ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಗರದಲ್ಲಿ ಮತ್ತೆ ಉಗ್ರರ ದಾಳಿ: ಉತ್ತರ ಪ್ರದೇಶದ ಕಾರ್ಮಿಕ ಸಾವು

|
Google Oneindia Kannada News

ಶ್ರೀನಗರ, ಅಕ್ಟೋಬರ್ 17: ಶ್ರೀನಗರದಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರೆದಿದ್ದು ಇಂದು ಬೆಳ್ಳಂಬೆಳಗ್ಗೆ ಮತ್ತೋರ್ವ ವ್ಯಾಪಾರಿ ಮೇಲೆ ದಾಳಿ ಮಾಡಲಾಗಿದೆ. ಮೊನ್ನೆಯಷ್ಟೇ ಪಾನಿಪೂರಿ ವ್ಯಾಪಾರಿ ಮೇಲೆ ಗುಂಡಿನ ದಾಳಿ ಮಾಡಿದ ಉಗ್ರರು ಇಂದು ಕಾರ್ಮಿಕನನ್ನು ಬಲಿ ಪಡೆದಿದ್ದಾರೆ. ಕಳೆದ ಒಂದು ವಾರದಲ್ಲಿ ಎರಡನೇ ದಾಳಿ ಇದಾಗಿದೆ. ಬಿಹಾರ ಮೂಲದ ಬೀದಿ ಬದಿ ವ್ಯಾಪಾರಿ ಬಳಿಕ ಉತ್ತರ ಪ್ರದೇಶದ ಒಬ್ಬ ಕಾರ್ಮಿಕ ಶನಿವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ.

ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಶನಿವಾರ ಸಂಜೆ 6.40 ರ ಸುಮಾರಿಗೆ ನಡೆದಿದ್ದು, ಶಂಕಿತ ಭಯೋತ್ಪಾದಕರು 36 ವರ್ಷದ ಅರವಿಂದ್ ಕುಮಾರ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ನಂತರ ಕುಮಾರ್ ಅವರನ್ನು ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ (ಎಸ್‌ಎಮ್‌ಹೆಚ್‌ಎಸ್) ಚಿಕಿತ್ಸೆಗಾಗಿ ಕರೆತರಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಅರವಿಂದ ಕುಮಾರ್ ಮೂಲತಃ ಬಿಹಾರದ ಬಂಕಾದವರು. ಶ್ರೀನಗರದಲ್ಲಿ ಬೀದಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದರು. ಕುಮಾರ್ ಅವರ ತಂದೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಮೂರು ತಿಂಗಳ ಹಿಂದೆ ಜೀವನೋಪಾಯಕ್ಕಾಗಿ ಶ್ರೀನಗರಕ್ಕೆ ವಲಸೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಇದೇ ಪ್ರದೇಶದಲ್ಲಿ ಇನ್ನೊಬ್ಬ ಬೀದಿ ವ್ಯಾಪಾರಿ ವೀರೇಂದ್ರ ಪಾಸ್ವಾನ್ ಎಂಬಾತನನ್ನು ಈ ತಿಂಗಳ ಆರಂಭದಲ್ಲಿ ಭಯೋತ್ಪಾದಕರು ಕೊಂದಿದ್ದರು.

