ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿಗೆ ಜೈಷ್ ಉಗ್ರ ಸಂಘಟನೆ ವ್ಯಯಿಸಿದ್ದ ಹಣವೆಷ್ಟು?

|
Google Oneindia Kannada News

ಶ್ರೀನಗರ, ಆಗಸ್ಟ್ 27: ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯು ಪುಲ್ವಾಮಾ ದಾಳಿಗೆ 5.7 ಲಕ್ಷ ರೂ ವೆಚ್ಚ ಮಾಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಅಷ್ಟು ಹಣವನ್ನು ವ್ಯಾನ್‌ ಹಾಗೂ ಸ್ಫೋಟಕ ಸಾಮಗ್ರಿಗಳನ್ನು ಖರೀದಿ ಗೆ ವೆಚ್ಚ ಮಾಡಲಾಗಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.

ಪುಲ್ವಾಮಾ ದಾಳಿಕೋರನಿಗೆ ರೊಟ್ಟಿ ತಟ್ಟಿ ಕೊಟ್ಟಿದ್ದಾಕೆ ಇವಳು! ಪುಲ್ವಾಮಾ ದಾಳಿಕೋರನಿಗೆ ರೊಟ್ಟಿ ತಟ್ಟಿ ಕೊಟ್ಟಿದ್ದಾಕೆ ಇವಳು!

ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರುವರಿ 14ರಂದು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಆತ್ಮಹತ್ಯಾ ದಾಳಿ ನಡೆಸಿತ್ತು. ಈ ಘಟನೆಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.

ದಾಳಿಗೆ ಬಳಕೆ ಮಾಡಿದ್ದ ಮಾರುತಿ ಇಕೋ ವ್ಯಾನ್‌ ಅನ್ನು 1.85 ಲಕ್ಷ ರೂ.ಗೆ ಖರೀದಿ ಮಾಡಲಾಗಿತ್ತು. ಇದರಲ್ಲಿ ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುವ ಸಲುವಾಗಿ 35 ಸಾವಿರ ರೂ. ಖರ್ಚು ಮಾಡಿ ವ್ಯಾನ್‌ ಅನ್ನು ಮಾರ್ಪಾಡು ಮಾಡಲಾಗಿತ್ತು.

Jaish Terrorist Group Spent 5.7 Lakhs On Van, Explosives For Pulwama Attack

2.25 ಲಕ್ಷಕ್ಕೆ ರೂ.ಗೆ ಎರಡು ಐಇಡಿ (ಸುಧಾರಿತ ಸ್ಫೋಟಕ ಸಾಮಗ್ರಿ) ಹಾಗೂ ಆನ್‌ಲೈನ್‌ ಮೂಲಕ 30 ಸಾವಿರ ರೂ. ಮೌಲ್ಯದ ಅಲ್ಯೂಮಿನಿಯಂ ಖರೀದಿ ಮಾಡಲಾಗಿತ್ತು. ಇತರೆ ವೆಚ್ಚಗಳಿಗೆ 32 ಸಾವಿರ ರೂ. ವ್ಯಯಿಸಲಾಗಿತ್ತು. ಈ ದಾಳಿಗೆ 5.7 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ದಾಖಲಾಗಿದೆ.

ಪುಲ್ವಾಮಾ ದಾಳಿ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎಪುಲ್ವಾಮಾ ದಾಳಿ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ

2019ರ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಉಮರ್‌ ಫಾರೂಕ್‌ ಬ್ಯಾಂಕ್‌ ಖಾತೆಗೆ ಪಾಕಿಸ್ತಾನದ ಅಲೈದ್‌ ಹಾಗೂ ಮೀಜಾದ್‌ ಬ್ಯಾಂಕಿನಿಂದ 10 ಲಕ್ಷ ರೂಪಾಯಿ ಸಂದಾಯವಾಗಿರುವುದನ್ನು ಎನ್ಐಎ ಪತ್ತೆ ಮಾಡಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಈ ದಾಳಿ ಪ್ರಕರಣದ ತನಿಖೆ ನಡೆಸಿತ್ತು. ಬುಧವಾರ ಜಮ್ಮುವಿನ ವಿಶೇಷ ಕೋರ್ಟ್‌ನಲ್ಲಿ ಜೈಷ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸೇರಿದಂತೆ 19 ಜನರ ವಿರುದ್ಧ ಎನ್ಐಎ ದೋಷಾರೋಪ ಪಟ್ಟಿ ಸಲ್ಲಿಸಿದೆ. ಒಟ್ಟು 13,500 ಪುಟಗಳ ದೋಷಾರೋಪ ಪಟ್ಟಿಯನ್ನು ದಾಖಲಿಸಲಾಗಿದೆ.

ಈ ದಾಳಿಯ ರೂವಾರಿ ಉಗ್ರ ಮಸೂದ್ ಅಜರ್ ಅಳಿಯ ಉಮರ್‌ ಫಾರೂಕ್‌ ಎಲ್ಲಾ ಖರ್ಚು ವೆಚ್ಚಗಳನ್ನು ನೋಡಿಕೊಂಡಿದ್ದ ಎಂದು ದಾಖಲಿಸಲಾಗಿದೆ.

English summary
The experts at AIIMS asserted on Thursday that manifestations of COVID-19 virus goes far beyond pulmonary complications that previous studies suggested. The virus may also cause simple Anosmia to life-threatening Encephalopathy or sudden cardiac arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X