್ಚರಿಕೆಉಗ್ರರ ಲಾಂಚ್‌ ಪ್ಯಾಡ್‌ಗಳು ಭರ್ತಿ, ದಾಳಿಗೆ ಪಾಕ್‌ ಹುನ್ನಾರ: ಭಾರತೀಯ ಸೇನೆ ಎಚ್ಚರಿಕೆ

ಮೆಂಧರ್-ಪೂಂಚ್ ಪ್ರದೇಶದ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಭಾರತೀಯ ಯೋಧರು 13 ಮಂದಿ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ನಂತರ ಮೆಂಧರ್ ನಲ್ಲಿ 10 ಭಯೋತ್ಪಾದಕರನ್ನು ಸೇನೆ ಎನ್ ಕೌಂಟರ್ ಮಾಡಿ ಪರಾಕ್ರಮ ಮೆರೆದಿದ್ದು ಇದೇ ವೇಳೆ ಪೂಂಚ್ ಜಿಲ್ಲೆಯ ಗಡಿ ಭಾಗದ ಕೆಲ ಹಳ್ಳಿಗಳಲ್ಲಿ ಶೋಧ ಕಾರ್ಯ ಮುಂದುವರೆಸಿದೆ.

Jammu And Kashmir 13 Terrorists Killed Along LoC In Mendhar Poonch

ಇನ್ನೊಂದೆಡೆ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಹಳಸಿ ಹೋಗಿದೆ. ಎರಡೂ ಸೇನೆಯು ಯುದ್ಧಕ್ಕಾಗಿ ಕಾದು ಕುಳಿತಿದೆ. ಚೀನಾ ಮಾತ್ರ ಕೇವಲ ಮಾತಿನಿಂದಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದರೂ ಕೂಡ ಶಸ್ತ್ರಾಸ್ತ್ರಗಳನ್ನು ಗಡಿಯತ್ತ ತರಿಸಿಕೊಂಡಿದೆ. ಇದಕ್ಕೆ ಭಾರತವು ನಾವು ಏನು ಕಡಿಮೆ ಇಲ್ಲ ಎಂಬಂತೆ ಶಸ್ತ್ರಾಸ್ತ್ರದೊಂದಿಗೆ ಯುದ್ಧಕ್ಕೆ ಸಜ್ಜುಗೊಂಡಿದ್ದಾರೆ.

ಪಾಕ್‌ ಆಕ್ರಮಿತ ಕಾಶ್ಮೀರ(ಪಿಒಕೆ)ಯಲ್ಲಿ ಇರುವಂತಹ ಉಗ್ರರ ಶಿಬಿರಗಳು ಮತ್ತು 15 ಲಾಂಚ್‌ಪ್ಯಾಡ್‌ಗಳು ತುಂಬಿವೆ, ಯಾವುದೇ ಕ್ಷಣದಲ್ಲಿ ಬೇಕಾದರೂ ಉಗ್ರರು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಮುಂದಾಗಬಹುದು ಎಂದು ಭಾರತೀಯ ಸೇನೆ ಎಚ್ಚರಿಸಿದೆ.

'ಜಮ್ಮು ಮತ್ತು ಕಾಶ್ಮೀರದ ಗಡಿಯುದ್ಧಕ್ಕೂ ಈ ಬೇಸಿಗೆಯಲ್ಲಿ ಒಳನುಸುಳುವಿಕೆ ಪ್ರಯತ್ನಗಳು ಹೆಚ್ಚಾಗುವುದನ್ನು ನಿರೀಕ್ಷಿಸುತ್ತೇವೆ' ಎಂದು ಸೇನೆಯ ಉನ್ನತ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿ.ಎಸ್ ರಾಜು ಹೇಳಿದ್ದಾರೆ.

English summary
The Indian army neutralised 13 terrorists along the Line of Control (LoC) in Jammu and Kashmir's Mendhar-Poonch region on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X