ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದ ಮೇಲೆ ಉಗ್ರರ ಕಳ್ಳಗಣ್ಣು: ಗುಪ್ತಚರ ಇಲಾಖೆ ಮಾಹಿತಿ

|
Google Oneindia Kannada News

ಶ್ರೀನಗರ, ಸೆಪ್ಟೆಂಬರ್ 5: ಕಣಿವೆ ರಾಜ್ಯದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐ ಈ ಪ್ರದೇಶದ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಮಾಡಲು ಭಯೋತ್ಪಾದಕರಿಗೆ ಆದೇಶ ನೀಡುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕೋಮು ಉದ್ವೇಗವನ್ನು ಸೃಷ್ಟಿಸಲು ಯೋಜಿಸುತ್ತಿದೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.

ಕಾಶ್ಮೀರದ ಬೀದಿ ನಿಶ್ಯಬ್ದವಾಗಿದೆ ಎಂದರೆ ಸಹಜ ಸ್ಥಿತಿ ಅಂತಲ್ಲ: ಶ್ರೀನಗರ ಮೇಯರ್ಕಾಶ್ಮೀರದ ಬೀದಿ ನಿಶ್ಯಬ್ದವಾಗಿದೆ ಎಂದರೆ ಸಹಜ ಸ್ಥಿತಿ ಅಂತಲ್ಲ: ಶ್ರೀನಗರ ಮೇಯರ್

ಜಮ್ಮು ಮತ್ತು ಕಾಶ್ಮೀರದ ಧಾರ್ಮಿಕ ಸ್ಥಳವನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯನ್ನು ಭಂಗಗೊಳಿಸುವ ಸಲುವಾಗಿ ಪಾಕಿಸ್ತಾನವು ಭಾರತದೊಳಗೆ ಗರಿಷ್ಠ ಭಯೋತ್ಪಾದಕರನ್ನು ಒಳನುಸುಳಲು ತೀವ್ರವಾಗಿ ಪ್ರಯತ್ನಿಸುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ.

ISI Planning Major Attack Of Terrorists In Jammu And Kashmir

ಈಗಾಗಲೇ ಅರುಣಾಚಲ ಪ್ರದೇಶದಲ್ಲಿ ಚೀನಾ ಪಡೆಗಳು ಒಳನುಗ್ಗಿವೆ ಎನ್ನುವ ಸುದ್ದಿ ಹರಿದಾಡಿತ್ತು, ಬಳಿಕ ಯಾರೂ ಭಾರತದೊಳಗೆ ನುಸುಳಿಲ್ಲ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದರು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕಾಶ್ಮೀರದಲ್ಲಿ ಬೀಡುಬಿಟ್ಟಿರುವ ಭಾರತೀಯ ಭದ್ರತಾ ಪಡೆಗಳ ವಿರುದ್ಧ ಕಾಶ್ಮೀರ ಕಣಿವೆಯಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುವುದು ಮತ್ತು ಪ್ರದೇಶದ ಜನರನ್ನು ಪ್ರಚೋದಿಸುವುದು ಐಎಸ್‌ಐ ಮುಖ್ಯ ಉದ್ದೇಶವಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಕೋಪಗೊಂಡಿರುವ ಪಾಕಿಸ್ತಾನವು ಭಾರತದ ಮೇಲೆ ಮುನಿಸಿಕೊಂಡಿದೆ. ಇದೀಗ ಉಗ್ರರು ಈ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಾಕಿಸ್ತಾನದ ಸೈನ್ಯದ ಸಹಾಯದಿಂದ ಹಗಲು ರಾತ್ರಿ ಒಳನುಗ್ಗುವ ಪ್ರಯತ್ನಗಳು ನಡೆಯುತ್ತಿವೆ. ರಾಜೌರಿಯ ಪೂಂಚ್‌ನಲ್ಲೂ ಒಳನುಸುಳುವಿಕೆ ಪ್ರಯತ್ನಗಳು ನಡೆದಿವೆ. ಈ ಪ್ರಯತ್ನಗಳಿಗೆ ಸೇನೆಯು ಸೂಕ್ತ ಉತ್ತರವನ್ನು ನೀಡಿದೆ.

ಸೆರೆಹಿಡಿದ ಭಯೋತ್ಪಾದಕರ ಬಗ್ಗೆ ನಾವು ಡಿಜಿಎಂಒ ಪಾಕಿಸ್ತಾನಕ್ಕೂ ಮಾಹಿತಿ ನೀಡಿದ್ದೇವೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

English summary
Pakistan Spy agency ISI are together aiming for a major infiltration of terrorists into the newly-created Union Territory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X