ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನದ ಮಂದಿ ಹೀಗೆಲ್ಲ ಮಾಡುತ್ತಾರಾ?

|
Google Oneindia Kannada News

ಶ್ರೀನಗರ, ಡಿಸೆಂಬರ್.03: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಇಂಟರ್ ನೆಟ್ ಮತ್ತಷ್ಟು ದಿನಗಳ ಕಾಲ ಕೆಲಸ ಮಾಡುವುದಿಲ್ಲ. ಇಂಟರ್ ನೆಟ್ ಸೇವೆಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಹೌದು, ಜಮ್ಮು-ಕಾಶ್ಮೀರದಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲು ಪಾಕಿಸ್ತಾನವೇ ಕಾರಣ ಎಂದು ಕೇಂದ್ರ ಸಚಿವ ಜಿ.ಕೃಷ್ಣನ್ ರೆಡ್ಡಿ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ಕಣಿವೆ ರಾಜ್ಯದಲ್ಲಿ ಶಾಂತಿ ಕದಡುವ ದೃಷ್ಟಿಯಿಂದ ಇಂಟರ್ ನೆಟ್ ದುರ್ಬಳಕೆ ಆಗುತ್ತಿದೆ.

ಜಮ್ಮುಕಾಶ್ಮೀರದಲ್ಲಿ ಉಗ್ರರ ದಾಳಿ, ಓರ್ವ ಯೋದ ಹುತಾತ್ಮಜಮ್ಮುಕಾಶ್ಮೀರದಲ್ಲಿ ಉಗ್ರರ ದಾಳಿ, ಓರ್ವ ಯೋದ ಹುತಾತ್ಮ

ಲೋಕಸಭೆಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಜಿ.ಕೃಷ್ಣನ್ ರೆಡ್ಡಿ, ಪಾಕಿಸ್ತಾನ್ ಜಮ್ಮು-ಕಾಶ್ಮೀರದಲ್ಲಿನ ಯುವ ಜನತೆಯನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಉಗ್ರವಾದ ಪ್ರಚೋದಿಸುವಂತಾ ಪೋಸ್ಟ್ ಗಳನ್ನು ಪಾಕಿಸ್ತಾನ್ ವೆಬ್ ಸೈಟ್ ಗಳ ಮೂಲಕ ಪೋಸ್ಟ್ ಆಗುತ್ತಿವೆ. ಇದರಿಂದ ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆಳುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.

Internet Curb in J-K Due to Anti-India Posts From Pakistan

ಆಗಸ್ಟ್.05 ರಿಂದ ಇಂಟರ್ ನೆಟ್ ಸೇವೆಯಿಲ್ಲ!

ಈ ಹಿಂದೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ಕಾಯ್ದೆ ತೆರವುಗೊಳಿಸಿದ ಸರ್ಕಾರ ಕಣಿವೆ ರಾಜ್ಯದಲ್ಲಿ ಬಿಗಿ ಭದ್ರತೆಯನ್ನು ಮಾಡಿತ್ತು. ಆಗಸ್ಟ್.05 ರಿಂದ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇತ್ತೀಚಿಗಷ್ಟೇ ಜಮ್ಮು-ಕಾಶ್ಮೀರದಲ್ಲಿ ಇಂಟರ್ ಸೇನೆ ಸೇವೆ ಪುನರ್ ಆರಂಭಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು.

ಆದರೆ, ಸಾಮಾಜಿಕ ಜಾಲತಾಣ ವಿರೋಧಿ ಪೋಸ್ಟ್ ಗಳು ಎಲ್ಲೆಡೆ ಹರಿದಾಡುತ್ತಿವೆ. ಶಾಂತಿ ಕದಡುವಂತಾ ಪೋಸ್ಟ್ ಗಳು ಪಾಕಿಸ್ತಾನ್ ಮೂಲದ ವೆಬ್ ಸೈಟ್ ಗಳಿಂದ ಹರಿದು ಬರುತ್ತಿವೆ. ಇದ ಉಗ್ರವಾದ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಿವೆ. ಇದಕ್ಕೆ ಕಡಿವಾಣ ಹಾಕಲೆಂದು ಇಂಟರ್ ನೆಟ್ ಸೇವೆ ಮೇಲಿನ ನಿರ್ಬಂಧವನ್ನು ಮುಂದುವರಿಸುವುದಾಗಿ ಕೇಂದ್ರ ಸಚಿವ ಜಿ.ಕೃಷ್ಣನ್ ರೆಡ್ಡಿ ಹೇಳಿದ್ದಾರೆ.

English summary
Internet Curb in J-K Due to Anti-India Posts From Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X