ಮಾಜಿ ಮುಖ್ಯಮಂತ್ರಿ ಖಂಡನೆ

ಈ ದಾಳಿಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, "ಇಂದು ಶ್ರೀನಗರದಲ್ಲಿ ನಡೆದ ಭೀಕರ ದಾಳಿಯಲ್ಲಿ ಬೀದಿ ಬದಿ ವ್ಯಾಪಾರಿ ಅರವಿಂದ್ ಕುಮಾರ್ ಹತ್ಯೆಯನ್ನು ಬಲವಾಗಿ ಖಂಡಿಸುತ್ತೇನೆ. ಇದು ನಾಗರಿಕರನ್ನು ಈ ರೀತಿ ಗುರಿಯಾಗಿಸಿದ ಇನ್ನೊಂದು ಪ್ರಕರಣವಾಗಿದೆ. ಅರವಿಂದ್ ಕುಮಾರ್ ಹೊಟ್ಟೆಪಾಡಿಗಾಗಿ ಅವಕಾಶಗಳನ್ನು ಹುಡುಕಿಕೊಂಡು ಶ್ರೀನಗರಕ್ಕೆ ಬಂದಿದಿದ್ದರು ಆತನನ್ನು ಹತ್ಯೆ ಮಾಡಿರುವುದು ಖಂಡನೀಯ" ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಶಂಕಿತ ಭಯೋತ್ಪಾದಕರು ಪುಲ್ವಾಮಾದಲ್ಲಿ ಸಗೀರ್ ಅಹ್ಮದ್ ಮೇಲೆ ಗುಂಡು ಹಾರಿಸಿದ್ದರು. ಉತ್ತರ ಪ್ರದೇಶದ ಸಹರಾನ್ ಪುರದ ನಿವಾಸಿಯಾಗಿದ್ದ ಇವರು ಪುಲ್ವಾಮದಲ್ಲಿ ಬಡಗಿ ಕೆಲಸಗಾರರಾಗಿದ್ದರು. ದಾಳಿಯ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ.

ದಾಳಿ ಖಂಡಿಸಿದ ಮೆಹಬೂಬಾ ಮುಫ್ತಿ

ದಾಳಿಗೆ ಪ್ರತಿಕ್ರಿಯಿಸಿದ ಮಾಜಿ ಜೆ & ಕೆ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ನಲ್ಲಿ, "ಒಬ್ಬ ಅಮಾಯಕ ನಾಗರೀಕ ತನ್ನ ಹೆಂಡತಿ ಮತ್ತು ಮಕ್ಕಳಿಗಾಗಿ ಸ್ಥಳೀಯವಲ್ಲದ ಬೀದಿ ವ್ಯಾಪಾರಕ್ಕಾಗಿ ಪೂಂಚ್‌ನಲ್ಲಿ ಸೈನ್ಯವನ್ನು ಹುಡುಕುತ್ತಿದ್ದಾನೆ. ಈ ಜನರು ಯಾರೂ ಸಾಯಲು ಅರ್ಹರಲ್ಲ" ಎಂದು ಬರೆದಿದ್ದಾರೆ.

ಜೆ & ಕೆ ಎಲ್ ಜಿ ಮನೋಜ್ ಸಿನ್ಹಾ ಅವರ ಕಛೇರಿಯು ಅರವಿಂದ್ ಕುಮಾರ್ ಶಾ ಮತ್ತು ಸಗೀರ್ ಅಹ್ಮದ್ ಅವರ ಭಯೋತ್ಪಾದಕರ ಕ್ರೂರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿಕೆ ನೀಡಿತು. ಜೊತೆಗೆ "ಯುಪಿ ಸರ್ಕಾರ ದುಃಖದ ಈ ಸಮಯದಲ್ಲಿ ದುಃಖಿತ ಕುಟುಂಬಗಳೊಂದಿಗೆ ಒಗ್ಗಟ್ಟಾಗಿ ನಿಂತಿದೆ. ಈ ಘೋರ ದಾಳಿಯ ಅಪರಾಧಿಗಳಿಗೆ ಶೀಘ್ರದಲ್ಲೇ ಶಿಕ್ಷೆಯಾಗಲಿದೆ. ನಾವು ಭಯೋತ್ಪಾದಕರು ಮತ್ತು ಅವರ ಪರಿಸರವನ್ನು ಹತ್ತಿಕ್ಕುವ ಪ್ರಯತ್ನವನ್ನು ತೀವ್ರಗೊಳಿಸಿದ್ದೇವೆ. ಅವರು ಅಮಾಯಕರನ್ನು ಕೊಲ್ಲಲು ಭಾರೀ ಬೆಲೆ ತೆರಬೇಕಾಗುತ್ತದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವಂತೆ ನಾನು ಜನರನ್ನು ಕೋರುತ್ತೇನೆ "ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಪೊಲೀಸ್ ಠಾಣೆಗೆ ಗ್ರೆನೇಡ್ ದಾಳಿ

ಪೊಲೀಸ್ ಠಾಣೆಗೆ ಗ್ರೆನೇಡ್ ದಾಳಿ

ಶನಿವಾರ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಕಾಕಪೋರಾದ ಪೊಲೀಸ್ ಠಾಣೆಯ ಮೇಲೆ ಅಪರಿಚಿತ ವ್ಯಕ್ತಿಗಳು ಗ್ರೆನೇಡ್ ಎಸೆದಿದ್ದಾರೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬಿಹಾರದ ಇನ್ನೊಬ್ಬ ನಿವಾಸಿ ವೀರೇಂದ್ರ ಪಾಸ್ವಾನ್ ಅವರನ್ನು ಈ ತಿಂಗಳ ಆರಂಭದಲ್ಲಿ ಶ್ರೀನಗರದ ಮದೀನಾ ಚೌಕ್ ಲಾಲ್ಬಜಾರ್ ಬಳಿ ಭಯೋತ್ಪಾದಕರು ಹತ್ಯೆಗೈದಿದ್ದರು. ಪಾಸ್ವಾನ್ ಬಿಹಾರದ ಭಾಗಲ್ಪುರದಿಂದ ಜಮ್ಮು ಮತ್ತು ಕಾಶ್ಮೀಕರಕ್ಕೆ ಕೆಲಸ ಹುಡುಕಿಕೊಂಡು ಬಂದವರು. ಪಾಸ್ವಾನ್ ಮೇಲಿನ ದಾಳಿಯ ಜೊತೆಗೆ, ಕಳೆದ ಕೆಲವು ವಾರಗಳಲ್ಲಿ ಜೆ & ಕೆ ನಲ್ಲಿ ಇದೇ ರೀತಿಯ ದಾಳಿಯಲ್ಲಿ ಫಾರ್ಮಸಿ ಮಾಲೀಕರು ಮತ್ತು ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರು ಸೇರಿದಂತೆ ಹಲವಾರು ನಾಗರಿಕರು ಸಾವನ್ನಪ್ಪಿದ್ದಾರೆ.

 ಸರಣಿ ಎನ್‌ಕೌಂಟರ್‌ಗಳಿಗೆ ಕಾರಣವಾಗಿವೆ

ಸರಣಿ ಎನ್‌ಕೌಂಟರ್‌ಗಳಿಗೆ ಕಾರಣವಾಗಿವೆ

ಈ ದಾಳಿಗಳು ಭದ್ರತಾ ಪಡೆಗಳು ಮತ್ತು ಶಂಕಿತ ಭಯೋತ್ಪಾದಕರ ನಡುವಿನ ಸರಣಿ ಎನ್‌ಕೌಂಟರ್‌ಗಳಿಗೆ ಕಾರಣವಾಗಿವೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜೆ & ಕೆ ಇನ್ಸ್‌ಪೆಕ್ಟರ್-ಜನರಲ್ ಆಫ್ ಪೋಲಿಸ್ (ಐಜಿ) ವಿಜಯ್ ಕುಮಾರ್, ಇತ್ತೀಚಿನ ಕೆಲವು ಹತ್ಯೆಗಳಲ್ಲಿ ಭಾಗಿಯಾದ ಇಬ್ಬರು ಭಯೋತ್ಪಾದಕರನ್ನು ಶುಕ್ರವಾರ ಭದ್ರತಾ ಪಡೆಗಳೊಂದಿಗೆ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಲಾಗಿದೆ ಎಂದು ಹೇಳಿದರು.

English summary
A Uttar Pradesh worker was killed by terrorists in Jammu and Kashmir on Saturday. This is the second terror-related attack in Jammu and Kashmir in recent weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X